18.06.2023ರ ಭಾನುವಾರದ ದಿನ ಭವಿಷ್ಯ

ಮೇಷ:  ಕಲಾವಿದರಿಗೆ ಗೌರವ ಸಿಗುವುದು. ಸುಂದರವಾದ ಮನೆಯ ನಿರ್ಮಾಣದ ಕನಸನ್ನು ಸಂಗಾತಿಯ ಜೊತೆ ಹಂಚಿಕೊಳ್ಳುವಿರಿ. ಆಕಸ್ಮಿಕವಾಗಿ ನೀವು ಆಪ್ತರ ಅಗಲುವಿಕೆಯ ವಾರ್ತೆಯನ್ನು ‌ಕೇಳುವಿರಿ. ವಿದೇಶಕ್ಕೆ ತೆರಳುವ ಆಲೋಚನೆಯನ್ನು ಮಾಡುವಿರಿ. ವಿಳಂಬ ವಿವಾಹಕ್ಕೆ ಯಾರನ್ನೋ ಬೊಟ್ಟು‌ಮಾಡಿ ತೋರಿಸುವಿರಿ. ಸಹೋದರಿಯ ಜೊತೆ ಹೆಚ್ಚಿನ ವಿಚಾರವನ್ನು ಹಂಚಿಕೊಳ್ಳುವಿರಿ. ಸಂಗಾತಿಯ ಕಡೆಯಿಂದ ಲಾಭವಾಗಲಿದೆ. ನಿಮಗೆ ಇಷ್ಟವಾದುದನ್ನು ದಾನವಾಗಿ ಕೊಡಿ. ಸಮಯಕ್ಕೆ ಸರಿಯಾಗಿ ಯಾವುದೂ ಆಗುವುದಿಲ್ಲ ಎಂಬ ಬೇಸರ ಉಂಟಾಗಬಹುದು.

ವೃಷಭ: ಬೌದ್ಧಿಕ ಕಸರತ್ತನ್ನು ಮಾಡಲು ಹೋಗಿ ತಲೆಕೆಡಿಸಿಕೊಳ್ಳುವಿರಿ. ಬೆಳಗಿನಿಂದಲೇ‌ ನೀವು ಮೋಜಿನ ಮಾನಸಿಕತೆಯನ್ನು ಬೆಳೆಸಿಕೊಂಡಿರುವಿರಿ. ನಿಮ್ಮ ಅಧ್ಯಯನ ಬಗ್ಗೆ ನಿಮಗೇ ಅನುಮಾನ ಬರಬಹುದು. ನಿಮಗಾಗಿ ಕಾಯುವ ಆತ್ಮೀಯರನ್ನು ಭೇಟಿ ಮಾಡಿ. ಕೌಟುಂಬಿಕ ವಿಚಾರವನ್ನು ಅತಿಯಾಗಿ ವೈಭವಿಸಬೇಕಾಗಿಲ್ಲ. ಸದ್ಯ ಅದು ಶಾಂತವಾಗಿರಲಿ. ನಿಮ್ಮನ್ನು ಇಷ್ಟಪಡುವವರಿಗೆ ನಿಮ್ಮ ಬಗ್ಗೆ ಹೇಳಿ.‌ ಹಳೆಯ ನೆನಪುಗಳನ್ನು ಇಂದು ಆಸ್ವಾದಿಸುವಿರಿ. ಓದಿನತ್ತ ಹೆಚ್ಚಿನ‌ ಗಮನವಿರಲಿದೆ. ನಿಮ್ಮವರ ಅಭಿಪ್ರಾಯವನ್ನು ಮನ್ನಿಸಿ. ಅವರ ಮಾತನ್ನು ಧಿಕ್ಕರಿಸಬೇಡಿ.

