ಬಳ್ಳಾರಿ: ಸ್ಟಾಕ್ಮಾರ್ಕೆಟ್ನಲ್ಲಿ ಹಣ ಹೂಡಿಕೆ ಮಾಡಿದಲ್ಲಿ, ಹೆಚ್ಚಿನ ಲಾಭಾಂಶ ಕೊಡಿಸುವುದಾಗಿ ಹೇಳಿ ನಂಬಿಸಿ, ಮಹಿಳೆಯೋರ್ವರಿಗೆ ಲಕ್ಷಾಂತರ ರೂಪಾಯಿಗಳನ್ನು ವಂಚಿಸಿದ್ದ ಹೊಸಪೇಟೆ ನಗರದ ವ್ಯಕ್ತಿಯೋರ್ವನನ್ನು, ಬಳ್ಳಾರಿಯ ಸೈಬರ್ ಕ್ರೆöÊಮ್ ಪೊಲೀಸರು ಬಂಧಿಸಿದ್ದು, 5 ಲಕ್ಷ ರೂ.ಗಳನ್ನು ಜಪ್ತಿ ಮಾಡಿದ್ದಾರೆ ಎಂದು ಜಿಲ್ಲಾ ಎಸ್ಪಿ ಡಾ||ಶೋಭಾರಾಣಿ ವಿ.ಜೆ. ಅವರು ತಿಳಿಸಿದ್ದಾರೆ.
ಕಳೆದ ತಿಂಗಳ ಏ.28 ರಂದು ಬಳ್ಳಾರಿಯ ಸಿಇಎನ್ ಪೊಲೀಸ್ ಠಾಣೆಯಲ್ಲಿ ಫಿರ್ಯಾದಿದಾರ ಮಹಿಳೆ ಲಕ್ಷಿö್ಮ ಎಂಬುವವರು ದೂರು ನೀಡಿದ್ದು, ನೆರೆಯ ವಿಜಯನಗರ ಜಿಲ್ಲೆ ಹೊಸಪೇಟೆಯ ನಿವಾಸಿ ರಂಜಿತ್ ಎಂಬುವಾತನು, ಸ್ಟಾಕ್ ಮಾರ್ಕೆಟ್ನಲ್ಲಿ ಹಣ ಹೂಡಿಕೆ ಮಾಡಿದಲ್ಲಿ ಹೆಚ್ಚಿನ ಲಾಭಾಂಶ ಕೊಡಿಸುವುದಾಗಿ ಹೇಳಿ ನಂಬಿಸಿ, ಲಕ್ಷಿö್ಮಯವರಿಂದ 17,75,865 ರೂ.ಗಳನ್ನು ಆನ್ಲೈನ್ ಮೂಲಕ ಹಾಕಿಸಿಕೊಂಡು, ಮೋಸ ಮಾಡಿರುವುದಾಗಿ ತಿಳಿಸಿದ್ದರು. ಈ ಬಗ್ಗೆ ಬಳ್ಳಾರಿಯ ಸಿಇಎನ್ (ಸೈಬರ್) ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ.22/2025 ಕಲಂ 66 (ಡಿ) ಐಟಿಆ್ಯಕ್ಟ್ ಮತ್ತು ಕಲಂ 318(3) ಬಿಎನ್ಎಸ್ ಆ್ಯಕ್ಟ್ 2023 ಪ್ರಕಾರ ಕೇಸ್ ದಾಖಲಾಗಿತ್ತು.
ಈ ಪ್ರಕರಣದ ತನಿಖೆ ನಡೆಸಲು ಜಿಲ್ಲಾ ಎಸ್ಪಿ ಡಾ||ಶೋಭಾರಾಣಿಯವರು, ಎಎಸ್ಪಿ ನವೀನ್ಕುಮಾರ್ ನೇತೃತ್ವದಲ್ಲಿ, ಸಿಇಎನ್ ಠಾಣೆಯ ಡಿಎಸ್ಪಿ ಡಾ||ಸಂತೋಷ್ ಚೌವ್ಹಾಣ್ ಅವರು, ತಾಂತ್ರಿಕ ಸಾಕ್ಷಾö್ಯಧಾರಗಳನ್ನು ಸಂಗ್ರಹಿಸಿ, ತನಿಖೆ ಕೈಗೊಂಡು, ಪಿಎಸ್ಐ ವಲಿಭಾಷ, ಸಿಬ್ಬಂದಿ ವರ್ಗದವರಾದ, ಎಎಸ್ಐ ತಿಪ್ಪೇರುದ್ರ, ಹೆಚ್ಸಿಗಳಾದ ಸುರೇಶ್, ಉಮಾಮಹೇಶ್ವರ, ಪಿ.ಸಿಗಳಾದ ಕೆ.ಯಲ್ಲೇಶ್, ಎನ್.ಚಂದ್ರಶೇಖರ ಅವರುಗಳನ್ನೊಳಗೊಂಡ ತಂಡವು, ಸಮಗ್ರ ತನಿಖೆ ನಡೆಸಿ, ಹೊಸಪೇಟೆಯ ನಿವಾಸಿಯಾಗಿರುವ ಆರೋಪಿ ರಂಜಿತ್ ಅವರನ್ನು ಪತ್ತೆಮಾಡಿ, ಹಿಡಿದು, ವಿಚಾರಣೆಗೆ ಒಳಪಡಿಸಿದಾಗ, ಹಣವನ್ನು ಪಡೆದಿರುವುದು ಬೆಳಕಿಗೆ ಬಂದಿದ್ದು, ಬಂಧಿತ ಆರೋಪಿಯಿಂದ 5 ಲಕ್ಷ ರೂ.ಗಳನ್ನು ಜಪ್ತಿ ಮಾಡಿದ್ದಾರೆ.
ಬಳ್ಳಾರಿ ಸಿಇಎನ್ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯವರ ಈ ತನಿಖಾ ಕಾರ್ಯವನ್ನು ಎಸ್ಪಿ ಡಾ||ಶೋಭಾರಾಣಿ ಅವರು ಶ್ಲಾಘಿಸಿದ್ದು, ಅಭಿನಂದಿಸಿದ್ದಾರೆ.