ಕೋವಿಡ್-೧೯ ಮತ್ತು ಟಿ.ಬಿ ಪತ್ತೆಗೆ ಸಿ.ಎಚ್.ಎಸ್ ಸಹಯೋಗದಲ್ಲಿ ನೂತನ ಅವಿಷ್ಕಾರಕ್ಕೆ ಚಾಲನೆ

ದೇವನಹಳ್ಳಿ: ಕೋವಿಡ್-೧೯ ಮತ್ತು ಕ್ಷಯರೋಗ ನಿಯಮಗಳನ್ನು ಅನುಸರಿಸಲು ಅತ್ಯಾದುನಿಕ ಸ್ಕ್ರೀನಿಂಗ್ ಸಿಸ್ಟಂನ್ನು ಚನ್ನೆö ಮೂಲಕ ಕಾರ್ಪೋರಿಯಲ್ ಹೆಲ್ತ್ ಸಲ್ಯೂಷನ್ ಸಂಸ್ಥೆ ದಿ ಇಂಡಿಯನ್ ರೆಡಿಯಾಲಜಿಕಲ್ ಮತ್ತು ಇಮೇಜಿಂಗ್ಅ ಸೋಸಿಯೇಷನ್ ಆರೋಗ್ಯ ಸೇವಾ ಉದ್ಯಮಕ್ಕೆ ನೂತನ ಅವಿಷ್ಕಾರವನ್ನು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಾರಂಭಿಸಿದೆ ಎಂದು ಐ.ಆರ್.ಐ.ಎ ಅಧ್ಯಕ್ಷೆ ಡಾ.ಪುಷ್ಪರಾಜ್ ಭಟಲೆ ತಿಳಿಸಿದರು. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ತಾಜ್ ಹೋಟಲ್‌ನಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಐಆರ್‌ಐಎ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಸಿಎಚ್‌ಎಸ್ ಸಹಯೋಗದಲ್ಲಿ ಕೋಏಡ್ -೧೯ ಮತ್ತು ಟಿ.ಬಿ.ಗೆ ವೇಗದ, ನಿಖರ ಮತ್ತು ಆವಿಷ್ಠಾರಕವನ್ನು ಏಷ್ಯಾದಲ್ಲಿ ಮೊದಲ ಬಾರಿಗೆ ಪರಿಚಯಿಸಲಾಗಿದೆ. ಚಾಕೊ ಎಂದು ಕರೆಯಲ್ಪಡುವ ಈ ಆವಿಷ್ಕಾರಕ ಉತ್ಪನ್ನವನ್ನು ಮೊಟ್ಟಮೊದಲ ಬಾರಿಗೆ ಏಷ್ಯಾದಲ್ಲ ಪಲಚಯಿಸಲಾಗಿದೆ ಈ ಕ್ಲೀನಿಂಗ್ , ಪರಿಹಾರಗಳು ಅತ್ಯಾಧುನಿಕ ಕೃತಕ ಬುದ್ಧಿ ಮತ್ತೆ ಹಾಗೂ ಎದೆಯ ಎಕ್ಸ್ – ರೇಗಳನ್ನು ಸಂಯೋಜಿಸಿ ನ್ಯಾನೊ ಸೆಕೆಂಡುಗಳಲ್ಲಿ ಫಲತಾಂಶ ನೀಡುತ್ತದೆ .

ಹಲವಾರು ಇಮೇಜಂಗ್ ವಿಧಾನಗಳನ್ನು ಬಳಸಲಾಗುತ್ತದೆ ಮತ್ತು ಸಂಭವನೀಯ ಅಸಹಜತೆಗಳನ್ನು ತಕ್ಷಣವೇ ಕಂಡುಕೊಳ್ಳುತ್ತದೆ . ಇದು ಪ್ರಯಾಣಿಕರು ಗಂಟೆಗಟ್ಟಲೆ ಕಾಯುವ ಸಮಯವನ್ನು ಕಡಿಮೆ ಮಾಡುತ್ತದೆ ಹಾಗೂ ವಿಮಾನ ನಿಲ್ದಾಣಗಳಲ್ಲಿ ಸರತಿ ಸಾಲಿನಿಂದ ಮುಕ್ತ ಪರಿಸರ ನೀಡುತ್ತದೆ ಕಳೆದ ಎರಡು ವರ್ಷಗಳು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿರುವ ಪ್ರಸ್ತುತ ಸ್ಕ್ರೀನಿಂಗ್ ಸಿಸ್ಟಂಗಳು ಅಸಮರ್ಪಕ ಎಂದು ತೋರಿಸಿವೆ ಮತ್ತು ಚಾಕೊ ಸಮಯ ಹಾಗೂ ವೆಚ್ಚದ ಸಮಸ್ಯೆಗಳನ್ನು ನಿವಾರಿಸಲಿದೆ ಮತ್ತು ಪ್ರಯಾಣ ಸಂಬಂಧಿತ ಸೋಂಕುಗಳನ್ನು ತಡೆಯಲು ಪರಿಣಾಮಕಾರಿಯಾಗಿ ರೋಗಪತ್ತೆ ಮಾಡುತ್ತದೆ ಎಂದರು.