ಮಿಥುನ:  ನಿಮ್ಮವರಿಗೆ ನೀವು ಸಮಯವನ್ನು ಕೊಡಲಾಗುತ್ತಿಲ್ಲ ಎಂಬ ಕೊರಗು ಹೆಚ್ಚಾಗಬಹುದು. ತಂದೆ – ತಾಯಿಯರ ಭೇಟಿಯನ್ನು ಮಾಡಲು ಇಚ್ಛಿಸುವಿರಿ. ಹೆಚ್ಚಿನ ವಿದ್ಯಾಭ್ಯಾಸಕ್ಕೆ ಬೇರೆಡೆಗೆ ತೆರಳಬಹುದು. ತಾಯಿಗೆ ಚಿಕಿತ್ಸೆಯನ್ನು ಕೊಡಿಸುವಿರಿ. ಕೆಟ್ಟ ಮಾರ್ಗದಿಂದ ಬರುವ ಹಣವನ್ನು ನೀವು ನಿರಾಕರಿಸುವಿರಿ. ಸಾಲವನ್ನು ಹಂತಹಂತವಾಗಿ ತೀರಿಸಲು ನೀವು ಯೋಜನೆ ರೂಪಿಸಿಕೊಳ್ಳುವಿರಿ. ಇಂದು ನೀವು ವಿಶ್ರಾಂತಿಯನ್ನು ಪಡೆಯಬೇಕು ಎಂಬ ಆಲೋಚನೆಯಲ್ಲಿ ಇದ್ದರೆ ಅದು ಅಸಾಧ್ಯವಾದೀತು. ಸ್ನೇಹಿತರ ಜೊತೆ ದೂರ ಪ್ರಯಾಣ ಮಾಡಿ ಬರುವಿರಿ. ಸರಿಯಾದ ಆಹಾರವು ಸಿಗದೇ ಹಸಿವಿನಿಂದ ಸಂಕಟಪಡುವಿರಿ.

 ಕರ್ಕ: ಪ್ರೀತಿ ಪಾತ್ರರ ಭೇಟಿಯಿಂದ ನಿಮ್ಮಲ್ಲಿ ಉತ್ಸಾಹ ಹೆಚ್ಚಾಗುವುದು. ನಿಮ್ಮ ಹೊಸ ಉದ್ಯಮದ ವಿಚಾರವು ನಿಮಗೆ ಕುಟುಂಬದಲ್ಲಿ ಸಂತೋಷವನ್ನು ಹೆಚ್ಚಿಸೀತು. ನಿಮಗೆ ಉಂಟಾದ ನೋವಿಗೆ ಸರ್ಕಾರ ಪರಿಹಾರವನ್ನೂ ಕೊಡಬಹುದು. ಸಂಗಾತಿಯು ನಿಮ್ಮ ಎಲ್ಲ ವಿಷಯಕ್ಕೂ  ತಗಾದೆ ತೆಗೆಯಬಹುದು. ನಿಮ್ಮ ಬಗ್ಗೆ ತಿಳಿಯದೇ ಮನೆಯಲ್ಲಿ ಆತಂಕ ಸೃಷ್ಟಿಯಾಗಬಹುದು. ಮನೆಯಿಂದ ಸಹಾಯ ಪಡೆಯಬಾರದು ಎಂಬ ಸ್ವಾಭಿಮಾನ ಎದ್ದು ತೋರುವುದು. ವಿದ್ಯಾರ್ಥಿಗಳು ಸ್ಪರ್ಧಾತ್ಮ‌ಕ ಪರೀಕ್ಷೆಗೆ ಹೆಚ್ಚಿನ ತರಬೇತಿಯನ್ನು ಪಡೆಯಬೇಕಾಗಬಹುದು.

ಸಿಂಹ: ನಿಮ್ಮ ಉದ್ಯೋಗದಲ್ಲಿ ಉಂಟಾದ ರಾಜಕೀಯ ಉನ್ನತಿಗೆ ಆಪ್ತರಿಂದ ಪ್ರಶಂಸೆ ಸಿಗಬಹುದು. ಸ್ತ್ರೀಯರು ನಿಮ್ಮನ್ನು ಮುಚ್ಚಿಕೊಳ್ಳಬಹುದು. ಅತಿಯಾದ ಆಲಸ್ಯದ ಕಾರಣ ನೀವು ಎಲ್ಲಿಗೂ ಹೋಗಲು ಇಷ್ಟಪಡುವುದಿಲ್ಲ. ಮನೆಯಲ್ಲಿಯೇ ವಿಶ್ರಾಂತಿ ಪಡೆಯುವಿರಿ. ಹೊರಗಡೆ ಆಹಾರವನ್ನು ತಿನ್ನಲು ಬಯಸುವಿರಿ. ನಿಮ್ಮ ಗುರಿಯು ಅಸ್ಪಷ್ಟವಾಗಿ ತೋರಬಹುದು. ಹಳೆಯ ನೋವು ಪುನಃ ಬರಬಹುದು. ಕೈ ಗಾಯನವನ್ನು ಮಾಡಿಕೊಳ್ಳುವಿರಿ. ಉದ್ಯೋಗಕ್ಕಾಗಿ ಅಪರಿಚಿತ ಕರೆಯೊಂದು ಬರಬಹುದು. ಸಿಕ್ಕ‌ ಕೆಲಸವನ್ನು ನೀವು ಬಿಡುವಿರಿ.

