ಮೇಷ ರಾಶಿ: ಕೈಗೊಂಡ ಕೆಲಸಗಳು ಅತ್ಯಂತ ಕಷ್ಟದಿಂದ ಪೂರ್ಣಗೊಳ್ಳುತ್ತವೆ. ಸ್ಥಿರಾಸ್ತಿ ವ್ಯವಹಾರ ದಲ್ಲಿ ಹಿರಿಯರೊಂದಿಗೆ ಯೋಚಿಸಿ ಮಾತನಾಡಬೇಕು. ವೃತ್ತಿಪರ ವ್ಯವಹಾರಗಳು ಮಿಶ್ರಮವಾಗಿ ಸಾಗುತ್ತವೆ. ಉದ್ಯೋಗದಲ್ಲಿ ಅಧಿಕಾರಿಗಳಿಂದ ವಿರೋಧ ಹೆಚ್ಚಾಗುತ್ತದೆ. ಪ್ರಯಾಣಗಳು ಮುಂದೂಡಲ್ಪಡುತ್ತವೆ. ಮಕ್ಕಳ ಉದ್ಯೋಗದ ಪ್ರಯತ್ನಗಳು ನೀರುತ್ಸಾಹಗೊಳಿಸುತ್ತವೆ.
ವೃಷಭ ರಾಶಿ: ಪ್ರಮುಖ ವ್ಯವಹಾರಗಳಲ್ಲಿ ಸಹೋದರರ ಸಹಾಯದಿಂದ ಮುನ್ನಡೆಯುತ್ತೀರಿ.ಅಗತ್ಯಕ್ಕೆ ಬರಬೇಕಾದ ಹಣ ದೊರೆಯುತ್ತದೆ, ಸ್ಥಿರಾಸ್ತಿ ವಿವಾದಗಳು ಬಗೆಹರಿಯುತ್ತವೆ. ಮನೆಯ ವಾತಾವರಣವು ಸಂತೋಷದಿಂದ ಕೂಡಿರುತ್ತದೆ. ವೃತ್ತಿ ಮತ್ತು ಉದ್ಯೋಗದ ವಿಷಯದಲ್ಲಿ ಅನುಕೂಲಕರ ವಾತಾವರಣವಿರುತ್ತದೆ.ದೈವಿಕ ಕಾರ್ಯಕ್ರಮಗಳನ್ನು ನಿರ್ವಹಿಸುತ್ತೀರಿ.
ಮಿಥುನ ರಾಶಿ : ನೇತ್ರ ಸಂಬಂಧಿ ಆರೋಗ್ಯ ಸಮಸ್ಯೆಗಳು ಬಾಧಿಸುತ್ತವೆ. ಕೈಗೆತ್ತಿಕೊಂಡ ಕೆಲಸಗಳು ಮಂದಗತಿಯಲ್ಲಿ ಸಾಗುತ್ತವೆ. ಆರ್ಥಿಕವಾಗಿ ಕಷ್ಟದ ವಾತಾವರಣವಿರುತ್ತದೆ.ನಿರುದ್ಯೋಗಿಗಳು ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳುವಲ್ಲಿ ವಿಫಲರಾಗುತ್ತಾರೆ. ವೃತ್ತಿಪರ ವ್ಯವಹಾರದಲ್ಲಿ ಅಲ್ಪ ಲಾಭ ದೊರೆಯುತ್ತದೆ.
ಕಟಕ ರಾಶಿ: ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಯೋಜಿತ ಕೆಲಸಗಳಲ್ಲಿ ವಿಳಂಬ ಉಂಟಾದರೂ ನಿಧಾನವಾಗಿ ಪೂರ್ಣಗೊಳಿಸುತ್ತೀರಿ. ಹಠಾತ್ ಧನಲಾಭವುಂಟಾಗುತ್ತದೆ.ಹಣಕ್ಕೆ ಸಂಬಂಧಿಸಿದ ವಿಷಯಗಳು ತೃಪ್ತಿಕರವಾಗಿ ನಡೆಯುತ್ತವೆ. ವ್ಯವಹಾರಗಳಲ್ಲಿ ಹೊಸ ಹೂಡಿಕೆಗಳು ದೊರೆಯುತ್ತವೆ.ವೃತ್ತಿಪರ ಉದ್ಯೋಗಗಳಲ್ಲಿ ಸ್ಥಾನಮಾನಗಳು ಹೆಚ್ಚಾಗುತ್ತವೆ.
