ಮಸ್ಕಿ : ಪಟ್ಟಣದಲ್ಲಿ ಈ ವಾರದ ಸಂಡೇ ಫಾರ್ ಸೋಷಿಯಲ್ ವರ್ಕ್ ಅಭಿಯಾನಕ್ಕೆ ಮಸ್ಕಿಯ ಸೇವಾ ಸಂಸ್ಥೆಗಳಾದ ಲಯನ್ಸ್ ಕ್ಲಬ್ ಆಫ್ ಮಸ್ಕಿ,ಸ್ವಾಮಿ ವಿವೇಕಾನಂದ ಹಾಗೂ ರಾಮಕೃಷ್ಣ ಆಶ್ರಮ ಮಸ್ಕಿ,ಶಿವರಾಜ್ ತಾಂಡೂರು ಹಾಗೂ ಸಂಗಡಿಗರು ಹಾಗೂ ಮಸ್ಕಿ ದೇವಾಂಗ ಸಮಾಜ, ಬಣಜಿಗ ಸಮಾಜ,ರಜಪೂತ ಸಮಾಜ,ಡಾ ಶಿವಶರಣಪ್ಪ ಇತ್ಲಿ ಫೌಂಡೇಶನ್,ಅಭಿನಂದನ್ ಶಿಕ್ಷಣ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಮಸ್ಕಿ ಇವರ ಜಂಟಿ ಸಹಯೋಗದಲ್ಲಿ ಮಸ್ಕಿಯ ರುದ್ರಭೂಮಿಗಳ ಸ್ವಚ್ಛತೆ ಮತ್ತು ಸಸಿ ನೆಡುವ ಕಾರ್ಯಕ್ರಮ ಮಾಡಲಾಯಿತು. ಶಿವರಾಜ್ ತಾಂಡೂರು ಅವರು ಜೆಸಿಬಿ ಹಾಗೂ ಸಿಬ್ಬಂದಿಯನ್ನು ಒದಗಿಸಿದರು. ಪುರಸಭೆ ಮಸ್ಕಿಯವರು ಜೆಸಿಬಿ ಹಾಗೂ ಸಿಬ್ಬಂದಿಯನ ಒದಗಿಸಿದರು. ಲಯನ್ಸ್ ಕ್ಲಬ್ ಆಫ್ ಮಸ್ಕಿ ಯವರು ಸಸಿ ಹಾಗೂ ಡೀಸಲ್ ಒದಗಿಸಿದರು. ಡಾ ಶಿವಶರಣಪ್ಪ ಇತ್ಲಿ ಫೌಂಡೇಶನ್ ವತಿಯಿಂದ ವಾಹನ ಸೌಲಭ್ಯ ಒದಗಿಸಿದರು. ಶ್ರೀರಾಮಕೃಷ್ಣ ಆಶ್ರಮ ಇವರು ಸಸಿಗಳನ್ನು ಒದಗಿಸಿದರು.

ಕಸ್ತೂರಿ ಇತ್ಲಿ ಇವರು ತಂಪು ಪಾನೀಯ ಮಾಡಿ ಕೊಂಡು ಬಂದಿದ್ದರು.
ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಸಿದ್ದರಾಮಯ್ಯ ಸೊಪ್ಪಿಮಠ,ಲಯನ್ಸ್ ಸದಸ್ಯರಾದ ಬಸಲಿಂಗಪ್ಪ ಲಿಂಗಶೆಟ್ಟಿ, ರವಿದೇಶ್ಮುಖ್, ಶಿವರಾಜ್ ಇತ್ಲಿ,ಮಹಾಂತೇಶ್ ಮಸ್ಕಿ, ಮಂಜುನಾಥ ಬಿಜ್ಜಳ್, ಕಸ್ತೂರಿ ಇತ್ಲಿ, ಮಲ್ಲಿಕಾರ್ಜುನ ಶ್ರೇಷ್ಠಿ, ರಾಮಕೃಷ್ಣ ಆಶ್ರಮದ ಸಿದ್ಧು ಜಿ,ಶರಣಪ್ಪ ತಾಂಡೂರು,ಮನೋಹರ್ ಪತ್ತಾರ,ರವಿಕುಮಾರ್, ಮಲ್ಲಿಕಾರ್ಜುನ ಕುರಿ, ಬಿಎಸ್ಎಫ್ ನ ಮನೋಜ್,ದೇವಾಂಗ ಸಮಾಜದ ವೆಂಕಟೇಶ್ ಬಿದರಿ, ವಿಶ್ವನಾಥ್ ಕಂಪ್ಲಿ, ರಜಪೂತ ಸಮಾಜದ ಸುಭಾಷ್ ಸಿಂಗ್,
ಅಭಿನಂದನ್ ಸಂಸ್ಥೆಯ ಗೌರವಾಧ್ಯಕ್ಷರಾದ ಶಿವಪ್ರಸಾದ್ ಕ್ಯಾತ್ನಟ್ಟಿ, ಸಂಸ್ಥಾಪಕರಾದ ರಾಮಣ್ಣ ಹಂಪರಗುಂದಿ,ಸದಸ್ಯರಾದ ಮಲ್ಲಿಕಾರ್ಜುನ ಬಡಿಗೇರ್, ಅಮಿತಕುಮಾರ್ ಪುಟ್ಟಿ, ಕಿಶೋರ್, ಕುಮಾರ ಶ್ರೀಶೈಲ ಇನ್ನಿತರರು ಉಪಸ್ಥಿತರಿದ್ದರು.
