ಪದವಿ ನಂತರ ಹಲವು ಅವಕಾಶಗಳಿವೆ ಉಪಯೋಗಿಸಿಕೊಳ್ಳಿ

 ದಾವಣಗೆರೆ: ಸ್ನಾತಕ ಪದವಿ  ನಂತರ ವಿದ್ಯಾರ್ಥಿಗಳಿಗೆ ಹಲವಾರು ಅವಕಾಶಗಳಿವೆ. ಅವುಗಳನ್ನು ಬಳಸಿ ಉನ್ನತ ಶಿಕ್ಷಣ ಪಡೆಯುವಂಥರಾಗಬೇಕು ಪ್ರತಿಯೊಬ್ಬರಿಗೂ ಉನ್ನತ ಶಿಕ್ಷಣ ಕಡ್ಡಾಯವಾದಾಗ ವ್ಯಕ್ತಿಯ ಅಭಿವೃದ್ಧಿ ಹಾಗೂ ದೇಶದ ಅಭಿವೃದ್ಧಿಯಾಗಲು ಸಾಧ್ಯ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ   ವೆಂಕಟೇಶ್ ಬಾಬುರವರು ಹೇಳಿದರು.

 

ಅವರು ಇಂದು ನಗರದ ಚಾಣಕ್ಯ ಪ್ರಥಮ ದರ್ಜೆ ಕಾಲೇಜಿನ  ವತಿಯಿಂದ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಪದವಿ ನಂತರ ಮುಂದೇನು? ಕಾರ್ಯಕ್ರಮದಲ್ಲಿ ಮಾತನಾಡಿದರು.

ಪದವಿ ನಂತರ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಮೂರು ಅವಕಾಶವಿರುತ್ತೇವೆ  ಉನ್ನತ ಶಿಕ್ಷಣ,  ಕೆಲಸ, ಮತ್ತು  ಸ್ವತಂತ್ರ ವ್ಯವಹಾರ ಆರಂಭಿಸುವುದು. ಪದವಿ ಪಡೆದ ವಿದ್ಯಾರ್ಥಿಗಳು ತಮ್ಮ ಕುಟುಂಬದ ಪರಿಸರಕ್ಕೆ ಹೊಂದಿಕೊಳ್ಳುವಂತೆ ನಿರ್ಧಾರವನ್ನು ಕೈಗೊಳ್ಳಬೇಕು ಅನಿವಾರ್ಯವಿದ್ದರೆ ಕೆಲಸಕ್ಕೆ ಹೋಗಿ ಇಲ್ಲದಿದ್ದರೆ ಉನ್ನತ ಶಿಕ್ಷಣ ಪಡೆಯುವ ನಿಟ್ಟಿನಲ್ಲಿ ಯೋಚಿಸಿ ಉತ್ತಮ ಕಾಲೇಜುಗಳಲ್ಲಿ ಉನ್ನತ ಶಿಕ್ಷಣವನ್ನು ಪಡೆಯಬೇಕು. ಉತ್ತಮ ಉದ್ಯೋಗ ಹೊಂದಿದಾಗ ಉತ್ತಮವಾದ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

 

 ಪ್ರತಿಯೊಬ್ಬರಿಗೂ ಸರ್ಕಾರಿ ಕೆಲಸದ ಮೇಲೆ ವ್ಯಾಮೋಹ ಹೆಚ್ಚು ಆದರೆ ಎಲ್ಲರಿಗೂ ಸರ್ಕಾರಿ ಕೆಲಸ ಸಿಗುವುದು ತುಂಬಾ ಕಷ್ಟ ಅದು ಸಾಧ್ಯವೂ ಆಗುವುದಿಲ್ಲ ಹಾಗಾಗಿ ಸರ್ಕಾರಿ ಕೆಲಸಕ್ಕೆ ಪ್ರಯತ್ನಿಸುವವರು ನಿಷ್ಠೆಯಿಂದ ಕಷ್ಟಪಟ್ಟು ಅದನ್ನು ಪಡೆಯುವಲ್ಲಿ ಪ್ರಯತ್ನಿಸಬೇಕು ಇಲ್ಲದೆ ಹೋದರೆ ಅದೇ ಜೀವನವಲ್ಲ ಎಂಬುದನ್ನು ಅರಿತು ಇತರೆ ಖಾಸಗಿ  ವಲಯದಲ್ಲಿ ಉತ್ತಮವಾದ ಕೆಲಸ ಸಂಬಳ ಎರಡೂ ದೊರೆಯುತ್ತದೆ ಅದಕ್ಕಾಗಿ ಒಂದಿಷ್ಟು ಕೌಶಲ್ಯಗಳನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಹೇಳಿದರು. 

ವಿದ್ಯಾರ್ಥಿಗಳು ಸ್ವತಂತ್ರ ದುಡಿಮೆಗೆ ಮುಂದಾಗಬೇಕು ತಮ್ಮ ಹವ್ಯಾಸಗಳನ್ನು ವ್ಯವಹಾರಗಳನ್ನಾಗಿ ಮಾಡಿಕೊಂಡರೆ ಸ್ವಂತ ಉದ್ದಿಮೆ ಆರಂಭಿಸಿ ನಾಲ್ಕಾರು ಜನಗಳಿಗೆ ಕೆಲಸ ಕೊಡುವಂತಹ ಉದ್ಯಮೆದಾರರಾಗುವ ಅವಕಾಶಗಳು ಇದೆ ಎಂದು ವಿದ್ಯಾರ್ಥಿಗಳನ್ನು ಕುರಿತು ಪದವಿ ನಂತರದ ಅವಕಾಶಗಳನ್ನು ಬಿಚ್ಚಿಟ್ಟರು.

ಸಮಾಜದಲ್ಲಿ ಪ್ರತಿಯೊಬ್ಬರು ಗುರುತಿಸಿಕೊಳ್ಳಲು ಉತ್ತಮವಾದ ಶಿಕ್ಷಣದ ಅವಶ್ಯಕತೆ ಇದೆ ಶಿಕ್ಷಣದಿಂದ ಶಿಸ್ತು ವಿನಯ ಸಂಸ್ಕೃತಿ ಹಾಗೂ ಸಾಮಾಜಿಕ ಜವಾಬ್ದಾರಿ ಬರುತ್ತದೆ ಹಾಗಾಗಿ ಪ್ರತಿಯೊಬ್ಬರೂ ಗಮನ ಹರಿಸಬೇಕೆಂದು ಹೇಳಿದರು.

 

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ ಕೆ ರಾಜಶೇಖರ್ ಹಾಗೂ ದೀನ್ ಆದಂತಹ ಬಿ ಆರ್ ಟಿ ಸ್ವಾಮಿ ರವರು ಭಾಗವಹಿಸಿದ್ದರು

Facebook
Twitter
LinkedIn
WhatsApp
Telegram
Pinterest

Leave a Comment

Your email address will not be published. Required fields are marked *

Translate »
Scroll to Top