ರೈತ ವಿರೋಧಿ ಕಾಂಗ್ರೆಸ್​ಗೆ ಪಾಠ ಕಲಿಸಿ; ಚಿಕ್ಕಬಳ್ಳಾಪುರದಲ್ಲಿ ಮೋದಿ ಕರೆ

ಚಿಕ್ಕಬಳ್ಳಾಪುರ: ಕರ್ನಾಟಕದಲ್ಲಿ ಬಿಜೆಪಿ ರ‍್ಕಾರ ಇದ್ದಾಗ ಕಿಸಾನ್ ಸಮ್ಮಾನ್‌ ಹಣದ ಜತೆಗೆ ೨,೦೦೦ ರೂ. ಸೇರಿಸಿ ೪,೦೦೦ ರೂಪಾಯಿಯನ್ನು ರೈತರಿಗೆ ನೀಡಲಾಗುತ್ತಿತ್ತು. ಆದರೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ಅದನ್ನು ಸ್ಥಗಿತಗೊಳಿಸಲಾಯಿತು. ಇದರಿಂದಲೇ ಕಾಂಗ್ರೆಸ್ ರೈತ ವಿರೋಧಿ ಎಂಬುದು ಗೊತ್ತಾಗುತ್ತದೆ. ರೈತ ವಿರೋಧಿ ಕಾಂಗ್ರೆಸ್ಗೆ ಇಲ್ಲಿನ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂಬುದಾಗಿ ಭಾವಿಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದರು. ಚಿಕ್ಕಬಳ್ಳಾಪುರ ತಾಲೂಕಿನ ಅಗಲಗರ‍್ಕಿ ಬಳಿ ಸಮಾವೇಶದಲ್ಲಿ ಮಾತನಾಡಿದ ಅವರು, ವಿಕಸಿತ ಭಾರತಕ್ಕಾಗಿ ಎನ್‌ಡಿಎ ಅಭ್ರ‍್ಥಿಗಳನ್ನು ಬೆಂಬಲಿಸಿ. ರ‍್ನಾಟಕದ ಅಭಿವೃದ್ಧಿಗೆ ಕೇಂದ್ರ ಎನ್‌ಡಿಎ ರ‍್ಕಾರ ಬದ್ಧವಾಗಿದೆ. ರ‍್ನಾಟಕದ ಉಜ್ವಲ ಭವಿಷ್ಯಕ್ಕಾಗಿ ಎನ್‌ಡಿಎ ಅಭ್ರ‍್ಥಿಗಳನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.

ಚಿಕ್ಕಬಳ್ಳಾಪುರದ ನನ್ನ ಸಹೋದರ ಸಹೋದರಿಯರಿಗೆ ನಮಸ್ಕಾರಗಳು ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಮೋದಿ, ಸಂತ ಕೈವಾರಯ್ಯ ತಾತಯ್ಯ, ವಿಶ್ವೇಶ್ವರಯ್ಯ ಅವರನ್ನು ಸ್ಮರಿಸಿದರು. ನನ್ನನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಲು ದೊಡ್ಡ ದೊಡ್ಡ ನಾಯಕರು ಯತ್ನಿಸುತ್ತಿದ್ದಾರೆ. ಅದಕ್ಕಾಗಿ ದೊಡ್ಡ ಮಟ್ಟದಲ್ಲಿ ಸಂಚು ನಡೆಯುತ್ತಿದೆ. ಆದರೆ, ನನಗೆ ದೇಶದ ತಾಯಂದಿರ ಆಶರ‍್ವಾದ ಇದೆ ಎಂದು ಮೋದಿ ಹೇಳಿದರು.

ಭಾಷಣದುದ್ದಕ್ಕೂ ಕೇಂದ್ರ ರ‍್ಕಾರದ ಯೋಜನೆಗಳ ಬಗ್ಗೆ ಎಳೆಎಳೆಯಾಗಿ ಮಾಹಿತಿ ಬಿಚ್ಚಿಟ್ಟ ಪ್ರಧಾನಿ, ರಾಜಕೀಯ ಎದುರಾಳಿಗಳ ವಿರುದ್ಧ ವಾಗ್ದಾಳಿ ನಡೆಸುವ ಅವಕಾಶಗಳನ್ನೂ ಬಿಡಲಿಲ್ಲ.