 

ಕನ್ಯಾ:  ಮನಸ್ಸನ್ನು ಶಮನಗೊಳಿಸಲು ವಿವಿಧ ಕಸರತ್ತು ಮಾಡುವಿರಿ. ಸಹೋದ್ಯೋಗಿಗಳ ಸಹವಾಸದಿಂದ ದುಶ್ಚಟಕ್ಕೆ ಬೀಳುವವರಿದ್ದೀರಿ. ನಿಮ್ಮವರಿಗೆ ಆದ ಅಪಮಾನವನ್ನು ಸಹಿಸಿಕೊಳ್ಳಲಾರಿರಿ. ಏಕಾಗ್ರತೆಯ ಕೊರತೆ ಕಾಣಬಹುದು. ಮನೆಯರ ಜೊತೆ ಜಗಳವಾಡಿ ದೂರ ಹೋಗುವಿರಿ. ಆರ್ಥಿಕ ಹಿನ್ನಡೆಯು ನಿಮ್ಮನ್ನು ಕುಗ್ಗಿಸುವುದು. ಎಲ್ಲ ಆಟವನ್ನು ಗೆಲ್ಲಬೇಕು ಎನ್ನುವುದು ಸರಿಯಾದರೂ, ಗೆಲ್ಲಲಾಗದೂ ಎಂಬುದೂ ವಾಸ್ತವ. ಹಾಗಾಗಿ ನಿಮ್ಮ ವರ್ತನೆಯು ಭಾಗವಹಿಸುವುದಕ್ಕೆ ಇರಲಿ. ಇದು ನಿಮ್ಮ‌ ಅನುಭವವೂ ಆಗಬಹುದು. ಮಕ್ಕಳ ವಿಚಾರವನ್ನು ಬಹಳ ಜೋಪಾನವಾಗಿ ನಿರ್ವಹಿಸಿ.

ತುಲಾ: ನಿಮ್ಮನ್ನು ಹುಡುಕಿಕೊಂಡು ಬರುವ ಖರ್ಚುಗಳು ಭಯಭೀತರನ್ನಾಗಿ‌ ಮಾಡೀತು. ಬೇರೆಯವರ ಮೇಲೆ ಬೀರುವ ನಿಮ್ಮ ಪ್ರಭಾವವು ಎಷ್ಟು ಬಳಸಿದರೂ ನಿಷ್ಪ್ರಯೋಜಕ. ರಾಜಕಾರಣಿಗಳು ತಾಳ್ಮೆಯಿಂದ‌ ವ್ಯವಹರಿಸುವುದು ಉಚಿತ. ಚರಾಸ್ತಿಗಳ ಬಗ್ಗೆ ಗೊಂದಲವಿರಬಹುದು. ಹೊಸ ವಾಹನವನ್ನು ಖರೀದಿಸುವಿರಿ. ಸಂಗಾತಿಯು ನಿಮ್ಮ ಉದ್ಯೋಗಕ್ಕೆ ಸಹಕರಿಸಬಹುದು. ಲಂಕಾರಿಕ ವಸ್ತುವಿನ‌ ಮೇಲೆ ಹೆಚ್ಚು ಆಸಕ್ತಿ ಇರುವುದು. ಬೆಂಕಿಯಿಂದ ಸ್ವಲ್ಪ ದೂರವಿರಿ ಅಥವಾ ಜಾಗರೂಕರಾಗಿರಿ. ನಿಮ್ಮವರ ಬಗ್ಗೆ ನಿಮಗೆ ತಿಳುವಳಿಕೆ ಬಹಳ ಕಡಿಮೆ ಇರಲಿದೆ. ದುಃಸ್ವಪ್ನವು ನಿಮಗೆ ಚಿಂತನೆಯನ್ನು ಕೊಡುವುದು‌. ಇಂದು ನೀವು ಸಂಬಂಧಗಳ ಬೆಲೆಯನ್ನು ಅರಿಯಲಿದ್ದೀರಿ.

