ಭಾರತೀಯ ಶಿಕ್ಷಣ ವ್ಯವಸ್ಥೆಗೆ ಶಂಕರ ಭಾಗವತ್ಪಾದರ ತತ್ವಗಳು ಮಾರ್ಗದರ್ಶನವಾಗಿವೆ

ಬೆಂಗಳೂರು ; ಭಾರತೀಯ ಶಿಕ್ಷಣ ವ್ಯವಸ್ಥೆಗೆ ಶಂಕರ ಭಗವತ್ಪಾದರ ತತ್ವಗಳು ಮಾರ್ಗದರ್ಶನವಾಗಿವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ. ಯಡತೊರೆ ಶ್ರೀ ಯೋಗಾನಂದೇಶ್ವರ ಸರಸ್ವತಿ ಮಠದ ಪೀಠಾಧೀಶ ಶಂಕರ ಭಾರತಿ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಆರು ತಿಂಗಳ ಭಾಗತ್ಪಾದರ ತತ್ವ ಸಂದೇಶಗಳ ಪ್ರಸರಣಕ್ಕಾಗಿ ನಡೆದ ದೇಶ ಪರ್ಯಟನೆ ಯಾತ್ರೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ನಗರದ ಶಿಕ್ಷಕರ ಸದನದಲ್ಲಿ ಆಯೋಜಿಸಿದ್ದ ಪ್ರಮಾಣಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತೀಯ ಶಿಕ್ಷಣ ವ್ಯವಸ್ಥೆಗೆ ಶಂಕರರ ತತ್ವಾದರ್ಶಗಳನ್ನು ಅನುಸರಿಸುತ್ತಿರುವ ಯಡತೊರೆ ಮಠದ ಸ್ವಾಮೀಜಿ ಅವರ ಮಾರ್ಗದರ್ಶನ ಅಗತ್ಯವಾಗಿದೆ ಎಂದರು.ಯಾವುದೋ ಧಾರ್ಮಿಕ ತಾಕಲಾಟದ ಸಂದರ್ಭದಲ್ಲಿ ತಿಪಟೂರಿನಲ್ಲಿ ಯುವ ಐಪಿಎಸ್ ಅಧಿಕಾರಿ ಮತ್ತು ಡಿವೈಎಸ್ ಪಿಯಾಗಿದ್ದ ನಿಂಬಾಳ್ಕರ್ ಎಂಬುವರು ಅಧಿಕಾರಿ ಆಗ ತಮಗೆ ಹೇಳಿದ್ದರು. ದೇಶದಲ್ಲಿ ಶ್ರೇಷ್ಠ ಸ್ವಾಮೀಜಿ ಎಂದರೆ ಶಂಕರಭಾಗತ್ಪಾದರು. ಉಳಿದವರು ಸ್ವಾಮೀಜಿಗಳೇ ಅಲ್ಲ ಎಂದಿದ್ದರು. ಆ ನಂತರ ಶಂಕರರ ತತ್ವಗಳು, ಆದರ್ಶಗಳು, ಏಕಾತ್ಮ ಸಿದ್ಧಾಂತಗಳು ತಮ್ಮ ಮೇಲೆಯೂ ಅಪಾರ ಪ್ರಭಾವ ಬೀರಿವೆ ಎಂದರು.ಯಡತೊರೆ ಶ್ರೀ ಯೋಗಾನಂದೇಶ್ವರ ಸರಸ್ವತಿ ಮಠದ ಪೀಠಾಧೀಶ ಶಂಕರ ಭಾರತಿ ಸ್ವಾಮೀಜಿ ಮಾತನಾಡಿ, ಶಂಕರರ ತತ್ವಗಳು ಕೇವಲ ಭಾರತವಷ್ಟೇ ಅಲ್ಲ. ನೆರೆಯ ನೇಪಾಳದಲ್ಲೂ ಅತ್ಯಂತ ಹೆಚ್ಚಿನ ಪ್ರಭಾವ ಬೀರಿದೆ. ದೇಶಾದ್ಯಂತ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಅದರಲ್ಲೂ ವಿಶೇಷವಾಗಿ ಉತ್ತರ ಭಾರತ, ಮಧ್ಯ ಭಾರತದಲ್ಲಿ ಭಗವತ್ಪಾದರು ಬೀರಿರುವ ಪ್ರಭಾವವನ್ನು ನಾವು ಕಣ್ಣಾರೆ ಕಂಡಿದ್ದೇವೆ ಎಂದು ಹೇಳಿದರು.

