ತಿಗಳ ಮತ್ತು ವಹ್ನಿಕುಲ ಕ್ಷತ್ರಿಯ ಸಮುದಾಯ ಬೇರೆ,ಬೇರೆ: ರಾಜಕೀಯ ಬೇಳೆ ಬೇಯಸಿಕೊಳ್ಳುಲು ನೆ.ಲ.ನರೇಂದ್ರಬಾಬು, ಪಿ.ಆರ್.ರಮೇಶ್ ಹುನ್ನಾರ

ಬೆಂಗಳೂರು: ಬೆಂಗಳೂರು ಪ್ರೆಸ್ ಸಭಾಂಗಣದಲ್ಲಿ ಕರ್ನಾಟಕ ವಹ್ನಿಕುಲ ಕ್ಷತ್ರಿಯ ಸಂಘದ ವತಿಯಿಂದ ಮಾಧ್ಯಮಗೋಷ್ಟಿ ಏರ್ಪಡಿಸಲಾಗಿತ್ತು. ಅಧ್ಯಕ್ಷರಾದ ವರ್ತೂರು ಜೆ.ಕೆ.ಗಿರೀಶ್, ಉಪಾಧ್ಯಕ್ಷರಾದ ವೇಣು, ಗೌರವಾಧ್ಯಕ್ಷರಾದ ಪಾರ್ಥಸಾರಥಿರವರು ಭಾಗವಹಿಸಿದ್ದರು.

 

ಇದೇ ಸಂದರ್ಭದಲ್ಲಿ ವರ್ತೂರು ಜೆ.ಕೆ.ಗಿರೀಶ್ ರವರು ಮಾತನಾಡಿ ತಿಗಳ ಮತ್ತು ವಹ್ನಿಕುಲ ಸಮುದಾಯ ಅಚಾರ, ವಿಚಾರಗಳು ಬೇರೆ ಈಗಾಗಲೇ 200ವರ್ಷಗಳ ಹಿಂದೆಯ ಬ್ರಿಟಿಷರ ಸರ್ಕಾರದ ಅವಧಿಯಲ್ಲಿ ದಾಖಲೆಗಳು ಇದೆ.

ತಿಗಳ ಸಮುದಾಯ 3ಲಕ್ಷ ಜನಸಂಖ್ಯೆ ಇದೆ ವಹ್ನಿಕುಲ ಕ್ಷತ್ರಿಯ ಪಂಗಡ 30ಲಕ್ಷ ಜನಸಂಖ್ಯೆ. 

ತಿಗಳ ಮತ್ತು ವಹ್ನಿಕುಲ ಕ್ಷತ್ರಿಯ ಒಂದೇ ಜಾತಿ ಎಂದು ತಿಗಳ ಸಮುದಾಯದ ರಾಜಕೀಯ ಮುಖಂಡರಾದ ಮಾಜಿ ಶಾಸಕ ನೆ.ಲ.ನರೇಂದ್ರಬಾಬು, ಮಾಜಿ ಎಂ.ಎಲ್.ಸಿ.ಪಿ.ಆರ್.ರಮೇಶ್ ರವರು, ತಿಗಳ ಮಹಾಸಭಾದ ಅಧ್ಯಕ್ಷರಾದ ನಿವೃತ್ತ ಎಸಿಪಿ ಸುಬ್ಬಣ್ಣ ರಾಜಕೀಯ ಬೇಳೆ ಬೆಯಿಸಿಕೊಳ್ಳುತ್ತಿದ್ದಾರೆ.

ಈಗಾಗಲೇ ಹಿಂದುಳಿದ ಆಯೋಗದಲ್ಲಿ ನ್ಯಾಯಾಲಯ ಕೇಸ್ ದಾಖಲಾಗಿದ್ದು ಸಮರ್ಪಕ ದಾಖಲೆ ತಿಗಳ ಸಮುದಾಯ ನೀಡದೇ ಇರುವುದು.

ಜಿಲ್ಲಾಧಿಕಾರಿಗಳಾದ ಕೆ.ಎ.ದಯಾನಂದ್ ರವರಿಗೆ ವಹ್ನಿಕುಲ ಸಮುದಾಯ ದಾಖಲೆ ನೀಡಿ ಪ್ರತ್ಯೇಕವಾಗಿ ನಮ್ಮ ಸಮುದಾಯ ನೋಡಬೇಕು ಎಂದು ಆದೇಶ ನೀಡಬೇಕು ಎಂದರು ರಾಜಕೀಯ ಮುಖಂಡರುಗಳ ಜೊತೆಯಲ್ಲಿ ಷಾಮೀಲಾಗಿ,  ತಿಗಳ ಜಾತಿಗೂ ವಹ್ನಿಕುಲ ಕ್ಷತ್ರಿಯ ಜಾತಿಯ ಪ್ರತ್ಯೇಕತೆಯ ಜಾತಿಕಡತಕ್ಕೆ ಸಹಿ ಹಾಕುತ್ತಿಲ್ಲ ಅವರ ಸೂಕ್ತ ಕ್ರಮ ಕೈಗೊಳ್ಳಬೇಕು.

ವಹ್ನಿಕುಲ ಕ್ಷತ್ರಿಯ ಶೈಕ್ಷಣಿಕ ಅಭಿವೃದ್ದಿಗಾಗಿ ಸರ್ಕಾರ 85ಕೋಟಿ ಅನುದಾನ ನೀಡಿದೆ ಇದರಲ್ಲಿ ಭ್ರಷ್ಟಚಾರ ಎಸೆಗಿದ್ದಾರೆ ಇದರ ಕುರಿತು ಲೋಕಾಯುಕ್ತದಲ್ಲಿ ತನಿಖೆ ಮಾಡಿ ನ್ಯಾಯ ಒದಗಿಸಬೇಕು.

 

ಕರಗ ಶಕೋತ್ಸವ ಮತ್ತು ದ್ರೌಪದಿ ಅಮ್ಮನವರ ಪೂಜೆ ವಹ್ನಿಕುಲ ಕ್ಷತ್ರಿಯ ಪಂಗಡದವರು ಅಚರಣೆ ಮಾಡಿಕೊಂಡು ಬರುತ್ತಿದ್ದು, ತಿಗಳ ಸಮುದಾಯ ಅಚರಣೆ ಮಾಡುತ್ತಿದೆ ಎಂದು ತಪ್ಪು ಮಾಹಿತಿ ಮಾಧ್ಯಮಗಳಲ್ಲಿ ಪ್ರಕಟನೆಯಾಗುತ್ತಿದೆ. ವಹ್ನಿಕುಲ ಕ್ಷತ್ರಿಯ ಸಮುದಾಯದವರ ನ್ಯಾಯ ಒದಗಿಸಬೇಕು ಎಂದು ವಿನಂತಿ ಮಾಡಿತ್ತೇವೆ ಎಂದು ಹೇಳಿದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top