ಹೊಸಪೇಟೆ,ಜನವರಿ,25 : ನಗರದ ಪ್ರತಿಷ್ಠಿತ ಮಾರ್ಟ್‌ನಲ್ಲಿ ಕನ್ನಡ ಪುಸ್ತಕಗಳು ಕಾಣದಕ್ಕೆ ನಗರದ ಯುವಕರು ಮಾಲ್‌ಗಳ ವ್ಯವಸ್ಥಾಪಕರನ್ನು ತರಾಟೆಗೆ ತೆಗೆದುಕೊಂಡ ಘಟನೆ ಸೋಮವಾರ ನಡೆದಿದೆ. ಮಾಲ್‌ನ ವ್ಯವಸ್ಥಾಪಕರ ಜತೆ ವಾಗ್ವಾದಕ್ಕಿಳಿದ ಕನ್ನಡ ಪ್ರೇಮಿಗಳು, ಕೂಡಲೇ ಕನ್ನಡ ಪುಸ್ತಕಗಳನ್ನು ಕೂಡ ಮಾಲ್‌ನಲ್ಲಿ ಮಾರಾಟ ಮಾಡಬೇಕು ಎಂದು ಒತ್ತಾಯಿಸಿದರು.

ಕೇವಲ ಇಂಗ್ಲಿಷ್ ಭಾಷೆಗಳ ಪುಸ್ತಕಗಳನ್ನು ಇಟ್ಟಿರುವುದು ಸರಿಯಲ್ಲ. ನಾವು ಕನ್ನಡ ಪುಸ್ತಕಗಳನ್ನು ಇಡೋಲ್ಲಾ ಎಂದು ಹೇಳುವುದು ಸರಿಯಲ್ಲ. ಕನ್ನಡ ಪುಸ್ತಕಗಳನ್ನು ಮಾಲ್‌ನಲ್ಲ್ಲಿ ಮಾರಾಟ ಮಾಡಲೇಬೇಕು ಎಂದು ಆಗ್ರಹಿಸಿದರು. ನಾವು ಶೀಘ್ರವೇ ಮಾಲ್‌ನಲ್ಲಿ ಕನ್ನಡ ಪುಸ್ತಕಗಳನ್ನು ಇಡುತ್ತೇವೆ ಎಂದು ಮಾಲ್‌ನ ಮಾಲೀಕರು ಭರವಸೆ ನೀಡಿದ ನಂತರ ಗಲಾಟೆ, ವಾಗ್ವಾದ ತಣ್ಣಗಾಯಿತು.