ವರ್ಲ್ಡ್ ಆಫ್ ಹಾಸ್ಪಿಟಾಲಿಟಿಯಿಂದ ‘ದಿ ಇನ್ಕ್ರೆಡಿಬಲ್ ಚೆಫ್ ಚಾಲೆಂಜ್’ ದೇಶದ  ಅತಿ ದೊಡ್ಡ ಅಡುಗೆ ಸ್ಪರ್ಧೆ

ವರ್ಲ್ಡ್ ಆಫ್ ಹಾಸ್ಪಿಟಾಲಿಟಿ ಸಂಸ್ಥೆ ಮತ್ತು ದಕ್ಷಿಣ ಭಾರತ ಬಾಣಸಿಗರ ಸಂಘಟನೆ (ಸೌತ್ ಇಂಡಿಯಾ ಚೆಫ್ಸ್ ಅಸೋಸಿಯೇಷನ್ (ಎಸ್ಐಸಿಎ) ಸಹಯೋಗದೊಂದಿಗೆ ದೇಶದ ಅತಿ ಪ್ರತಿಷ್ಠಿತ, ಜನಪ್ರಿಯ ಅಡುಗೆ ಸ್ಪರ್ಧೆ ‘ದಿ ಇನ್ಕ್ರೆಡಿಬಲ್ ಚೆಫ್ ಚಾಲೆಂಜ್ 2024 ಘೋಷಿಸಿದೆ. ಇನ್ಕ್ರೆಡಿಬಲ್ ಚೆಫ್ ಚಾಲೆಂಜ್ (ಐಸಿಸಿ) ವೃತ್ತಿಪರ ಬಾಣಸಿಗರ ಅಸಾಧಾರಣ ಪಾಕಶಾಲೆಯ ಕೌಶಲ್ಯಗಳನ್ನು ಅನ್ವೇಷಿಸಲು ಮತ್ತು ಗುರುತಿಸಲು ವಿನ್ಯಾಸಗೊಳಿಸಲಾದ ಸ್ಪರ್ಧೆಯಾಗಿದ್ದು, ಆ ಮೂಲಕ ದೇಶದ ಎಲ್ಲ ಮೂಲೆ ಮೂಲೆಗಳ ಪ್ರತಿಭಾನ್ವಿತ ಬಾಣಸಿಗರಿಗೆ ಅತ್ಯುತ್ತಮ ವೇದಿಕೆ ಒದಗಿಸುತ್ತಿದೆ. ಈ ವಾರ್ಷಿಕ ಸ್ಪರ್ಧೆಯು ಪಾಕಶಾಲೆಯಲ್ಲಿನ ಕಲೆ, ಆಹಾರ ತಯಾರಿಕೆ ಮತ್ತು ಪ್ರಸ್ತುತಿಯಲ್ಲಿ ಶ್ರೇಷ್ಠತೆಯನ್ನು ಸಾಧಿಸಲು ಅತ್ಯುತ್ತಮ ವೇದಿಕೆ. ಇದು ಪಾಕಶಾಲೆಯ ಉತ್ಕೃಷ್ಟತೆಯನ್ನು ಹರಡಲು, ದೇಶದಾದ್ಯಂತದ ನೂರಾರು ಪಾಕಶಾಲೆಯ ಪ್ರತಿಭೆಗಳಿಗೆ ಅವರ ಪಾಂಡಿತ್ಯದ ಕೌಶಲ್ಯಗಳನ್ನು ಪ್ರದರ್ಶಿಸಲು ವೇದಿಕೆಯನ್ನು ಒದಗಿಸುತ್ತದೆ.

