ತೆರಿಗೆ ಇಲಾಖೆ ಉದ್ಯಮ ಸ್ನೇಹಿ, ಕೈಗಾರಿಕಾ ಬೆಳವಣಿಗೆಗೆ ಅಗತ್ಯ ಸಹಕಾರ – ಜಿ.ಎಸ್.ಟಿ ಸಹಾಯಕ ಆಯುಕ್ತ ಪ್ರಹ್ಲಾದ್‌ ವಿ ಕುಲಕರ್ಣಿ

ನೆಟ್‌ ವರ್ಕಿಂಗ್‌ ಸಂಸ್ಥೆ ಆನ್ ಫೈಕ್ಸ್‌ ಗೆ ಮೂರರ ಸಂಭ್ರಮ

ಬೆಂಗಳೂರು: ತೆರಿಗೆ ಇಲಾಖೆ ಉದ್ಯಮ ಸ್ನೇಹಿಯಾಗಿದ್ದು, ಉದ್ಯಮ, ನವೊದ್ಯಮಗಳಿಗೆ ಅಗತ್ಯವಿರುವ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಜಿ.ಎಸ್.ಟಿ ಸಹಾಯಕ ಆಯುಕ್ತ ಪ್ರಹ್ಲಾದ್‌ ವಿ ಕುಲಕರ್ಣಿ ಹೇಳಿದ್ದಾರೆ.

 

ನಗರದ ಪ್ರೈಡ್‌ ಹೋಟೆಲ್‌ ನಲ್ಲಿ ನೆಟ್‌ ವರ್ಕಿಂಗ್‌ ಸಂಸ್ಥೆ ಆನ್ ಫೈಕ್ಸ್‌ ಗೆ ಮೂರು ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತೆರಿಗೆ ವಲಯದಿಂದ ಲಭ್ಯವಿರುವ ಸಹಕಾರ ನೀಡಲಾಗುವುದು. ತೆರಿಗೆ ಇಲಾಖೆ ಉದ್ಯಮ ಸ್ನೇಹಿಯಾಗಿದ್ದು, ಉದ್ಯಮ ವಲಯಕ್ಕೆ ಉತ್ತಮ ಸಹಕಾರ ನೀಡಲಿದೆ ಎಂದರು.

ಎಂ.ಎಸ್.ಎಂ.ಇ ಉಪ ನಿರ್ದೇಶಕ ಆರ್.‌ ಗೋಪಿನಾಥ್‌ ಮಾತನಾಡಿ, ಉದ್ಯಮಗಳ ಅಭ್ಯುದಯಕ್ಕೆ ಹಲವಾರು ಯೋಜನೆಗಳಿದ್ದು, ಇವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಉದ್ಯಮ ಬೆಳೆದರೆ ನಿರುದ್ಯೋಗ ಸಮಸ್ಯೆ ನಿವಾರಣೆಯಾಗಲಿದೆ. ಇದಕ್ಕಾಗಿ ಸರ್ಕಾರ ಕೋಟ್ಯಂತರ ರೂ ವೆಚ್ಚ ಮಾಡುತ್ತಿದೆ ಎಂದು ಹೇಳಿದರು.

 

ಜಯದೇವ ಹೃದ್ರೋಗ ಸಂಸ್ಥೆಯ ಮಾಜಿ ನಿರ್ದೇಶಕ ಡಾ. ಮಂಜುನಾಥ್‌ ಮಾತನಾಡಿ, ನೆಟ್‌ ವರ್ಕಿಂಗ್‌ ಸಂಸ್ಥೆ ಆನ್ ಫೈಕ್ಸ್‌ ವ್ಯಾಪಾರ ಜಾಲದ ವೇದಿಕೆಯಾಗಿ ದೃಢವಾದ ನಾಯಕತ್ವವನ್ನು ಒದಗಿಸುವ ಮತ್ತು ಉದ್ಯೋಗವನ್ನು ಒದಗಿಸಲು ಉದ್ಯೋಗದಾತರನ್ನು ಸೃಷ್ಟಿಸುವ ಅತ್ಯುತ್ತಮ ವೇದಿಕೆಯಾಗಿದೆ ಎಂದರು.

ಚಲನಚಿತ್ರ ನಟ ,ನಿರ್ಮಾಪಕ ಗಂಡಸಿ ಸದಾನಂದ ಸ್ವಾಮಿ, ಹಿರಿಯ ವೈದ್ಯ ಡಾ. ಆಂಜನಪ್ಪ, ವೇದಶ್ರೀ ಸತ್ಸಂಗ ಅಜಿತ್ ಜಿ, ಧೀ ಆಸ್ಪತ್ರೆಯ ಸಂಸ್ಥಾಪಕರು ಹಾಗೂ ಸರ್ಜನ್ ಡಾ. ಚಂದ್ರಶೇಖರ ಚಿಕ್ಕಮುನಿಯಪ್ಪ, ಆಡಳಿತ ಮತ್ತು ಸಿಬ್ಬಂದಿ ಇಲಾಖೆಯ ಮುಖ್ಯ ಆಡಳಿತಾಧಿಕಾರಿ ಕವಿತಾ ಗೌಡ, ಸಂಸ್ಥೆಯ ಮುಖ್ಯಸ್ಥರಾದ ಡಾ. ಕುಮೈಲ್, ಗಾಯತ್ರಿ, ನೇಹಾ ಫಾತಿಮಾ ಮತ್ತಿತರರು ಉಪಸ್ಥಿತರಿದ್ದರು.

Facebook
Twitter
LinkedIn
Telegram
Email
WhatsApp
Print

Leave a Comment

Your email address will not be published. Required fields are marked *

Translate »
Scroll to Top