ಶಿಕ್ಷಕ ಅರವಿಂದ ಕುಮಾರ ದೇಸಾಯಿ ಇನ್ನಿಲ್ಲ

ಕೊಪ್ಪಳ:- ಜಿಲ್ಲೆಯಲ್ಲಿ ಎಲ್ಲರ ಪ್ರೀತಿಗೆ ಪಾತ್ರರಾದ ಎಲ್ಲರ ಅಚ್ಚುಮೆಚ್ಚಿನ ಶಿಕ್ಷಕ ಕುಷ್ಟಗಿ ಪಟ್ಟಣದ ವಾರ್ಡ ನಂಬರ ೩ ರ ನಿವಾಸಿ ಅರವಿಂದ ಕುಮಾರ ದೇಸಾಯಿ ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನ ರಾಗಿದ್ದಾರೆ. ಇವರ ಅಗಲಿಕೆಯಿಂದ ಜಿಲ್ಲೆಯ ಶಿಕ್ಷಕ, ಶಿಕ್ಷಕಿಯರಿಗೆ ಮತ್ತು ಪತ್ರಿಕಾ ಬಳಗಕ್ಕೆ ತುಂಬಲಾರಾದ ನಷ್ಠವಾಗಿದೆ.

ನಿನ್ನೆ ಕುಷ್ಟಗಿ ತಾಲೂಕಿನ ತಳುಗೇರಾ ಶ್ರೀ ಶರಣಬಸವೇಶ್ವರ ಜಾತ್ರೆ ಅಂಗವಾಗಿ ಬೆಳದಿಂಗ‌ಳ ಬುತ್ತಿ ಜಾತ್ರೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಶರಣಬಸವೇಶ್ವರ ಪ್ರಸಾದವನ್ನು ಸವಿಸಿ ಬೆಳಗಾಗುವಷ್ಟರಲ್ಲಿ ಶನಿವಾರ ಬೆಳಿಗ್ಗೆ ಏಕಾಏಕಿಯಾಗಿ ಹೃದಯಾಘಾತದಿಂದ ತಮ್ಮ ಸ್ವ-ಗ್ರಹದಲ್ಲಿ ನಿಧನವಾಗಿದ್ದಾರೆ. ಅರವಿಂದ ಕುಮಾರ್ ದೇಸಾಯಿಯವರು ಶಿಕ್ಷಕರು ಹಾಗೂ ಸಂಯುಕ್ತ ಕರ್ನಾಟಕ ಪತ್ರಿಕೆ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಅಂತ್ಯಕ್ರಿಯೆ 2:00 ಘಂಟೆಗೆ ಜರಗುವುದು. ಓರ್ವ ಪುತ್ರಿ ತಂದೆ ತಾಯಿ ಇಬ್ಬರು ಸಹೋದರರು ಪತ್ನಿಯನ್ನು ಅಗಲಿದ್ದಾರೆ .ಇವರು ಕುಷ್ಟಗಿ ತಾಲೂಕಿನ ಚಳಗೇರಾ ಪ್ರೌಢ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆಯಲ್ಲಿದ್ದರು.

Leave a Comment

Your email address will not be published. Required fields are marked *

Translate »
Scroll to Top