ಜೆಜೆಎಂ ಕಾಮಗಾರಿ ಪರಿಶೀಲಿಸಿದ ತಾ.ಪಂ ಇಓ

ಕೊಪ್ಪಳ: ಕಾರಟಗಿ ತಾಲೂಕಿನ ಶ್ರೀರಾಮನಗರ ಗ್ರಾಮ ಪಂಚಾಯತಿ ವ್ಯಾಪ್ತಿಯ ವಿವಿಧ ವಾರ್ಡ್ ಗಳಲ್ಲಿ ಅನುಷ್ಠಾನಗೊಂಡ ಜಲ ಜೀವನ್ ಮಿಷನ್ (ಜೆಜೆಎಂ) ಕಾಮಗಾರಿಯ ಸ್ಥಳಕ್ಕೆ ಶುಕ್ರವಾರದಂದು‌ ಭೇಟಿ ನೀಡಿದ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಮಹಾಂತಗೌಡ ಪಾಟೀಲ್ ರವರು ಪರಿಶೀಲಿಸಿದರು.

ನಂತರ ಮಾತನಾಡಿದ ಅವರು ಸರ್ಕಾರದ ಮಹಾತ್ವಕಾಂಕ್ಷಿ ಯೋಜನೆಯಾದ ಜೆಜೆಎಂ ಕಾಮಗಾರಿಯನ್ನು ಗ್ರಾಮದ ವಿವಿಧ ವಾರ್ಡ್ ಗಳಲ್ಲಿ ಅನುಷ್ಠಾನಗೊಳಸಲಾಗಿದ್ದು ಕಾಮಗಾರಿ ಗುಣಮಟ್ಟದ ಕಾಪಾಡುವಂತೆ ಸಂಭಂದಿಸಿದ ಗುತ್ತಿಗೆದಾರರಿಗೆ ಸೂಚಿಸಿದರು. ಹಾಗೇ ಮನೆ‌ ಮನೆಗೆ ಭೇಟಿ ನೀಡಿ‌ ಅಳವಡಿಸಿರುವ ನಲ್ಲಿ, ಮೀಟರ್ ಗಳನ್ನು ಪರಿಶೀಲಿಸಿ, ಕೆಲವು ಕಡೆ ಬಾಕಿ ಇರುವ ಕಾಮಗಾರಿಯನ್ನು ಆದಷ್ಟು ಶೀಘ್ರವಾಗಿ ಪೂರ್ಣಗೊಳಿಸುವಂತೆ ತಿಳಿಸಿದರು. ತದನಂತರ ಎಪಿಎಂಸಿಯಲ್ಲಿನ ಬಹುಗ್ರಾಮ ಕುಡಿಯುವ ನೀರು ಸರಬರಾಜು ಘಟಕವನ್ನು ವಿಕ್ಷಣೆ ಮಾಡಿ ಅಲ್ಲಿನ ಗ್ರಾ.ಪಂ ಸಿಬ್ಬಂದಿಗಳಿಗೆ ಘಟಕವನ್ನು ಸುಸಜ್ಜಿತವಾಗಿ ಕಾಪಾಡುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ವತ್ಸಲಾ, ತಾಂತ್ರಿಕ ಸಂಯೋಜಕ ಬಸವರಾಜ್, ಐಇಸಿ ಸಂಯೋಜಕ ಸೋಮನಾಥ ನಾಯಕ, ತಾಂತ್ರಿಕ ಸಹಾಯಕ ಸೈಯದ್ ಇಸ್ಮಾಯಿಲ್, ಗ್ರಾ.ಪಂ ಸಿಬ್ಬಂದಿಗಳಾದ ಗಂಗಪ್ಪ, ಗೀರಿಧರ್, ಸೇರಿದಂತೆ ಇತರರಿದ್ದರು.

Leave a Comment

Your email address will not be published. Required fields are marked *

Translate »
Scroll to Top