ವೃಶ್ಚಿಕ:  ದುಡುಕಿ ಕೆಲಸವನ್ನು ಮಾಡಿಕೊಳ್ಳುವುದು ಬೇಡ. ನಿಮ್ಮ ಕೆಲಸವನ್ನು ಬೇರೆಯವರ ಮೂಲಕ ಮಾಡಿಸಿಕೊಳ್ಳುವಿರಿ. ಇಂದಿನ ದಿನವು ಸುತ್ತಾಟದಲ್ಲಿ ಕಳೆಯಬಹುದು. ವಿವಾಹಕ್ಕೆ ಕಾದು ಕುಳಿತ ವ್ಯಕ್ತಿಗಳು ಇನ್ನೂ ಸ್ವಲ್ಪ ದಿನ ಕಾಯಬೇಕಾಗುವುದು. ಹಿರಿಯರ ಸಹಕಾರದಿಂದ ದೈಹಿಕಬಲ, ಮನೋಬಲವು ಆರ್ಥಿಕಬಲ ಹೆಚ್ಚಾಗಬಹುದು. ದೇಹದ ಮೇಲೆ ಏನಾದರೂ ಕಾಣಿಸಿಕೊಂಡೀತು. ಹಿತಶತ್ರುಗಳು ಅರಿತುಕೊಳ್ಳಿ‌ ನಿಮಗೆ ಹೆಚ್ಚು ಸಮಯಬೇಕಾಗುದು. ಇಂದಿನ‌ ಪ್ರಯಾಣವು ನಿಮಗೆ ಆಯಾಸವನ್ನೂ ಹಣ ಕೊಡುತ್ತದೆ. ನಿಮಗೆ ಕೆಲವರು ಆಮಿಷವನ್ನು ತೋರಿಸುವರು. ಅದಕ್ಕೆ ಬಲಿಯಾಗಿ ಸಂಪತ್ತನ್ನು ಕಳೆದುಕೊಳ್ಳಬೇಕಾಗಬಹುದು. ಧಾರ್ಮಿಕ ಉತ್ಸವಗಳಲ್ಲಿ ಭಾಗಿಯಾಗುವಿರಿ.

ಧನುಸ್ಸು: ಅವಶ್ಯಕ ಕಾರ್ಯಗಳ ನಿಮಿತ್ತ ದೂರ ಪ್ರಯಾಣ ಮಾಡಬೇಕಾಗುವುದು. ನಿಮ್ಮ ಮಾತಿನಲ್ಲಿ ಸತ್ಯತೆ ಇದ್ದರೂ ನಿಮ್ಮನ್ನು ನಂಬಲು ಅನುಮಾನಿಸುವರು. ಉನ್ನತಾಧಿಕಾರಿಗಳ ಜೊತೆ ಕುಳಿತು ನಿಮಗೆ ಆಗಬೇಕಾದ ಕೆಲಸವನ್ನು ಮಾತನಾಡಿ ಮಾಡಿಸಿಕೊಳ್ಳಿ. ಆರೋಗ್ಯದ ಸಮಸ್ಯೆ ದೂರವಾಗುತ್ತಿದೆ ಎನ್ನುವಾಗ ಮತ್ತೇನಾದರೂ ನಿಧಾನವಾಗಿ ಆರಂಭವಾಗಬಹುದು. ನಿಮ್ಮ ಕೋಪವನ್ನು ಆದಷ್ಟು ಕಡಿಮೆ‌ಮಾಡಿಕೊಳ್ಳುವುದು ಉತ್ತಮ. ಅದನ್ನು ಸರಳವಾಗಿಸುವ ವಿಧಾನವನ್ನು ಕಂಡುಕೊಳ್ಳಿ. ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿದಂತೆ ವ್ಯವಹಾರವು ಮುಕ್ತಾಯವಾಗಬಹುದು. ಅನಿರೀಕ್ಷಿತವಾಗಿ ನೀವು ನಡೆದುಕೊಳ್ಳುವ ರೀತಿಯು ಕೆಲವರಿಗೆ ಆದರ್ಶವಾಗಬಹುದು. ಸ್ವಲ್ಪ ಅಂತರದಲ್ಲಿ ನಿಮಗೆ ದೊಡ್ಡ ಅಪಾಯವು ತಪ್ಪಿಹೋಗಬಹುದು.

ಮಕರ: ನಿರುದ್ಯೋಗಿಗಳು ಸ್ನೇಹಿತರ ಜೊತೆ ಚರ್ಚಿಸಿ ಹೊಸ ಉದ್ಯೋಗಕ್ಕೆ ಸೇರಿಕೊಳ್ಳುವರು. ಸಾಮಾಜಿಕವಾಗಿ ಪ್ರಸಿದ್ಧರಾಗಲು ನೀವು ಬಯಸುವಿರಿ. ರಾಜಕೀಯ ವ್ಯಕ್ತಿಗಳ ಒಡನಾಟ ಸಿಗಲಿದೆ. ನಕಾರಾತ್ಮಕ ಆಲೋಚನೆಗಳನ್ನು ಬಲವಂತವಾಗಿ ಕಡಿಮೆ ಮಾಡಿಕೊಳ್ಳಬೇಕಾಗುವುದು. ಸಂಗಾತಿಯ ಜೊತೆ ಭವಿಷ್ಯವನ್ನು ಚಿಂತಿಸುವಿರಿ. ಹಳೆಯ ಸ್ನೇಹಿತರ ನೆನಪಾಗುವ ಸಾಧ್ಯತೆ ಇದೆ. ಇಷ್ಟಪಟ್ಟವರನ್ನು ನೀವು ಭೇಟಿಯಾಗಿ ಆತ್ಮೀಯವಾಗಿ ಮಾತನಾಡುವಿರಿ. ನಿಮ್ಮ ಮಾತುಗಳು ಅಸ್ಪಷ್ಟವಾಗಿ ಇರಲಿದೆ. ಮಕ್ಕಳಿಗೆ ನೀವು ನಿರ್ಬಂಧವನ್ನು ಹಾಕಿ ಪ್ರಯೋಜನವಾಗದು.