ಸಿಂಹ ರಾಶಿ: ಕೈಗೊಂಡ ಕೆಲಸಗಳು ಮಂದಗತಿಯಲ್ಲಿ ಸಾಗುತ್ತವೆ, ವ್ಯಾಪಾರದಲ್ಲಿ ಹೊಸ ಸಮಸ್ಯೆಗಳು ಕಿರಿಕಿರಿಯನ್ನುಂಟು ಮಾಡುತ್ತವೆ.ಆದಾಯಕ್ಕಿಂತ ಖರ್ಚುಗಳು ಹೆಚ್ಚಾಗುತ್ತವೆ. ಸಾಲಗಾರರಿಂದ ಒತ್ತಡ ಹೆಚ್ಚಾಗುತ್ತವೆ.ಉದರ ಸಂಬಂಧಿ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಇತರರೊಂದಿಗೆ ವಿವಾದಗಳಿಂದ ದೂರವಿರುವುದು ಉತ್ತಮ.
ಕನ್ಯಾ ರಾಶಿ: ಹಣಕಾಸಿನ ವಿಷಯದಲ್ಲಿ ಅನುಕೂಲಕರ ವಾತಾವರಣವಿರುತ್ತದೆ.ಮನೆಯಲ್ಲಿ ಶುಭ ಕಾರ್ಯ ವಿಷಯಗಳ ಬಗ್ಗೆ ಪ್ರಸ್ತಾಪವಿರುತ್ತದೆ.ಸಮಾಜದ ಪ್ರಮುಖರಿಂದ ವಿಶೇಷ ಬೆಂಬಲ ಸಿಗುತ್ತದೆ. ಮಕ್ಕಳ ,ಉದ್ಯೋಗ,ವಿವಾಹ ಪ್ರಯತ್ನಗಳು ಅನುಕೂಲಕರವಾಗಿರುತ್ತವೆ. ಬಂಧು ಮಿತ್ರರ ನೆರವಿನಿಂದ ಕೆಲವು ಕಾರ್ಯಗಳನ್ನು ಪೂರ್ಣಗೊಳಿಸುತ್ತೀರಿ. ಉದ್ಯೋಗದಲ್ಲಿ ಹೆಚ್ಚುವರಿ ಜವಾಬ್ದಾರಿಗಳಿಂದ ಮುಕ್ತಿ ಪಡೆಯುತ್ತೀರಿ.

ತುಲಾ ರಾಶಿ: ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದಿಲ್ಲ. ವೃತ್ತಿಪರ ವ್ಯವಹಾರಗಳಲ್ಲಿ ನಿಮ್ಮ ಸ್ವಂತ ಆಲೋಚನೆಗಳನ್ನು ಹೊಂದಿರುವುದು ಒಳ್ಳೆಯದು. ಉದ್ಯೋಗದಲ್ಲಿನ ಸಮಸ್ಯೆಗಳು ಪರಿಹಾರವಾಗುತ್ತವೆ. ವ್ಯಾಪಾರ ವ್ಯವಹಾರಗಳು ಆಶಾದಾಯಕವಾಗಿರುತ್ತವೆ.ಮನೆಯ ಹೊರಗೆ ಅನುಕೂಲಕರ ವಾತಾವರಣವಿರುತ್ತದೆ. ಬಂಧುಗಳೊಂದಿಗೆ ಸಣ್ಣಪುಟ್ಟ ವಿವಾದಗಳು ಉಂಟಾಗುತ್ತವೆ.
ವೃಶ್ಚಿಕ ರಾಶಿ: ಕುಟುಂಬ ಸದಸ್ಯರೊಂದಿಗೆ ವಿವಾದಗಳು ಉಂಟಾಗುತ್ತವೆ, ಕೈಗೊಂಡ ಕೆಲಸ ಮಧ್ಯದಲ್ಲಿ ನಿಲ್ಲುತ್ತವೆ.ಇತರರ ವರ್ತನೆಯಿಂದ ಮಾನಸಿಕ ಅಶಾಂತಿ ಉಂಟಾಗುತ್ತದೆ. ವೃತ್ತಿ ಪರ ವ್ಯಾಪಾರಗಳು ನಿಧಾನವಾಗುತ್ತವೆ. ಉದ್ಯೋಗ ಪ್ರಯತ್ನಗಳು ನಿರುತ್ಸಾಹಗೊಳಿಸುತ್ತವೆ. ಕುಟುಂಬದ ಸದಸ್ಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು.
