ಚುನಾವಣಾ ಕಣದಿಂದ ಓಡಿಹೋಗುವವರು ದೇಶ ಮುನ್ನಡೆಸಲು ಬಯಸುತ್ತಾರೆ: ರಾಹುಲ್ ವಿರುದ್ಧ ರಾಜನಾಥ್ ಸಿಂಗ್ ವಾಗ್ದಾಳಿ

ರೋಹ್ಟಕ್: ಅಮೇಥಿಯಿಂದ ರಾಯ್ ಬರೇಲಿಗೆ ಲೋಕಸಭಾ ಕ್ಷೇತ್ರವನ್ನು ಬದಲಾಯಿಸಿದ್ದಕ್ಕಾಗಿ ಶುಕ್ರವಾರ ರಾಹುಲ್ ಗಾಂಧಿ ಅವರನ್ನು ಚುನಾವಣಾ ಕಣದಿಂದ ಓಡಿ ಹೋಗುವ ವ್ಯಕ್ತಿ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಲೇವಡಿ ಮಾಡಿದ್ದಾರೆ.

ಬಿಜೆಪಿ ಸರ‍್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿಗೆ ಅಮೇಥಿಯಿಂದ ಸ್ರ‍್ಧಿಸುವ ಧರ‍್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು. ಅವರು ದೇಶ ಮುನ್ನಡೆಸಬೇಕು ಎಂದು ಜನರು ಬಯಸಿದ್ದರು. ಅನೇಕ ಕಾಂಗ್ರೆಸ್ ನಾಯಕರು ಕೂಡಾ ಅವರು ಅಮೇಥಿಯಿಂದಲೇ ಸ್ರ‍್ಧಿಸಲಿ ಅಂದುಕೊಂಡಿದ್ದರು. ಆದರೆ, ಅವರು ಹೆದರಿ ಓಡಿ ಹೋಗಿದ್ದಾರೆ ಎಂದು ಟೀಕಿಸಿದರು. ಚುನಾವಣಾ ಕಣದಿಂದ ಓಡಿ ಹೋಗಿದ ಅವರಿಗೆ ಬೇರೆ ಹೆಸರು ಇಡಬೇಕು ಎಂದು ರಾಜನಾಥ್ ಸಿಂಗ್ ಹೇಳಿದರು.

 

ಲೋಕಸಭೆಯಲ್ಲಿ ಮೂರು ಅವಧಿಗೆ ಅಮೇಥಿ ಕ್ಷೇತ್ರವನ್ನು ಪ್ರತಿನಿಧಿಸಿದ ರಾಹುಲ್ ಗಾಂಧಿ ೨೦೧೯ ರಲ್ಲಿ ಕೇಂದ್ರ ಸಚಿವೆ ಮತ್ತು ಬಿಜೆಪಿ ನಾಯಕಿ ಸ್ಮೃತಿ ಇರಾನಿ ವಿರುದ್ಧ ಸೋತಿದ್ದರು. ಆದರೆ ಅವರು ಕೇರಳದ ವಯನಾಡಿನಲ್ಲಿ ಗೆದ್ದಿದ್ದರು. ಪಾಕಿಸ್ತಾನದ ನಾಯಕ ಚೌಧರಿ ಫವಾದ್ ಹುಸೇನ್, ರಾಹುಲ್ ಗಾಂಧಿಯನ್ನು ಹೊಗಳಿದ್ದಕ್ಕಾಗಿ ಸಿಂಗ್ ಅವರು ಕಾಂಗ್ರೆಸ್ ಅನ್ನು ಟೀಕಿಸಿದರು. ಹುಸೇನ್ ಈ ಹಿಂದೆ ಭಾರತದಲ್ಲಿ ಭಯೋತ್ಪಾದಕ ದಾಳಿಗಳನ್ನು ಬೆಂಬಲಿಸಿದ್ದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top