ಬಳ್ಳಾರಿ:ಬಳ್ಳಾರಿ ಜಿಲ್ಲೆಯಲ್ಲಿ ಬಾಣಂತಿಯರ ಸಾವಿನ ಸರಣಿ ಮುಂದುವರೆದಿದೆ. ಬಳ್ಳಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರ (ಬಿಮ್ಸ್)ದಲ್ಲಿ ಶನಿವಾರ ಕೋಳೂರು ಗ್ರಾಮದ ಬಾಣಂತಿಯೊಬ್ಬರು ಮೃತಪಟ್ಟಿದ್ದಾರೆ.
ಕುರುಗೋಡು ತಾಲೂಕಿನ ಕೋಳೂರು ಗ್ರಾಮದ ನಂದೀಶ್ ಎಂಬುವವರ ಪತ್ನಿ ಮಹಾದೇವಿ(೨೧) ಅವರಿಗೆ ಜ. ೨೫ರಂದು ಸಿಸೇರಿಯನ್ ಶಸ್ತçಚಿಕಿತ್ಸೆ ಮಾಡಲಾಗಿತ್ತು. ಹೆಣ್ಣು ಮಗುವಿನ ಜನನವಾದ ನಂತರ ಆರೋಗ್ಯವಾಗಿದ್ದ ಅವರು ಕಳೆದ ಮೂರು ದಿನಗಳಿಂದ ಅಸ್ವಸ್ಥರಾಗಿದ್ದರು.. ವಿಪರೀತ ಜ್ವರದಿಂದ ಬಳಲುತ್ತಿದ್ದ ಮಹಾದೇವಿ ಅವರು. ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ವೈದ್ಯರು ಸೂಕ್ತ ಚಿಕಿತ್ಸೆ ನೀಡಿಲ್ಲ ಎಂದು ಬಾಣಂತಿ ಕುಟುಂಬದವರು ಆರೋಪಿಸಿದ್ದಾರೆ.
‘ ಮಾದೇವಿ ಅವರಿಗೆ ವೈದ್ಯರು ಸರಿಯಾಗಿ ಚಿಕಿತ್ಸೆ ನೀಡಿಲ್ಲ. ಆಸ್ಪತ್ರೆ ಹೊರಗಡೆಯಿಂದ ತರುವಂತೆ ಬರೆದುಕೊಟ್ಟಿದ್ದ ಔಷಧಿ ಮತ್ತು ನೆಬುಲೈಸರ್ ಗಳನ್ನು ತಂದುಕೊಟ್ಟಿದ್ದರೂ, ಅವುಗಳನ್ನು ಬಳಸಿಲ್ಲ ಎಂದು ಮೃತರ ಪತಿ ನಂದೀಶ್ ಆರೊಪಿಸದ್ದಾರೆ..
‘ಸಿಸೇರಿಯನ್ ಆಗುವುದಕ್ಕೂ ಮೊದಲು ನನ್ನ ಸೋದರಿ ಆರೋಗ್ಯವಾಗಿಯೇ ಇದ್ದರು. ಸಿಸೇರಿಯನ್ ಬಳಿಕವೂ ಒಂದೆರಡು ದಿನ ಆರಾಮವಾಗಿಯೇ ಇದ್ದರು. ಆದರೆ ಸೋಂಕಾಗಿದೆ ಎಂದು ವೈದ್ಯರು ಹೇಳುತ್ತಿದ್ದಾರೆ. ಶಸ್ತ್ರಚಿಕಿತ್ಸಾ ಕೊಠಡಿ ಅಥವಾ ಶಸ್ತ್ರಚಿಕಿತ್ಸೆಗೆ ಬಳಸಿದ ಸಾಧನಗಳು ಸರಿಯಾಗಿ ಸ್ವಚ್ಛಗೊಳಿಸಿಲ್ಲದ ಕಾರಣದಿಂದಲೇ ಹೀಗೆ ಆಗಿದೆ’ ಎಂದು ವಿಮ್ಸ್ ಸಿಬ್ಬಂದಿಯೂ ಆದ ಮಹಾದೇವಿ ಸೋದರ ತಿಳಿಸಿದ್ದಾರೆ.
ಈ ಕುರಿತು ವಿಮ್ಸ್ ನರ‍್ದೇಶಕ ಡಾ. ಗಂಗಾಧರ ಗೌಡ ಅವರನ್ನು ಸಂಪರ್ಕಿಸಿ ಮತನಾಡಿಸಿದಾಗ, ಅವರು, ಮೃತಪಟ್ಟ ಬಾಣಂತಿ ‘ಥೋಂಬೋಎಂಬಾಲಿಸಂ’ ಎಂಬ ಸಮಸ್ಯೆಯಿಂದ ಬಳಲುತ್ತಿದರು. ಅದರಿಂದಲೇ ಸಾವಾಗಿದೆ. ಆದರೂ ಘಟನೆಯ ಬಗ್ಗೆ ತನಿಖೆ ಮಾಡಲಾಗುವುದು. ವೈದ್ಯರು, ಸಿಬ್ಬಂದಿಯ ನರ‍್ಲಕ್ಷ ಕಂಡು ಬಂದರೆ ಕೂಡಲೇ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದ್ದಾರೆ.
ಬಳ್ಳಾರಿಯ ಬಿಮ್ಸ್ ನಲ್ಲಿ ಮತ್ತೊಂದು ಬಾಣಂತಿ ಸಾವು
ಕೋಳೂರಿನ ಮಹಾದೇವಿ ಮೃತಪಟ್ಟ ದುರ್ದೈವಿ
