ಅರ್ಥಪೂರ್ಣವಾಗಿ ನಡೆದ ಅಪೌಷ್ಟಿಕತೆ ಹೋಗಲಾಡಿಸುವ ಕಾರ್ಯಕ್ರಮ

ಕೊಪ್ಪಳ : ಕೇಂದ್ರ ಮತ್ತು ರಾಜ್ಯ ಸರಕಾರ ಜಾರಿಗೆ ತಂದಿರುವಂತಹ ಬಹು ಮುಖ್ಯ ಕಾರ್ಯಕ್ರಮವಾಗಿರುವ ಬಾಣತಿಯರಿಗೆ ಹಾಗೂ ಗರ್ಭಿಣಿಯರಿಗೆ ಮತ್ತು ಅಪೌಷ್ಟಿಕತೆಯಿಂದ ಬಳಲುವ ಮಕ್ಕಳಿಗೆ ಪೋಷಣ್ ಅಭಿಯಾನ ಮಾಸಾಚರಣೆ ಮಾತೃ-ವಂದನಾ, ಮಾತೃ-ಪೂರ್ಣ, ಮಾತೃಶ್ರೀ ಯೋಜನೆ ಹಾಗೂ ಶಾಲಾ-ಪೂರ್ವ ಶಿಕ್ಷಣ (ಟಾಟಾ- ಟ್ರಸ್ಟ್ ಕಲಿಕಾ ವಿಭಾಗ) ಮಗುವಿನ ಮೊದಲ ಸಾವಿರ ದಿನಗಳು ಬಹು ಮುಖ್ಯ ಕಾರ್ಯಕ್ರಮ ಬಹಳ ಅರ್ಥ ಪೂರ್ಣವಾಗಿ ಪಟ್ಟಣದ 16ನೇ ವಾರ್ಡಿನ ಶ್ರೀ ಮಲ್ಲಿಕಾರ್ಜುನ ಸಮುದಾಯ ಭವನದಲ್ಲಿ ನಡೆಯಿತು. ನಂತರ ಕಾರ್ಯಕ್ರಮ ಕುರಿತು ಮಾತನಾಡಿದ ಶಿಶುಅಭಿವೃದ್ಧಿ ವ್ಯವಸ್ಥಾಪಕಿ ಸರಸ್ವತಿ ಮಂಗಳೂರ ಮಾತನಾಡಿ ಅಪೌಷ್ಟಿಕತೆ ಹೋಗಲಾಡಿಸಲು ಹಸಿ ತರಕಾರಿ ಸೊಪ್ಪು, ಮೊಳಕೆಯೊಡೆದ ಹೆಸರು, ಮಡಿಕೆ ಕಾಳು ಉಪಯೋಗ ಮಾಡಿ ಪೌಷ್ಟಿಕ ಪಡೆದುಕೊಳ್ಳಬೇಕಾಗಿದೆ ಎಂದರು.

ತದನಂತರ 16 ನೇ ವಾರ್ಡಿನ ನೂತನ ಪುರಸಭೆ ಸದಸ್ಯೆಯಾದ ಅಕ್ಕಮಹಾದೇವಿ ನಾಯಕವಾಡಿ ಅವರು ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಹಿರಿಯ ಮೇಲ್ವಿಚಾರಕಿ ವಿದ್ಯಾವತಿ, ಯಮನಮ್ಮ FDC, ಅಂಗನವಾಡಿ ಕಾರ್ಯಕರ್ತೆಯರಾದ ಶಿವಲಿಂಗಮ್ಮ ಹಿರೇಮಠ, ಭಾರತಿ ಚಟ್ಟೆರ್, ಯಮನಮ್ಮ ಯಮಕನಮರಡಿ, ಖಾಜಾಬನಿ ಸುಂಕದ್, ಪದ್ಮಾ ನಾಗೂರು, ಹನುಮವ್ವ ಕಟ್ಟಿಮನಿ, ಶರಣಮ್ಮ ಸೋಮನಕಟ್ಟಿ, ನಿರ್ಮಲಾ ಹಾಗೂ ಬಾಲವಿಕಾಸ ಸಮಿತಿ ಸದಸ್ಯೆ ಲಕ್ಷ್ಮಿ ಪೊಲೀಸ್ ಪಾಟೀಲ್, ಆಶಾ ಕಾರ್ಯಕರ್ತೆ ಕೆ. ಲಕ್ಷ್ಮಿ , ಗರ್ಭಿಣಿ ಜರೀನಾ ಬೇಗಂ, ಜನನಿ ಆಸ್ಪತ್ರೆ ಸಿಂಧನೂರಿನ
ಯಂಕಮ್ಮ, ಸೇರಿದಂತೆ ಇತರರಿದ್ದರು.

Leave a Comment

Your email address will not be published. Required fields are marked *

Translate »
Scroll to Top