ಕುಡಿತ ಚಟದಿಂದ ದೂರ ಉಳಿದ ಕುಡಿತ ಬಿಟ್ಟ ವ್ಯಕ್ತಿಗಳಿಗೆ ಪುಸ್ಪವನ್ನು ಕೊಟ್ಟು ಸ್ವಾಗತಿಸಿದ ಶಾಸಕ

ಕುಷ್ಟಗಿ : ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ (ರಿ) ಕುಷ್ಟಗಿ ತಾಲೂಕು ಜಿಲ್ಲಾ ಜನಜಾಗೃತಿ ವೇದಿಕೆ,ಕೊಪ್ಪಳ ಇವರ ಸಹಭಾಗಿತ್ವದಲ್ಲಿ ಪರಮ ಪೂಜ್ಯ ಪದ್ಮವಿಭೊಷಣ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಮಾತೃಶ್ರೀ ಹೇಮಾವತಿ ಅಮ್ಮನವರ ಕೃಪಾಶೀರ್ವಾದಳೊಂದಿಗೆ ಜರಗುವ ಗಾಂಧಿ ಜಯಂತಿ ಸಂಭ್ರಾಮಾಚರಣೆಯ ಪ್ರಯುಕ್ತ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಗಾಂಧಿಸ್ಮರಣೆ ಮತ್ತು ದುಶ್ಚಟಗಳ ವಿರುದ್ಧ ಜನ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಕುಡಿತ ಚಟದಿಂದ ದೂರು ಉಳಿದು ಕುಡಿತ ಬಿಟ್ಟ ಹೊಸ ಜೀವನ ಪ್ರಾರಂಬಿದ ಸಮಾಜಕ್ಕೆ ಮಾದಾರಿಯಾದ ವ್ಯಕ್ತಿಗಳಿಗೆ ಪುಸ್ಪವನ್ನು ಕೊಟ್ಟು ಸ್ವಾಗತಿಸಿದರು.

ನಂತರ ಮಾತನಾಡಿದ ಶಾಸಕರು ಕುಷ್ಟಗಿ ಪಟ್ಟಣದಲ್ಲಿ ಅಷ್ಟೆ ಅಲ್ಲದೇ ಈ ರಾಜ್ಯದಾದ್ಯಂತ ಶ್ರೀ ಧರ್ಮಸ್ಥಳ ಮಂಜುನಾಥ ಗುಂಪು ಒಂದಲ್ಲ ಒಂದು ಸಮಾಜಕ್ಕೆ ಬೇಕಾಗುವಂತಹ ಮುಖ್ಯವಾದ ಯೋಜನೆಯನ್ನು ಹಾಕಿಕೊಂಡು ಕಾರ್ಯ ರೂಪಕ್ಕೆ ತಂದು ರೂಪಿಸುವಂತದ್ದು ನಿಜಕ್ಕು ಶ್ಲಾಘನೀಯ ಎಂದರು.
ದೃಷ್ಟಚಟದಿಂದ ದೂರ ಮಾಡುವಂತ ಪ್ರಯತ್ನವನ್ನ ನಿರಂತರ ಕಾರ್ಯವನ್ನು ಮಾಡುತ್ತಿದೆ ಬಡತನದಿಂದ ಬಳಲುವಂತ ಜನರನ್ನ ಸುಗಮ ರೀತಿಯಲ್ಲಿ ಜೀವನ ಸಾಗಿಸುವಂತ ಕೆಲಸವನ್ನು ಶ್ರೀ ಮಾಡುತ್ತಿದ್ದು ಇದು ದೊಡ್ಡ ಸಾಧನೆವಾಗಿದೆ ಆದರೆ ಇವತ್ತು‌ ಶ್ರೀ ಮಂಜುನಾಥ ಟ್ರಸ್ಟ್ಸ ರಕಾರಕ್ಕೆ ಮಾರ್ಗದರ್ಶನ ಮಾಡುವಂತ ಕಾರ್ಯವನ್ನು ಮಾಡುತ್ತಿದೆ. ಇಂತಹ ಕಾರ್ಯಕ್ರಮವನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು, ಪ್ರತಿಯೊಬ್ಬರು ದುಶ್ಚಟದಿಂದ ದೂರಾಗಿ ಮದ್ಯ ಪಾನ ಮುಕ್ತರಾಗಬೇಕು ಎಂದು ಹೇಳಿದರು.

ಕಾರ್ಯಕ್ರಮ ಉಪನ್ಯಾಸವನ್ನು ಯಲಬುರ್ಗಾ ತಾಲೂಕಿನ ಹಿರೇವಂಕಲಕುಂಟಾ ಸರಕಾರಿ ಪ್ರಥಮ ದರ್ಜೆ ಕಾಲೇಜ ಪ್ರಾರ್ಚಾರಾದ ಎಸ್.ವ್ಹಿ ಡಾಣಿ ದುಶ್ಚಟದ ಪರಿಣಾಮದ ಬಗ್ಗೆ ಉಪನ್ಯಾಸ ನೀಡಿದರು. ಇದೇ ವೇಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜಿಲ್ಲಾ ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ದೇವೇಂದ್ರಪ್ಪ ಬಳೂಟಗಿ ಮಾತನಾಡಿ ಮದ್ಯಪಾನ ಮಾಡುವದು ಆರೋಗ್ಯ ಹಾನಿಕಾರವಾಗಿದೆ ಯಾವುದೇ ದೃಶ್ಚಟ ಇರಲಿ ಮನುಷ್ಯನ ದೇಹಕ್ಕೆ ಒಳ್ಳೆಯ ಬೆಳವಣಿಗೆ.

Leave a Comment

Your email address will not be published. Required fields are marked *

Translate »
Scroll to Top