ತಮ್ಮ 154 ದಿನಗಳ ದಿನಗಳ ದೀರ್ಘ ಪ್ರವಾಸ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಾಧು ಸಂತರೊಂದಿಗೆ ಭೇಟಿ ಮಾಡಿದ್ದು ಅತ್ಯಂತ ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ಪ್ರಧಾನಿ ಅವರಿಗೆ ನಾವು ಯಾವುದೇ ಬೇಡಿಕೆ ಸಲ್ಲಿಸಿರಲಿಲ್ಲ. ಆದರೆ ಶಂಕರ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸುವಂತೆ ಕೋರಿದೆವು. ಆಗ ಅವರು ಈ ಕುರಿತು ಘೋಷಣೆ ಮಾಡಬಹುದು. ಆದರೆ ಇದನ್ನು ಬಿಜೆಪಿ ಕಾರ್ಯಕ್ರಮ ಎನ್ನುವಂತೆ ಬಿಂಬಿಸುತ್ತಾರೆ. ಬಿಜೆಪಿಯರು ಇದೀಗ ಶಂಕರ ಭಾಗತ್ಪಾದರನ್ನು ಹಿಡಿದುಕೊಂಡು ಹೊರಟಿದ್ದಾರೆ ಎಂದು ಟೀಕೆ ಮಾಡುತ್ತಾರೆ. ಯೋಗ ದಿನವನ್ನು ಘೋಷಣೆ ಮಾಡಲಾಗಿದೆ. ಆದರೆ ಎಷ್ಟು ಮಠ, ಮಂದಿರಗಳಲ್ಲಿ ಯೋಗಕ್ಕೆ ಮಾನ್ಯತೆ ನೀಡಲಾಗುತ್ತಿದೆ. ಯೋಗವನ್ನು ನಿಜ ಅರ್ಥದಲ್ಲಿ ಪಾಲಿಸಲಾಗುತ್ತಿದೆ ಎಂದು ಪ್ರಶ್ನೆ ಮಾಡಿದರು. ಆದರೂ ಶಂಕರ ಜಯಂತಿ ಆಚರಿಸುವ ಬಗ್ಗೆ ಪರಿಶೀಲನೆ ಮಾಡುವುದಾಗಿ ಪ್ರಧಾನಿ ಹೇಳಿದ್ದಾಗಿ ತಿಳಿಸಿದರು.ರಾಜ್ಯ ಹೈಕೋರ್ಟ್ ನ ನ್ಯಾಯಮೂರ್ತಿ ಎಸ್.ಆರ್. ಕೃಷ್ಣಕುಮಾರ್ ಮಾತನಾಡಿ, ಧಾರ್ಮಿಕ ಜ್ಞಾನ ಧಾರ್ಮಿಕ ವಿಜ್ಞಾನವಾಗಿದೆ. ಆದಿ ಶಂಕರಚಾರ್ಯರು ದೇಶದ್ಯಾಂತ ಪೀಠಗಳನ್ನಷ್ಟೇ ಸ್ಥಾಪಿಸಿಲ್ಲ. ಧರ್ಮಪ್ರಸಾರಕ್ಕೆ ಒತ್ತು ನೀಡಿದರು. ಸಹಸ್ರಾರು ವರ್ಷಗಳು ಕಳೆದರೂ ಈ ಪೀಠಗಳು ತಮ್ಮ ಧಾರ್ಮಿಕ ಕಾರ್ಯದಲ್ಲಿ ಈಗಲೂ ನಿರತವಾಗಿವೆ. 800 ವರ್ಷಗಳ ಹಿಂದೆ ಯಡತೊರೆ ಮಠ ಸ್ಥಾಪನೆಯಾಗಿದ್ದು, ಈಗಲೂ ಇದು ತನ್ನ ಪರಂಪರೆಯನ್ನ ಮುಂದುವರೆಸಿದೆ ಎಂದರು.ಸ್ವಾಮೀಜಿ ಅವರ ಯಾತ್ರೆಯಲ್ಲಿ ಪಾಲ್ಗೊಂಡ ಹಲವರು ಮಾತನಾಡಿ, ಸ್ವಾಮೀಜಿ ನೇತೃತ್ವದಲ್ಲಿ ಆರು ತಿಂಗಳ ಕಾಲ ಭಾರತದಾದ್ಯಂತ ಶಂಕರ ಭಾರತೀ ಮಹಾಸ್ವಾಮಿಗಳು ಶಂಕರರ ತತ್ವಾದರ್ಶಗಳನ್ನು ಪ್ರಚುರಪಡಿಸಿದ್ದಾರೆ. ಈ ಯಾತ್ರೆ ಪೂರ್ಣ ಯಶಸ್ಸು ತಂದಿದೆ. ಎಲ್ಲಾ ಕಡೆಗಳಲ್ಲಿ ಯಡತೊರೆ ಮಠದ ಜತೆ ಉತ್ತಮ ಬಾಂಧವ್ಯ ಬೆಳೆದಿದೆ. ಕಾಶಿಯಲ್ಲಿ 170 ಪ್ರಮುಖ ಸ್ವಾಮೀಜಿಗಳು ಒಂದೆಡೆ ಸೇರಿದ್ದು ಐತಿಹಾಸಿಕ ಕಾರ್ಯಕ್ರಮವಾಗಿದೆ. ಕಾಶಿಯಲ್ಲಿ ಸೌಂದರ್ಯ ಲಹರಿ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದ್ದು ಒಂದು ವಿಶೇಷ ಎಂದು ಹೇಳಿದರು.

Leave a Comment

Your email address will not be published. Required fields are marked *

Translate »
Scroll to Top