ರಾಯಚೂರು ನಗರದಲ್ಲಿ ಲಾಕ್ ಡೌನ್ ಆಟಕ್ಕೂಂಟು ಲೆಕ್ಕೆಕಿಲ್ಲ

ರಾಯಚೂರು, ಜ,8 : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕರೋನ ಮತ್ತು ಓಮಿಕ್ರಾನ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಶನಿವಾರ ಮತ್ತು ಭಾನುವಾರ ವಿಕೆಂಡ್ ಕರ್ಫ್ಯೂ ಜಾರಿ ಮಾಡಿದ್ದರು ಕೂಡ ಸಾರ್ವಜನಿಕರು ಬೇಕಾ ಬಿಟ್ಟಿ ರಸ್ತೆಯಲ್ಲಿ ತಿರುಗಾಡುತ್ತಿದ್ದು, ರಾಯಚೂರು ನಗರದಲ್ಲಿ ಲಾಕ್ ಡೌನ್ ಆಟಕ್ಕೂಂಟು ಲೆಕ್ಕೆಕಿಲ್ಲ ಎನ್ನುವಂತಾಗಿದೆ. ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಪೋಲಿಸರು ಬೇಕಾ ಬಿಟ್ಟಿಯಾಗಿ ರಸ್ತೆಯಲ್ಲಿ ತಿರುಗಾಡುತ್ತಿರುವ ಬೈಕ್ ಸವಾರರನ್ನು ತಡೆದು ಬೈಕ್ಗಳನ್ನು ಸೀಜ್ ಮಾಡಿ ದಂಡ ವಿದಿಸುತ್ತಿದ್ದಾರೆ. ಇನ್ನು ಕೆಲವರು ಆಸ್ಪತ್ರೆಗೆ ಹೋಗುತ್ತಿದ್ದೆವೆ ಎಂದು ಚೀಟಿಗಳನ್ನು ತೋರಿಸುತ್ತಿದ್ದಾರೆ. ಇನ್ನು ಕೇಲವರು ಮುಖಕ್ಕೆ ಯಾವುದೇ ಮಾಸ್ಕ ಇಲ್ಲದೇ ಮಹಿಳೆಯರು ರಸ್ತೆಯಲ್ಲಿ ತಿರುಗಾಡುತ್ತಿದ್ದು ಅವರನ್ನು ಪೋಲಿಸರು ಪ್ರಶ್ನೆ ಮಾಡಿದರೆ ದೇವಸ್ಥಾನಕ್ಕೆ ಹೋಗಿದ್ವಿ ಎಂದು ನೆಪ ಹೇಳುತ್ತಿರುವುದು ಕಂಡುಬಂತು ಪೋಲಿಸರು ಇದಾವುದಕ್ಕೆ ತಲೆಕೆಡಿಸಿಕೊಳ್ಳದೆ ದಂಡ ಕಟ್ಟಿಸಿಕೊಳ್ಳುತ್ತಿರುವುದು ಕಂಡು ಬಂತು. ಇನ್ನು ಕೆಲವು ಕಡೆ ಬೆಕಾ ಬಿಟ್ಟಿಯಾಗಿ ತಿರುಗಾಡುತ್ತಿರುವವರ ವಾಹನದ ಬೀಗವನ್ನು ಕಸಿದುಕೊಂಡು ಪೋಲಿಸರ ಜೊತೆ ಸಾರ್ವಜನಿಕರು ವಾಗ್ವಾದ ನಡೆಸಿದರು. ದಿನಸಿ ಅಂಗಡಿಗಳು, ತರಕಾರಿ ವ್ಯಾಪಾರ, ಹೂ,ಹಣ್ಣು ಹೋಟಲ್ಗಳು ಓಪನ್ ಆಗಿದ್ದರೂ ಕೂಡ ಗ್ರಾಹಕರಿಲ್ಲದೆ ವ್ಯಾಪರ ನಷ್ಠವಾಗಿದೆ ಎಂದು ದಿನಸಿ ಅಂಗಡಿ ಮಾಲೀಕರು ತಮ್ಮ ಅಳಲನ್ನು ತೋಡಿಕೊಂಡರು.

Leave a Comment

Your email address will not be published. Required fields are marked *

Translate »
Scroll to Top