ಈ ವೇದಿಕೆಯು, ನಮ್ಮ ದೇಶದಲ್ಲಿ ಬಾಣಸಿಗರಿಗೆ ತಮ್ಮ ಕೌಶಲ್ಯತೆ ಪ್ರದರ್ಶಿಸಲು ಇರುವ ಅತಿ ದೊಡ್ಡ ವೇದಿಕೆ ಆಗಿದೆ. ಇಲ್ಲಿ ಬಾಣಸಿಗರ ಪಾಕಶಾಲೆಯ ಕೌಶಲ್ಯವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಪಡೆದ ಬಾಣಸಿಗರ ಸಮಿತಿ ಮೌಲ್ಯಮಾಪನ ನಡೆಸಿ, ಮಾನ್ಯತೆ ಮತ್ತು ಪ್ರತಿಕ್ರಿಯೆಯನ್ನು ನೀಡುತ್ತದೆ. ಈ ಗೌರವಾನ್ವಿತ ತೀರ್ಪುಗಾರರ ಸಮಿತಿಯು ಸದಸ್ಯರು ಅಡುಗೆಯ, ಬಾಣಸಿಗರ ಕೌಶಲ್ಯದ ರಚನಾತ್ಮಕ ಮೌಲ್ಯಮಾಪನವನ್ನು  ಖಚಿತಪಡಿಸುತ್ತಾರೆ. ಜೊತೆಗೆ ಬಾಣಸಿಗರಿಗೆ ಅವರ ಕೌಶಲ್ಯಗಳನ್ನು ಇನ್ನಷ್ಟು ಸುಧಾರಿಸಲು ಮತ್ತು ಅವರ ಪಾಕಶಾಲೆಯ ವೃತ್ತಿಜೀವನದಲ್ಲಿ ಇನ್ನಷ್ಟು ಸಾಧನೆಗೆ ಪ್ರೇರೇಪಣೆ, ಸಲಹೆ ನೀಡುತ್ತಾರೆ.

 ಲೈವ್ ಕುಕಿಂಗ್, ಫುಡ್ ಕಾರ್ವಿಂಗ್, ಕೇಕ್ ಡೆಕೋರೇಷನ್ಸ್ ಮತ್ತು ಇತರ ಹಲವು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಈ ಸ್ಪರ್ಧೆಗೆ ಈಗಾಗಲೇ ಅರ್ಜಿ ಸ್ವೀಕಾರ ಆರಂಭವಾಗಿದ್ದು, ದೊಡ್ಡ ಸಂಖ್ಯೆಯಲ್ಲಿ ದೇಶಾದ್ಯಂತದಿಂದ ಬಾಣಸಿಗರು ಸ್ಪರ್ಧೆಗಳಿಗೆ ತಮ್ಮ ಹೆಸರು ನೋಂದಾಯಿಸಿಕೊಳ್ಳುತ್ತಿದ್ದಾರೆ.

 ಅಡುಗೆ ಅರಮನೆಯ  ಅಪ್ರತಿಮ ಸಾಧಕ, ಈ ಕ್ಷೇತ್ರದ ದಂತ ಕತೆ ಎಂದೇ ಪ್ರಸಿದ್ದವಾಗಿರುವ  ಎಸ್ಐಸಿಎ (SICA) ಅಧ್ಯಕ್ಷ ಸೆಲೆಬ್ರಿಟಿ ಚೆಫ್ ದಾಮೋದರನ್ ಕೆ ಪ್ರಕಾರ, ಈ ಕಾರ್ಯಕ್ರಮ  ಅಡುಗೆ ಲೋಕದ ಅತಿ ಪ್ರತಿಷ್ಠಿತ- ಪ್ರಸಿದ್ಧ ಕಾರ್ಯಕ್ರಮ. “ಹೊಸ ಭಕ್ಷ್ಯಗಳನ್ನು ರೂಪಿಸುವುದು, ಅಡುಗೆಯ ಕಲಾತ್ಮಕ ಅಭಿವ್ಯಕ್ತಿಯನ್ನು ಪ್ರಕಟ ಪಡಿಸುವುದು, ಟೆಕಶ್ಚರ್, ಪರಿಮಳ ಮತ್ತು ಪ್ರಸ್ತುತಿ ಹೀಗೆ ಅಡುಗೆಯ ಪ್ರತಿಯೊಂದು ಅಂಶಗಳನ್ನು ಸಾಮರಸ್ಯದಿಂದ ಸಂಯೋಜಿಸುವ ಈ ಇನ್ಕ್ರೆಡಿಬಲ್ ಚೆಫ್ ಚಾಲೆಂಜ್ ಎಲ್ಲದಕ್ಕೂ ಸಾಕ್ಷಿಯಾಗುವ ಸ್ಥಳವಾಗಿದೆ,” ಎಂದು ತಿಳಿಸಿದರು.

