ಇಂದು ಬೆಂಗಳೂರಿನಲ್ಲಿ ಶೂನ್ಯ ನೆರಳಿನ ದಿನ, ಸಮಯ, ಇದು ಯಾಕೆ ಸಂಭವಿಸುತ್ತದೆ?

ಯಾರು ನಮ್ಮನ್ನು ಬಿಟ್ಟು ಹೋದರು ನಮ್ಮ ನೆರಳು ನಮ್ಮನ್ನು ಬಿಡುವುದಿಲ್ಲ ಎನ್ನುವ ಮಾತನ್ನು ಕೇಳಿರಬಹುದು. ಸದಾ ನಮ್ಮನ್ನೇ ಹಿಂಬಾಲಿಸುವ ನೆರಳು ಕೂಡ ರ‍್ಷದಲ್ಲಿ ಎರಡು ಬಾರಿ ನಮ್ಮ ಜೊತೆಗೆ ಇರುವುದಿಲ್ಲ. ಇಂತಹದೊಂದು ಅಪರೂಪದ ಘಟನೆಗೆ ನಾಳೆ ಮಾಯಾನಗರಿ ಬೆಂಗಳೂರು ಸಾಕ್ಷಿಯಾಗಲಿದೆ. ಏಪ್ರಿಲ್ ೨೪ ರಂದು ಮಧ್ಯಾಹ್ನದ ವೇಳೆಗೆ ಶೂನ್ಯ ನೆರಳಿನ ದಿನ ಸಂಭವಿಸಲಿದೆ. ಹಾಗಾದ್ರೆ ಶೂನ್ಯ ನೆರಳಿನ ದಿನ ಎಂದರೇನು? ಹೇಗೆ ಸಂಭವಿಸುತ್ತದೆ ಎನ್ನುವುದರ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ನಭೋ ಮಂಡಲದಲ್ಲಿ ವಿಸ್ಮಯಕಾರಿ ಘಟನೆಗಳು ನಡೆಯುತ್ತಿರುತ್ತದೆ. ಕೆಲವು ಘಟನೆಗಳು ನಂಬಲು ಅಸಾಧ್ಯವೆನಿಸಿದರೂ ನಂಬಬೇಕಾಗುತ್ತದೆ. ಆದರಂತೆ ಏಪ್ರಿಲ್ ೨೪ ಬುಧವಾರದಂದು ಬೆಂಗಳೂರಿನಲ್ಲಿ ಇಂತಹದೊಂದು ಘಟನೆಯು ನಡೆಯಲಿದೆ. ಬೆಂಗಳೂರಿನಲ್ಲಿ ಮಧ್ಯಾಹ್ನ ೧೨:೧೭ ರಿಂದ ೧೨:೨೩ ರ ವೇಳೆಗೆ ನಿಮ್ಮ ನೆರಳು ನಿಮಗೆ ಕಾಣಿಸುವುದಿಲ್ಲ. ಅಂದರೆ ಶೂನ್ಯ ನೆರಳಿನ ದಿನ ಸಂಭವಿಸಲಿದೆ. ಈ ವಿದ್ಯಮಾನವನ್ನು ರ‍್ಕಾಟಕ ಸಂಕ್ರಾಂತಿ ಮತ್ತು ಮಕರ ಸಂಕ್ರಾಂತಿಯ ನಡುವೆ ಇರುವ ಪ್ರದೇಶಗಳಲ್ಲಿ ರ‍್ಷಕ್ಕೆ ಎರಡು ಬಾರಿ ಗಮನಿಸಬಹುದು. ಈ ಬಾರಿ ಬೆಂಗಳೂರಿನಲ್ಲಿ ಏಪ್ರಿಲ್ ೨೪ ಹಾಗೂ ಆಗಸ್ಟ್ ೧೮ ರಂದು ಈ ಶೂನ್ಯ ನೆರಳಿನ ದಿನ ಸಂಭವಿಸಲಿದೆ ಎನ್ನಲಾಗಿದೆ.

 

ಶೂನ್ಯ ನೆರಳು ದಿನ ಸಂಭವಿಸುವುದೇಕೆ?

 

ಉಷ್ಣವಲಯದ ಸ್ಥಳಗಳಲ್ಲಿ (ರ‍್ಕಾಟಕ ಸಂಕ್ರಾಂತಿ ಮತ್ತು ಮಕರ ಸಂಕ್ರಾಂತಿಯ ನಡುವೆ) ರ‍್ಷಕ್ಕೆ ಎರಡು ಬಾರಿ ಶೂನ್ಯ ನೆರಳು ದಿನ ಸಂಭವಿಸುತ್ತದೆ. ಸರ‍್ಯನ ಸುತ್ತ ಭೂಮಿಯ ಪರಿಭ್ರಮಣೆಯ ಅಕ್ಷವು ತನ್ನ ಸಮತಲದಿಂದ ೨೩.೫ ಡಿಗ್ರಿಗಳಷ್ಟು ಬಾಗಿದೆ. ಇದರಿಂದ ವಿವಿಧ ಋತುಗಳು ಸಂಭವಿಸುತ್ತವೆ. ಇದರಿಂದಾಗಿ ಸರ‍್ಯನು ದಿನದ ಅತ್ಯುನ್ನತ ಬಿಂದುವಿನಲ್ಲಿರುವಾಗ, ಉತ್ತರಾಯಣದಲ್ಲಿ ಆಕಾಶ ಸಮಭಾಜಕದ ದಕ್ಷಿಣದ ೨೩.೫ ಡಿಗ್ರಿಗಳಿಂದ ಸಮಭಾಜಕದ ಉತ್ತರಕ್ಕೆ ೨೩.೫ ಡಿಗ್ರಿಗಳಿಗೆ ಚಲಿಸುತ್ತಾನೆ ಹಾಗೂ ದಕ್ಷಿಣಾಯನದಲ್ಲಿ ಇದರ ವಿರುದ್ಧಕ್ಕೆ ಚಲಿಸುತ್ತಾನೆ. ಹೀಗಾಗಿ ರ‍್ಷದಲ್ಲಿ ಎರಡು ಬಾರಿ ಶೂನ್ಯ ನೆರಳಿನ ದಿನ ಸಂಭವಿಸುತ್ತದೆ. ಈ ವೇಳೆಯಲ್ಲಿ ಯಾವುದೇ ವ್ಯಕ್ತಿ ಹಾಗೂ ವಸ್ತುವಿನ ನೆರಳು ಕೂಡ ಕಾಣಿಸುವುದಿಲ್ಲ.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top