ಮಹಾತ್ಮಗಾಂಧಿ ಪ್ರತಿಮೆ ನಿರ್ಲಕ್ಷಕ್ಕೆ ಒಳಗಾಗಿದೆ

ಮರಿಯಮ್ಮನಹಳ್ಳಿ : ನಮ್ಮ ದೇಶದಾದ್ಯಂತ ಆಚರಿಸುವ ರಾಷ್ಟ್ರೀಯ ಹಬ್ಬ ಗಾಂಧಿಜಯಂತಿ. ಎಲ್ಲಾ ಶಾಲೆಗಳಲ್ಲಿ, ಸರ್ಕಾರಿ ಕಛೇರಿಗಳಲ್ಲಿ ಮತ್ತು ಸಂಘ ಸಂಸ್ಥೆಗಳಲ್ಲಿ ಗಾಂಧಿಜಿಯವರ ಭಾವ ಚಿತ್ರವನ್ನು ಇಟ್ಟು ಪೂಜೆಯನ್ನು ಸಲ್ಲಿಸುತ್ತಾರೆ. ಶಾಲೆಗಳಲ್ಲಿ ಮತ್ತು ಕಾಲೇಜುಗಳಲ್ಲಿ ಅಂದು ಗಾಂಧಿಜಿಯವರ ಬಗ್ಗೆ ಹಾಗೂ ಅವರ ಸಾಧನೆಗಳ ಬಗ್ಗೆ ಜೊತೆಗೆ ಅವರ ಜೀವನದ ಚರಿತ್ರೆಯನ್ನು ಮಕ್ಕಳಿಗೆ ಹೇಳುತ್ತಾರೆ. ದೇಶವು ಗಾಂಧಿಜಯಂತಿ ದಿನ ಎಂದು ಸಂಭ್ರಮದಲ್ಲಿ ಮುಳುಗಿದೆ. ಆದರೆ ದಾಸ್ಯದ ಸಂಕೋಲೆಯಿಂದ ದೇಶವನ್ನು ಸ್ವಾತಂತ್ರ್ಯಗೊಳಿಸಿದ ರಾಷ್ಟ್ರಪಿತ ಮಹಾತ್ಮ ಗಾಂಧಿಯವರನ್ನು ರಾಷ್ಟ್ರದಲ್ಲೇಡೆ ಸ್ಮರಿಸಲಾಗುತ್ತದೆ. ಜಗತ್ತಿನಾದ್ಯಂತ ಮಹಾತ್ಮ ಗಾಂಧಿಯ ಪ್ರತಿಮೆಗಳು ಅನಾವರಣಗೊಂಡು ಅವುಗಳಿಗೆ ಗೌರವ ನೀಡುವುದು ಕೇಳಿದ್ದೇವೆ. ಆದರೆ ಮರಿಯಮ್ಮನಹಳ್ಳಿಯ ಸಮೀಪದ ಡಣಾಪುರ ಗ್ರಾಮಪಂಚಾಯತಿ ವ್ಯಾಪ್ತಿಯ ಹನುಮನಹಳ್ಳಿ ಗ್ರಾಮದ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿರುವ ಸರ್ಕಾರಿ ಶಾಲೆಯ ಮಕ್ಕಳ ವನದಲ್ಲಿರುವ ರಾಷ್ಟ್ರಪಿತ ಮಹಾತ್ಮಗಾಂಧಿ ಪ್ರತಿಮೆ ನಿರ್ಲಕ್ಷಕ್ಕೆ ಒಳಗಾಗಿದೆ. 1998ರಲ್ಲಿ ಪ್ರತಿಷ್ಠಾಪನೆಯಾದ ಈ ಪ್ರತಿಮೆಯ ಕೆಲ ಅಂಗಗಳು ಮುಕ್ಕಾಗಿವೆ, ಮುಖದ ಮೇಲಿನ ಕನ್ನಡಕ ಹಾಗೂ ಕೈಯಲ್ಲಿನ ಕೋಲು ಮಾಯವಾಗಿವೆ. ಪ್ರತಿಮೆಗಾಗಿ ನಿರ್ಮಿಸಿದ್ದ ಕಟ್ಟಡ ಬಿರುಕಬಿಟ್ಟಿದೆ ಯಾವಗಾಲಾದರು ಕುಸಿಯಬಹುದು.