ಈ ಇಳಿ ವಯಸ್ಸಿನಲ್ಲೂ ಹೆಚ್‌ಡಿ ದೇವೇಗೌಡರ ಬದ್ಧತೆ, ಉತ್ಸಾಹ ನಮಗೆಲ್ಲರಿಗೂ ಪ್ರೇರಣೆ. ಹಿರಿಯ ನಾಯಕ ದೇವೇಗೌಡ ಆಶರ‍್ವಾದ ಇಂದು ನನಗೆ ಸಿಕ್ಕಿದೆ. ಇಂಡಿಯಾ ಮೈತ್ರಿಕೂಟಕ್ಕೆ ಯಾವುದೇ ನಾಯಕತ್ವ ಇಲ್ಲವೆಂದು ಅವರು ಹೇಳಿದ್ದಾರೆ. ಯುಪಿಎ ರ‍್ಕಾರದ ಅವಧಿಯ ಹಗರಣದ ಬಗ್ಗೆಯೂ ದೇವೇಗವಡರು ಪ್ರಸ್ತಾಪಿಸಿದ್ದಾರೆ. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಮತ್ತೊಮ್ಮೆ ಬಿಜೆಪಿ ಅಭ್ರ‍್ಥಿಯನ್ನು ಬೆಂಬಲಿಸಿ ಎಂದು ಮೋದಿ ಹೇಳಿದರು.

ಪ್ರಧಾನಿ ಮೋದಿ ಭಾಷಣದ ಮುಖ್ಯಾಂಶಗಳು:

ಉಚಿತವಾಗಿ ಪಡಿತರ ನೀಡುತ್ತಿದ್ದೇವೆ, ಇದು ಮೋದಿ ಗ್ಯಾರಂಟಿ, ಮುಂದಿನ ೫ ರ‍್ಷವೂ ಉಚಿತವಾಗಿ ಪಡಿತರ ನೀಡುತ್ತೇವೆ.

ಉಚಿತವಾಗಿ ಬಡವರಿಗೆ ವೈದ್ಯಕೀಯ ಚಿಕಿತ್ಸೆ ಸಿಗಬಹುದು ಎಂದು ಯಾರೂ ಭಾವಿಸಿರಲಿಲ್ಲ, ಆಯುಷ್ಮಾನ್ ಭಾರತ್ ಯೋಜನೆ ಮೂಲಕ ನಾವು ಅದನ್ನು ಸಾಕಾರಗೊಳಿಸಿದ್ದೇವೆ.

ಮೋದಿ ರ‍್ಕಾರದ ಅತಿದೊಡ್ಡ ಫಲಾನುಭವಿಗಳು ಎಸ್ಸಿ, ಎಸ್ಟಿ ಜನಾಂಗ ಹಾಗೂ ಬಡವರಾಗಿದ್ದಾರೆ.

ಕಳೆದ ೧೦ ರ‍್ಷಗಳಲ್ಲಿ ಎಸ್‌ಸಿ-ಎಸ್‌ಟಿ ಸಮುದಾಯ ೨೫ ಕೋಟಿ ಮಂದಿಯನ್ನು ಬಡತನ ರೇಖೆಗಿಂತ ಮೇಲೆ ತಂದಿದ್ದೇವೆ.

ಆದಿವಾಸಿ ಸಮುದಾಯದವರಿಗೆ ರಾಷ್ಟ್ರಪತಿ ಹುದ್ದೆ ನೀಡಲಾಗಿದೆ.

ಮುದ್ರಾ ಯೋಜನೆಯಡಿ ಶ್ಯೂರಿಟಿ ಇಲ್ಲದೆ ೨೦ ಲಕ್ಷ ಸಾಲ ನೀಡಲಾಗುತ್ತಿದೆ.

 

ಪ್ರತಿಯೊಬ್ಬ ಮಹಿಳೆಯ ಸುರಕ್ಷತೆಯೇ ನನ್ನ ಮೊದಲ ಆದ್ಯತೆ. ಹೆಣ್ಣು ಮಕ್ಕಳಿಗೂ ಡ್ರೋನ್ ತರಬೇತಿ ನೀಡಲಾಗುತ್ತಿದೆ. ಹೈನುಗಾರಿಕೆ, ಮೀನುಗಾರಿಕೆ ಮಾಡುವವರಿಗೂ ಕಿಸಾನ್ ಕರ‍್ಡ್ ನೀಡಲಾಗಿದೆ.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top