ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ವಿದ್ಯಾರ್ಥಿಗಳ ಬೃಹತ್ ಹೋರಾಟ

ಕಂಪ್ಲಿ, ಡಿ, 30 ; ಇಂದು ಕಂಪ್ಲಿ ತಾಲೂಕುನಲ್ಲಿ AIDSO ವತಿಯಿಂದ ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕೆಂದು ನೂರಾರು ವಿದ್ಯಾರ್ಥಿಗಳು ತಹಶೀಲ್ದಾರರ ಕಛೇರಿ ಎದರು ಪ್ರತಿಭಟನೆ ಮಾಡಲಾಯಿತು. ನಂತರ ಮಾನ್ಯ ತಹಶೀಲ್ದಾರರ ಮೂಲಕ ಮಾನ್ಯ ಉನ್ನತ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆ ಉದ್ದೇಶಿಸಿ ಎಐಡಿಎಸ್‌ಓ ಜಿಲ್ಲಾ ಸೆಕ್ರೇಟರಿಯೇಟ್ ಸದಸ್ಯರಾದ ಕೆ.ಈರಣ್ಣ ಅವರು ಮಾತನಾಡುತ್ತಾ “ಅತಿಥಿ ಉಪನ್ಯಾಸಕರ ಬೇಡಿಕೆಗಳು ನ್ಯಾಯ ಸಮ್ಮತವಾಗಿದ್ದು ಅವುಗಳನ್ನು ಕೂಡಲೇ ಈಡೇರಿಸಬೇಕು. ಮತ್ತೊಂದೆಡ ಯಾವುದೇ ಪೂರ್ವ ತಯಾರಿಯಿಲ್ಲದೆ ಎನ್‌ಇಪಿ-2020(ರಾಷ್ಟಿಯ ಶಿಕ್ಷಣ ನೀತಿ-2020) ಹಠಾತ್ ಹೇರಿಕೆಯಿಂದ ರಾಜ್ಯದ ಎಲ್ಲಾ ವಿದ್ಯಾರ್ಥಿಗಳಲ್ಲಿ ನೂರೆಂಟು ಗೊಂದಲಗಳು ಸೃಷ್ಟಿಯಾಗಿದ್ದು, ವಿದ್ಯಾರ್ಥಿಗಳಿಗೆ ಹಲವಾರು ವಿಷಯಗಳ ಬಗ್ಗೆ ಸ್ಪಷ್ಟವಾದ ಮಾಹಿತಿ ದೊರೆತಿಲ್ಲ.

ಪದವಿ ಪ್ರಥಮ ಸೆಮಿಸ್ಟರ್‌ನ ಕೆಲವು ವಿಷಯಗಳಿಗೆ ಪಠ್ಯ ಪುಸ್ತಕ ದೊರೆತಿಲ್ಲ, ಪರೀಕ್ಷೆಯ ಪ್ರಶ್ನೆಪತ್ರಿಕೆಗಳು ಯಾವ ಮಾದರಿಯಲ್ಲಿರುತ್ತವೆ ಎನ್ನುವ ಪ್ರಶ್ನೆಗಳಿಗೆ ಉತ್ತರ ಸಿಗುತ್ತಿಲ್ಲ. ಅದರ ಮದ್ಯದಲ್ಲಿ 18 ದಿನಗಳಿಂದ ತರಗತಿಗಳು ನಡೆಯದಿರುವುದರಿಂದ ಜ್ಞಾನಾರ್ಜನೆಗೆ ಧಕ್ಕೆಯಾಗಿದ್ದು ಪರೀಕ್ಷೆಗಳನ್ನು ಎದುರಿಸುದು ಹೇಗೆ? ಎಂಬ ಆತಂಕ ಸೃಷ್ಟಿಯಾಗಿದೆ”. ರಾಜ್ಯದಲ್ಲಿ 14,000 ಅತಿಥಿ ಉಪನ್ಯಾಸಕರು 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಳೆದ 15-20ವರ್ಷಗಳಿಂದ ಕಾರ್ಯನಿರ್ವಾಹಿಸುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರ ಅವರಿಗೆ ಯಾವುದೇ ತರದ ಉದ್ಯೋಗ ಭದ್ರತೆ ಒದಗಿಸದೇ ಅತ್ಯಂತ ಕಡಿಮೆ ಸಂಬಳ ನೀಡುತ್ತಿದೆ. ಸರ್ಕಾರ ನೀಡುವ ಸಂಬಳದಿಂದ ದುಬಾರಿ ಬೆಲೆ ಏರಿಕೆಯ ಈ ದಿನಗಳಲ್ಲಿ ಜೀವನ ನಡೆಸುವುದು ಕಷ್ಟವಾಗಿದೆ. ಆದ್ದರಿಂದ ಅತಿಥಿ ಉಪನ್ಯಾಸಕರ ನ್ಯಾಯಯುತ ಬೇಡಿಕೆಗಳನ್ನು ಈ ಕೂಡಲೇ ಈಡೆರಿಸಬೇಕೆಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ AIDSO ಸದಸ್ಯರಾದ ವಿಶ್ವ, ಸುನಿಲ್, ಪ್ರಸಾದ್, ಸಾಗರ್, ಸಾಯಿ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Leave a Comment

Your email address will not be published. Required fields are marked *

Translate »
Scroll to Top