ರಕ್ಷಣೆಗಾಗಿ ಸುತ್ತಲು ನಿರ್ಮಿಸಿದ ಗ್ಯಾಲರಿ, ಮೇಲ್ಛಾವಣೆಯ ಶೀಟುಗಳು ಕಿತ್ತು ಹೋಗಿವೆ. ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಾಂಧಿಜಯಂತಿ ದಿನವುಕೂಡ ಈ ಪ್ರತಿಮೆಯನ್ನು ಯಾರು ಗಮನಿಸುವುದಿಲ್ಲ. ಸುಮಾರು ವರ್ಷಗಳಿಂದ ಈ ಪ್ರತಿಮೆಗೆ ಸೂಕ್ತ ಭದ್ರತೆ ಇಲ್ಲದೇ ಪ್ರತಿಮೆಯು ಭಗ್ನಗೊಂಡಿದೆ. ಇದರಿಂದ ಮಕ್ಕಳ ವನಕ್ಕೆ ಭೇಟಿನೀಡುವ ವಿಹಾರಿಗಳು ಬೇಸರ ವ್ಯಕ್ತಪಡಿಸುತ್ತ, ರಾಷ್ಟ್ರಪಿತನಿಗೆ ಇರುವ ಗೌರವಕ್ಕೆ ಧಕ್ಕೆ ಬರದಂತೆ ಕೂಡಲೇ ಭಗ್ನಗೊಂಡ ಈ ಪ್ರತಿಮೆಯನ್ನು ಕೂಡಲೇ ಬದಲಾಯಿಸಬೇಕು ಇಲ್ಲವೆ ಅದನ್ನು ಬೇರೇಡೆ ವರ್ಗಾಯಿಸಬೇಕೆನ್ನುತ್ತಾರೆ. ಸಂಬಂಧಿಸಿದ ಸರ್ಕಾರ ಇಲಾಖೆಯಾಗಲಿ, ಗ್ರಾಮಪಂಚಾಯತಿ ಪಿಡಿಓ ಆಗಲಿ, ಜನಪ್ರತಿನಿಧಿಗಳಾಗಲಿ, ಇತ್ತಕಡೆ ಗಮನಹರಿಸಿ ಗಾಂಧಿ ಪ್ರತಿಮೆಯ ಜೀರ್ಣೋದ್ದಾರಕ್ಕೆ ಮುಂದಾಗುವರೇ ಎಂದು ಕಾದು ನೋಡಬೇಕಿದೆ.?


ಮಕ್ಕಳ ಮನೋವಿಕಾಸ ಹಾಗೂ ದೈಹಿಕ ಸಾಮಥ್ರ್ಯಕ್ಕಾಗಿ ಆಟೋಟಗಳನ್ನಾಡಲಿ, ಎಲ್ಲಾ ವಯೋಮಾನದವರಿಗೆ ವಾಯುವಿಹಾರ ಮಾಡಲು ಹನುಮನಹಳ್ಳಿ ಗ್ರಾಮದ ಶಾಲಾ ಆವರಣದಲ್ಲಿ ಸ್ಥಳೀಯ ಗಣಿ ಉದ್ಯಮವೊಂದು ಸುಮಾರು 10-12 ವರ್ಷಗಳ ಹಿಂದೆ ಬಾಲವನ ನಿರ್ಮಿಸಿತ್ತು. ಆರಂಭದಲ್ಲಿ ಈ ವನದಲ್ಲಿ ಸಂಜೆಯಾದರೆ ಸಾಕು ಸಾರ್ವಜನಿಕರು, ಮಹಿಳೆಯರು ವಾಯುವಿಹಾರಕ್ಕೆ ಇಲ್ಲಿಗೆ ಬರುತ್ತಿದ್ದರು. ಅಲ್ಲದೇ ಅನೇಕ ಪೋಷಕರು ತಮ್ಮ ಪುಟ್ಟ-ಪುಟ್ಟ ಮಕ್ಕಳೊಂದಿಗೆ ವನಕ್ಕೆ ಬಂದು ಇಲ್ಲಿನ ಅನೇಕ ಆಟಿಕೆಗಳ ಮೂಲಕ ಆಟವಾಡಿಸಿದ ಈ ವನ ಇಂದು ಸಮರ್ಪಕ ನಿರ್ವಹಣೆ ಇಲ್ಲದೆ ಅನಾಥವಾಗಿದೆ. ಈ ವನದಲ್ಲಿ ಸುಮಾರು ವರ್ಷಗಳ ಹಿಂದೆ ಸ್ಥಾಪಿತಗೊಂಡ ರಾಷ್ಟ್ರಪಿತ ಮಹಾತ್ಮ ಗಾಂಧಿ ಪ್ರತಿಮೆ ಕೂಡ ಭಗ್ನಗೊಂಡಿದೆ ಆದರೆ ಇದುವರೆಗೂ ಅದನ್ನು ಯಾರು ಬದಲಾಯಿಸಲಾಗಲಿಲ್ಲ ಎಂದು ಹನುಮನಹಳ್ಳಿ ಗ್ರಾಮದ ಸಾರ್ವಜನಿಕರು ದೂರಿದರು.

Leave a Comment

Your email address will not be published. Required fields are marked *

Translate »
Scroll to Top