ಶೀಘ್ರವೇ 6 ಸಾವಿರ ಪೊಲೀಸ್ ಪೇದೆಗಳ ನೇಮಕಕ್ಕೆ ಸರಕಾರ ಕ್ರಮ

ಶೀಘ್ರವೇ 6 ಸಾವಿರ ಪೊಲೀಸ್ ಪೇದೆಗಳ ನೇಮಕಕ್ಕೆ ಸರಕಾರ ಕ್ರಮ ವಹಿಸಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ಬೆಂಗಳೂರು ನಗರದಲ್ಲಿನ 2,500 ಹಾಗೂ ರಾಜ್ಯದ ಉಳಿದ ಭಾಗದಲ್ಲಿ ಖಾಲಿ ಇರುವಂತ 3,500 ಪೇದೆಗಳ ನೇಮಕಾತಿಯನ್ನು ಮಾಡಿಕೊಳ್ಳುವುದಾಗಿ ಗೃಹ ಸಚಿವರು ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿ ಎಲ್ಲಿ ಅಗತ್ಯ ಇದೆಯೋ ಅಲ್ಲಿ ಹೊಸ ಪೊಲೀಸ್ ಠಾಣೆ ಪ್ರಾರಂಭಿಸಲು ಉತ್ಸುಕವಾಗಿದೆ. ಆದರೇ ಸ್ಥಳೀಯವಾಗಿ ಪ್ರಸ್ತಾವನೆ ಬರಬೇಕು.  ಕೆಲವೆಡೆ ಬಾಡಿಗೆ ಕಟ್ಟದಲ್ಲಿ ಪೊಲೀಸ್ ಠಾಣೆಗಳಿದ್ದು ಹಂತ ಹಂತವಾಗಿ ಹೊಸ ಕಟ್ಟಡ ನಿರ್ಮಾಣಕ್ಕೆ ಕ್ರಮ ವಹಿಸಲಾಗುತ್ತದೆ ಎಂದು ಹೇಳಿದ್ದಾರೆ.

ಪಿಎಸ್‌ಐ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಕೆಲ ಅಭ್ಯರ್ಥಿಗಳು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಕೋರ್ಟ್ ಸರ್ಕಾರ ಅಭಿಪ್ರಾಯ ಕೇಳಿತ್ತು. ಮರು ಪರೀಕ್ಷೆ ನಡೆಸುವುದಾಗಿ ಹೇಳಲಾಗಿದೆ. ಇನ್ನೂ ನ್ಯಾಯಾಲಯದಿಂದ ತೀರ್ಮಾನ ಹೊರಬಂದ ನಂತ್ರ, ಮುಂದಿನ ಕ್ರಮ ಕೈಗೊಳ್ಳಾಲಗುವುದು ಎಂದಿದ್ದಾರೆ.

Facebook
Twitter
LinkedIn
WhatsApp
Telegram
Tumblr
Email

Leave a Comment

Your email address will not be published. Required fields are marked *

Translate »
Scroll to Top