ಧನುಸ್ಸು ರಾಶಿ: ದೂರ ಪ್ರಯಾಣವನ್ನು ಮುಂದೂಡುವುದು ಉತ್ತಮ. ಮಕ್ಕಳ ವ್ಯವಹಾರಗಳು ಸಮಸ್ಯಾತ್ಮಕವಾಗಿರುತ್ತವೆ. ವೃತ್ತಿಗಳಲ್ಲಿ ಗೊಂದಲಮಯ ಸನ್ನಿವೇಶಗಳಿರುತ್ತವೆ. ವಿದ್ಯಾರ್ಥಿಗಳು ಹೆಚ್ಚು ಶ್ರಮಪಡಬೇಕಾದ ಅನಿವಾರ್ಯತೆ ಇರುತ್ತದೆ. ಉದ್ಯೋಗಗಳಲ್ಲಿ ಹೆಚ್ಚುವರಿ ಜವಾಬ್ದಾರಿಗಳು ಬೇಸರ ತರಿಸುತ್ತವೆ. ಬೆಲೆಬಾಳುವ ವಸ್ತುಗಳೊಂದಿಗೆ ಜಾಗರೂಕರಾಗಿರಿ.
ಮಕರ ರಾಶಿ: ಪ್ರಮುಖ ವಿಷಯಗಳಲ್ಲಿ ಸಂಗಾತಿಯ ಸಲಹೆ ಪಡೆದು ಮುನ್ನಡೆಯುವುದು ಉತ್ತಮ. ಸರ್ಕಾರಿ ಅಧಿಕಾರಿಗಳೊಂದಿಗೆ ಜಾಗರೂಕರಾಗಿರಿ. ಮಕ್ಕಳ ಶೈಕ್ಷಣಿಕ ವಿಷಯಗಳು ಸಕಾರಾತ್ಮಕ ಫಲಿತಾಂಶಗಳನ್ನು ನೀಡುತ್ತವೆ, ಪ್ರಯಾಣದಲ್ಲಿ ಹೊಸ ಪರಿಚಯಗಳು ಉಂಟಾಗುತ್ತವೆ. ಉದ್ಯೋಗದಲ್ಲಿ ಉನ್ನತ ಹುದ್ದೆಗಳನ್ನು ಪಡೆಯುತ್ತೀರಿ.
ಕುಂಭ ರಾಶಿ: ಆರ್ಥಿಕ ಆಲೋಚನೆಗಳು ಅನುಕೂಲಕರವಾಗಿರುತ್ತವೆ.ವೃತ್ತಿಪರ ಉದ್ಯೋಗಗಳಲ್ಲಿ ಹೊಸ ಪ್ರೋತ್ಸಾಹ ದೊರೆಯುತ್ತದೆ. ಬಂಧು ಮಿತ್ರರೊಂದಿಗೆ ಸೌಹಾರ್ದತೆ ಉಂಟಾಗುತ್ತದೆ.ವ್ಯವಹಾರಗಳಲ್ಲಿ ಶತ್ರು ಸಮಸ್ಯೆಯಿಂದ ಜಾಣ್ಮೆಯಿಂದ ಮುಕ್ತಿ ಪಡೆಯುತ್ತೀರಿ. ಮನೆಯ ಹೊರಗೆ ಅನುಕೂಲಕರ ವಾತಾವರಣವಿರುತ್ತದೆ.ಕುಟುಂಬ ಸದಸ್ಯರೊಂದಿಗೆ ಪುಣ್ಯಕ್ಷೇತ್ರಗಳ ದರ್ಶನ ಪಡೆಯುತ್ತೀರಿ.
ಮೀನ ರಾಶಿ: ಉತ್ತಮ ಆಲೋಚನೆ ಜ್ಞಾನದಿಂದ ಮುನ್ನಡೆಯುತ್ತೀರಿ. ಹೊಸ ವಾಹನ ಖರೀದಿಸುತ್ತೀರಿ.ದೂರದ ಬಂಧುಗಳಿಂದ ಶುಭವಾರ್ತೆ ದೊರೆಯುತ್ತದೆ.ಉದ್ಯೋಗದಲ್ಲಿ ಅಧಿಕಾರಿಗಳಿಂದ ಪ್ರಶಂಸೆಗೆ ಪಾತ್ರರಾಗುತ್ತೀರಿ.ವ್ಯವಹಾರಗಳು ಲಾಭದಾಯಕವಾಗಿರುತ್ತವೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ಒಳ್ಳೆಯ ಸುದ್ದಿ ಇರುತ್ತದೆ.