.ಇದುವರೆಗೂ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಹಯೋಗದಲ್ಲಿ ೧೫೦೦ ಕ್ಕೂ ಹೆಚ್ಚು ಪ್ರಯಾಣಿಕರ ಪ್ರಾಯೋಗಿಕ ಅಧ್ಯಯನ ನಡೆಸಿದ ಮತ್ತು ಹೊಸ ತಂತ್ರಜ್ಞಾನದೊoದಿಗೆ ಅವರಿಗೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಯಶಸ್ವಿಯಾಗಿ ಪರೀಕ್ಷಿಸಲಾಗಿದೆ . ಇದರಿಂದ ಪ್ರಯಾಣಿಕರ ಪ್ರಯಾಣಕ್ಕೆ ಅಡೆತಡೆ ಅತ್ಯಂತ ಕಡಿಮೆಯಾಗಿದ್ದು ಪ್ರತಿ ಪ್ರಯಾಣಿಕರಿಗೆ ಇಡೀ ಪ್ರಕ್ರಿಯೆ ಐದು ನಿಮಿಷದಲ್ಲಿ ಪೂರ್ಣಗೊಳ್ಳುತ್ತದೆ. ವಿಶ್ವದಾದ್ಯಂತ ವಿಮಾನ ನಿಲ್ದಾಣಗಳಿಗೆ ಅವರ ಪ್ರಯಾಣಿಕರ ವೈದ್ಯಕೀಯ
ಪರೀಕ್ಷೆಯನ್ನು ಕೈಗೆಟಕುವ ಮತ್ತು ದಕ್ಷತೆಯಿಂದ ದೊರೆಯುವಂತೆ ಮಾಡಿದೆ .

ಎ.ಎಚ್.ಎಸ್.ನ ಇಮೇಜಿಂಗ್ ಡಾಯಾಗ್ನೋಸ್ಟಿಕ್ ಸಲಹೆಗಾರ ಡಾ. ವಿಮಲ್ ರಾಜ್ ಮಾತನಾಡಿ ಐಆರ್‌ಐಎ ಭಾರತದಲ್ಲಿ ಮುಂಚೂಣಿಯ ಸಂಸ್ಥೆಯಾಗಿದೆ ಹಾಗೂ ಸದಾ ಆರೋಗ್ಯಸೇವೆ ಸುಧಾರಿಸುವ ಮಾರ್ಗಗಳನ್ನು ನಿರೀಕ್ಷೆ ಮಾಡುತ್ತದೆ . ಈ ಸಾಂಕ್ರಾಮಿಕದ ಸಂದರ್ಭದಲ್ಲಿ ನಾವು ವಿಮಾನ ನಿಲ್ದಾಣಗಳ ಪ್ರವೇಶ ಮತ್ತು ನಿರ್ಗಮನಗಳಲ್ಲಿ ವೇಗ ಹಾಗೂ ಆರ್ಥಿಕವಾಗಿ ಕೈಗೆಟುಕುವ ಪರಿಹಾರದ ಅಗತ್ಯವನ್ನು ಮನಗಂಡೆವು . ಐಆರ್‌ಐಎ , ಸಿಎಚ್‌ಎಸ್ ಜೊತೆಗೂಡಿ ಜಿಐಎಎಲ್ಸ ಹಯೋಗದಲ್ಲಿ ಈ ಆವಿಷ್ಕಾರಕ ಪಲಕಾರ ತಂದಿದೆ . ಚಾಕೊದ ಉನ್ನತೀಕರಿಸಿದ ಸ್ಕ್ರೀನಿಂಗ್ ಪರಿಹಾರವು ವಿಶ್ವದಾದ್ಯಂತ ವಿಮಾನ ನಿಲ್ದಾಣಗಳಲ್ಲಿ ಅಳವಡಿಸಿಕೊಳ್ಳಲು ಸ್ಫೂರ್ತಿ ತುಂಬಿದೆ ಸಿಎಚ್‌ಎಸ್ ಹೆಲ್ತ್ – ಟೆಕ್ ಕಂಪನಿಯಾಗಿದ್ದು ಅದು ಆರೋಗ್ಯಸೇವೆ ನೀಡುವ ಹಾಗೂ ರೋಗಗಳನ್ನು ಪತ್ತೆ ಮಾಡುವ ವಿಧಾನವನ್ನು ಬದಲಾಯಿಸಿದೆ . ನಾವು ಚಾಕೊ ಸೃಷ್ಟಿಸಲು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮತ್ತು ಮೆಷಿನ್ಲ ರ್ನಿಂಗ್ ಪರಿಣಿತಿಯನ್ನು ಬಳಸಿಕೊಂಡಿದ್ದು ಇದರಿಂದ ಇಡೀ ವಿಮಾನ ನಿಲ್ದಾಣದ ಸ್ಕ್ರೀನಿಂಗ್ ಪ್ರಕ್ರಿಯೆ ವೇಗ ಪಡೆದಿದೆ . ದೇಶಾದ್ಯಂತ ನಡೆಸಿದ ಹಲವು ಪ್ರಾಯೋಗಿಕ ಪರೀಕ್ಷೆಗಳು ಅತ್ಯುತ್ತಮ ಫಲಿತಾಂಶ ನೀಡಿವೆ ಎಂದರು.

Leave a Comment

Your email address will not be published. Required fields are marked *

Translate »
Scroll to Top