 ಜಿಆರ್ಟಿ ಹೋಟೆಲ್ಸ್ ಮತ್ತು ರೆಸಾರ್ಟ್ಸ್ನ ಕಾರ್ಪೊರೇಟ್ ಎಕ್ಸಿಕ್ಯೂಟಿವ್ ಚೆಫ್ ಮತ್ತು ಎಸ್ಐಸಿಎ (SICA), ಪ್ರಧಾನ ಕಾರ್ಯದರ್ಶಿ ಸೀತರಾಮ್ ಪ್ರಸಾದ್ ಪ್ರಕಾರ ಅಡುಗೆ ಕಲಿಕೆ ಅನ್ನುವುದು ಒಂದು ನಿರಂತರ  ಪ್ರಕ್ರಿಯೆ. ಪರಿಷ್ಕರಣೆಯ ಮೂಲಕ ಅತ್ಯುತ್ತಮ ರುಚಿ, ಪರಿಮಳ ಸಾಧಿಸುವುದು ಒಂದು ಕ್ರಿಯಾತ್ಮಕ ಕೌಶಲ್ಯವಾಗಿದೆ. ಅಭ್ಯಾಸ, ಪ್ರಯೋಗ ಮತ್ತು ಯಶಸ್ಸು ಮತ್ತು ವೈಫಲ್ಯಗಳೆರಡರಿಂದಲೂ ಕಲಿಕೆಯ ಮೂಲಕ, ಒಬ್ಬರು ತಮ್ಮ ಅಡುಗೆ ಮನೆಯ ಸಾಮರ್ಥ್ಯಗಳನ್ನು ಉತ್ತಮ ಪಡಿಸಿಕೊಳ್ಳುತ್ತಾರೆ. ಊಟದ ತಯಾರಿಯಿಂದ  ಆರಂಭವಾಗುವ ಈ ಕಲಿಕೆ ಪ್ರಯತ್ನ, ಪ್ರಯೋಗ ಸ್ಮರಣೀಯ ಅನುಭವ ನೀಡುವ ಭಕ್ಷ್ಯಗಳೊಂದಿಗೆ ಮುಂದುವರಿಯುತ್ತದೆ. ಈ ಕಲೆಯಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಯುವ ಬಾಣಸಿಗರು ಇನ್ಕ್ರೆಡಿಬಲ್ ಚೆಫ್ ಚಾಲೆಂಜ್ ಅನ್ನು ಎದುರು ನೋಡುತ್ತಾರೆ,” ಎಂದು ತಿಳಿಸಿದರು.

 ವರ್ಲ್ಡ್ ಆಫ್ ಹಾಸ್ಪಿಟಾಲಿಟಿ ಬಗ್ಗೆ

 ವರ್ಲ್ಡ್ ಆಫ್ ಹಾಸ್ಪಿಟಾಲಿಟಿ ಈ ಕ್ಷೇತ್ರದ ಅತ್ಯುತ್ತಮ ಕಾರ್ಯಕ್ರಮಗಳು ಮತ್ತು ಸ್ಪರ್ಧೆಗಳ ಮೂಲಕ ಆತಿಥ್ಯ ಉದ್ಯಮದಲ್ಲಿ ಉತ್ಕೃಷ್ಟತೆಯನ್ನು ಉತ್ತೇಜಿಸಲು ಸ್ಥಾಪಿತವಾಗಿರುವ ಸಂಘಟನೆ.  ಈ ಕ್ಷೇತ್ರದ ಎಲ್ಲಾ ಸಂಘಗಳು ಮತ್ತು ಉದ್ಯಮ ತಜ್ಞರ ಸಹಯೋಗದೊಂದಿಗೆ, ವೃತ್ತಿಪರರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು, ಸಹ ವೃತ್ತಿಪರರ ಜೊತೆಗೆ ಸಂಪರ್ಕ ಸಾಧಿಸಲು ಮತ್ತು ಕ್ಷೇತ್ರದಲ್ಲಿ ಹೊಸತನವನ್ನು ಪ್ರೇರೇಪಿಸಲು, ವೇದಿಕೆಗಳನ್ನು ಒದಗಿಸುವ ಗುರಿಯನ್ನು ವರ್ಲ್ಡ್ ಆಫ್ ಹಾಸ್ಪಿಟಾಲಿಟಿ ಹೊಂದಿದೆ.

 

 

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top