ಒಗ್ಗಟ್ಟಿನ ಬಲದಿಂದ ನನ್ನ ಗೆಲವು ಶರಣಗೌಡ ಪಾಟೀಲ ಬಯ್ಯಾಪೂರ

ಕುಷ್ಟಗಿ:- ಕೊಪ್ಪಳ ಮತ್ತು ರಾಯಚೂರು ಜಿಲ್ಲೆಯ ಸ್ಥಳೀಯ ಸಂಸ್ಥೆ ವಿಧಾನ ಪರಿಷತ್ತು ಚುಣಾವಣೆಯಲ್ಲಿ ನಮ್ಮ ಪಕ್ಷದ ನಾಯಕರುಗಳ ಒಗ್ಗಟ್ಟಿನಿಂದ ಇವತ್ತು ನಾನು 427 ಮತಗಳ ಅಂತರದಿಂದ ಜಯಗಳಿಸಲು ಸಾಧ್ಯವಾಗಿದೆ ಎಂದು ನೂತನ ವಿಧಾನ ಪರಿಷತ್ತು ಸದಸ್ಯ ಶರಣಗೌಡ ಪಾಟೀಲ ಬಯ್ಯಾಪೂರ ಹೇಳಿದರು. ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಇವರ ಹುಟ್ಟು ಹಬ್ಬದ ಅಂಗವಾಗಿ ಶುಭ ಕೊರಲು ಆಗಮಿಸಿದ ವೇಳೆ ಸುದ್ದಿಗರೊಂದಿಗೆ ಮಾತನಾಡಿದ ಅವರು ನಾನು ಮತ್ತು ತಮ್ಮ ತಂದೆ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಅವರ ಪರಿಶ್ರಮದಿಂದ ಹಾಗೂ ಕಾಂಗ್ರೆಸ್ ಪಕ್ಷದ ಎಲ್ಲಾ ನನ್ನ ನಾಯಕರುಗಳ ಒಗ್ಗಟ್ಟಿನಿಂದ
ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಲು ಕಾರಣವಾಯಿತು ಎಂದರು.

ಆದರೆ ಮುಂದಿನ ದಿನಾಮನಗಳಲ್ಲಿ ಕೊಪಳ-ರಾಯಚೂರು ಗ್ರಾಮ ಪಂಚಾಯತ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಗಳ ಅಭಿವೃದ್ಧಿಗೆ ಒತ್ತು ಕೊಟ್ಟು ಹಿರಿಯರ ಮಾರ್ಗದರ್ಶನದಲ್ಲಿ ನಡೆದುಕೊಂಡು ನನಗೆ ಮತ ನೀಡಿರುವ ಮತದಾರರ ಋಣ ತಿರಸಲು ಪಣ ತೊಡುತ್ತೇನೆ, ಆದರೆ ಇವತ್ತು ಬಿಜೆಪಿಯವರು ನನ್ನ ಮೇಲೆ ಅಪಪ್ರಚಾರ ಮಾಡುವಂತದ್ದು ಶುದ್ಧ ಸುಳ್ಳು ಯಾಕೆಂದರೆ ಅವರುಗಳು ನಮ್ಮ ಸಂಸ್ಕೃತಿ ಬಗ್ಗೆ ಮಾತನಾಡುತ್ತಾರೆ ಆದರೆ ನಮ್ಮ ಮನೆತನದ ಸಂಸ್ಕೃತಿ ಇವತ್ತಿನಿಂದ ಬಂದಿದ್ದು ಅಲ್ಲ ಸುಮಾರು ವರ್ಷದಳಿಂದ ಸಂಸ್ಕೃತಿಯನ್ನು ಉಳಿಸಿಕೊಂಡ ಬಂದಿದೆ ನನಗೆ ಸಂಸ್ಕೃತಿಯ ಪಾಠವನ್ನು ಹೇಳುವಂತದ್ದು ಸರಿಯಲ್ಲ. ಪ್ರಧಾನ ಮಂತ್ರಿ ಬಗ್ಗೆ ನಾನು ನನ್ನ ಹಾಡು ಬಾಷೆಯಲ್ಲಿ ಮಾತನಾಡಿದ್ದೇನೆ ವಿನಹ ಬೇರೆ ಕಾರಣದಿಂದ ಬೇರೆ ಕಾರಣಕ್ಕೆ ಅಲ್ಲ ಈ ವಿಷಯದ ಬಗ್ಗೆ ಆವತ್ತೆ ವಿಶಾದ ವ್ಯಕ್ತಪಡಿಸಿದ್ದೇನೆ ಆದರೆ ಬಹಳ ದಿನಗಳ ಹಿಂದೆ ಮಾತನಾಡಿದನ್ನು ಈಗ ಚುಣಾವಣೆ ಸಂದರ್ಭದಲ್ಲಿ ಅದನ್ನು ಬಿಜೆಪಿಯವರು ಜಾಲತಾಣದಲ್ಲಿ ಹರಿ ಬಿಟ್ಟಿದ್ದರು ಆದರೆ ಬಿಜೆಪಿಯವರಿಗೆ ನನ್ನ ಬಗ್ಗೆ ಅಪಪ್ರಚಾರ
ಮಾಡಲು ಯಾವುದು ವಿಷಯ ಇರಲಿಲ್ಲ ಇದು ಒಂದು ಸಣ್ಣ ತಪ್ಪು ಆವತ್ತೆ ನಾನು ಕ್ಷಮೆ ಕೇಳಿದ್ದೇನೆ ಆದ್ದರಿಂದ ಮತದಾರರು ನನ್ನ ಮೇಲೆ ನಂಬಿಕೆ ಇಟ್ಟು ಇವತ್ತು 427 ಮತಗಳ ಹಂತರದಿಂದ ನನ್ನುನ್ನು ಗೆಲ್ಲಿಸಿದ್ದಾರೆ ಕೊಪ್ಪಳ ಮತ್ತು ಮತದಾರರ ಪ್ರಭುಗಳಿಗೆ ಅಭಿನಂದನೆಗಳನ್ನು ತಿಳಿಸಿದರು.

Leave a Comment

Your email address will not be published. Required fields are marked *

Translate »
Scroll to Top