ಲೋಕಸಭಾ ಚುನಾವಣೆಗೆ ನಾಳೆ ಮುಹೂರ್ತ ಫಿಕ್ಸ್ ಆಗಲಿದೆ

 ನವದೆಹಲಿ: ಲೋಕಸಭೆ ಚುನಾವಣೆಗೆ ದಿನಾಂಕ ನಿಗಧಿ ಇಂದು ನಾಳೆ ಎನ್ನುವ ಮಾತುಗಳು ಕೇಳಿಬರುತ್ತಿರುವ ನಡುವೆ ಇದೀಗ ನಾಳೆಯೇ ಲೋಕಸಭಾ ಚುನಾವಣೆಗೆ ದಿನಾಂಕ ನಿಗದಿಯಾಗಲಿದೆ.

ಹೌದು ನಾಳೆ ಮಧ್ಯಾಹ್ನ 3 ಗಂಟೆಗೆ ನವದೆಹಲಿಯ ವಿಜ್ಞಾನ ಭವನದ ಪ್ಲೆನರಿ ಹಾಲ್ ನಲ್ಲಿ  ಚುನಾವಣಾ ಆಯುಕ್ತರಿಂದ ಚುನಾವಣೆಯ ನಿಗದಿ ಬಗ್ಗೆ ಪತ್ರಿಕಾಗೋಷ್ಠಿ ಕರೆಯಲಾಗಿದೆ. ಈ ಪತ್ರಿಕಾಗೋಷ್ಠಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರು ಚುನಾವಣೆಯ ದಿನಾಂಕ, ಉಮೇದುವಾರಿಕೆ ಸಲ್ಲಿಕೆಗೆ ದಿನಾಂಕ,  ನಾಮಪತ್ರ ವಾಪಸ್ಸು ಪಡೆಯಲು ಕೊನೆಯ ದಿನಾಂಕ, ಮತದಾನದ ದಿನಾಂಕ ಹಾಗೂ ಮತದಾನ ಎಣಿಕೆಗೆ ಸಂಬಂಧಿಸಿದ ಮಾಹಿತಿಯನ್ನು ಹಂಚಿಕೊಳ್ಳಲಿದ್ದಾರೆ.

 

ಅದೇ ರೀತಿ ಚುನಾವಣೆಗ ನೀತಿ ನಿಯಮಾವಳಿಗಳು ಸೇರಿದಂತೆ ಇನ್ನಿತರೆ ಸೂಚನೆಗಳನ್ನು ನೀಡಲಿದ್ದಾರೆ. ಅಂತೆಯೇ ನಾಳೆಯಿಂದಲೇ ನೀತಿ ಸಂಹಿತೆ ಜಾರಿಯಲ್ಲಿರಲಿದೆ.

Facebook
Twitter
LinkedIn
WhatsApp
Email
Print
Telegram

Leave a Comment

Your email address will not be published. Required fields are marked *

Translate »
Scroll to Top