ಕುಂಭ: ಉದ್ಯೋಗಸ್ಥರಿಗೆ ಉನ್ನತ ಅವಕಾಶ ಸಿಗಬಹುದು. ಅನುಭವಿಗಳ ಮಾರ್ಗದರ್ಶನ ಪಡೆಯುವುದರಿಂದ ನೆಮ್ಮದಿಯು ಲಭಿಸಲಿದೆ. ಅವಿವಾಹಿತರು ಯೋಗ್ಯ ಸಂಬಂಧವನ್ನು ನಿರೀಕ್ಷಿಸಬಹುದು. ಮಂಗಳ ಕಾರ್ಯದಿಂದ ಮನಸ್ಸು ಅರಳುವುದು. ಬಿದ್ದು ಗಾಯ ಮಾಡಿಕೊಳ್ಳಬಹುದು. ನ್ಯಾಯಾಲಯಕ್ಕೆ ಬೇಕಾದ ದಾಖಲೆಗಳನ್ನು ನೀವು ತಯಾರಿಸಿಕೊಳ್ಳುವಿರಿ. ನಿಮ್ಮ ಪ್ರಾಮಾಣಿಕತನಕ್ಕೆ ಮೆಚ್ಚುಗೆ ಬರಬಹುದು. ವಿದ್ಯಾರ್ಥಿಗಳು ಪರೀಕ್ಷೆಯ ಭಯವನ್ನು ದೂರ ಮಾಡಿಕೊಳ್ಳುವ ಅವಶ್ಯಕತೆ ಇದೆ. ಅಪರಿಚಿತ ವ್ಯಕ್ತಿಗಳ ಕರೆಯು ನಿಮ್ಮನ್ನು ವಂಚನೆಯ ಜಾಲಕ್ಕೆ ಸಿಲುಕಿಸಬಹುದು.

 

ಮೀನ: ಇಂದು ನಿಮ್ಮಿಂದ ಹೊಸ ಚಿಂತನೆಗಳು ಬರಬಹುದು. ನಿಮ್ಮ ದೃಷ್ಟಿಕೋನವನ್ನು ನೀವು ಬದಲಿಸಿಕೊಳ್ಳುವಿರಿ. ಸಾಮಾಜಿಕ ಕ್ಷೇತ್ರದಲ್ಲಿ ವಿಶ್ವಾಸದ ದುರುಪಯೋಗವಾಗಬಹುದು. ಬಂಧುಗಳ ಜೊತೆ ವ್ಯವಹಾರ ಮಾಡುವಾಗ ಪಾರದರ್ಶಕತೆ ಬೇಕಾದೀತು. ಎಲ್ಲರಿಂದಲೂ ಒಂದೇ ವಿಚಾರವನ್ನು ಕೇಳಿ ಮನಸ್ಸಿಗೆ ಭಾರವಾಗುವುದು. ಇಷ್ಟು ವರ್ಷ ನಡೆಸಿದ ಉದ್ಯಮವು ನಿಮಗೆ ಸಾಕೆನಿಸಬಹುದು. ಅಥವಾ ಬೇರೆ ಉದ್ಯಮದತ್ತ ಮುಖ ಮಾಡಲೂ ಬಹುದು. ಭೋಗವನ್ನು ನೀವು ಇಷ್ಟಪಡುವಿರಿ. ಇನ್ನೊಬ್ಬರಿಗೆ ಬೇಸರವಾಗುವಷ್ಟು ನೀವು ಮಾತನಾಡುವುದು ಬೇಡ. ಗುಪ್ತ ಸಂಪತ್ತಿನ ವಿಚಾರವು ಬೇರೆಯವರಿಗೂ ತಿಳಿದೀತು.

Facebook
Twitter
LinkedIn
WhatsApp

Leave a Comment

Your email address will not be published. Required fields are marked *

Translate »
Scroll to Top