rayachuru

ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರುಗಳವರ ಶರನ್ನವರಾತ್ರಿ ದಸರಾ ಧರ್ಮಸಮ್ಮೇಳನ

ರಾಯಚೂರು ಜಿಲ್ಲೆ ˌಲಿಂಗಸುಗೂರು ನಗರದಲ್ಲಿ ನಾಳೆಯಿಂದ ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರುಗಳವರ ಶರನ್ನವರಾತ್ರಿ ದಸರಾ ಧರ್ಮಸಮ್ಮೇಳನ ಪ್ರಾರಂಭವಾಗಲಿದೆ.

ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಯ ಕಾರ್ಯಕ್ಕೆ ಕೇಂದ್ರಸರಕಾರದ ಮೇಲೆ ಒತ್ತಡ ಹೇರಲು ಸಚಿವ ಭಗವಂತ ಖೂಬಾ ಅವರಿಗೆ ಮನವಿ

ನವದೆಹಲಿ: ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೆಟಗರಿ – 3 ವಿಜ್ಞಾನ ಕೇಂದ್ರ, 8 ಮೀಟರ್ ಅಗಲದ ಟೈಪ್ – ಬಿ ಡಿಜಿಟಲ್ ಡೋಮ್ ಪ್ಲಾನೇಟೋರಿಯಮ್. ರಾಯಚೂರು ಜಿಲ್ಲೆಯಲ್ಲಿ 22.25 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕೆಟಗರಿ – 2, ಟೈಪ್ ಬಿ ವಿಜ್ಞಾನ ಕೇಂದ್ರ ಸ್ಥಾಪನೆ, ಯಾದಗಿರಿ ಜಿಲ್ಲೆಯಲ್ಲಿ ಟೈಪ್ ಬಿ ಕೆಟಗರಿ – 3 ವಿಜ್ಞಾನ ಕೇಂದ್ರ ಸ್ಥಾಪನೆಯ ಪ್ರಸ್ತಾಪಗಳನ್ನ ಕೇಂದ್ರ ಸರಕಾರ ಸಲ್ಲಿಸಲಾಗಿದೆ. ಈ ಪ್ರಸ್ತಾವನೆಗಳಿಗೆ ಶೀಘ್ರದಲ್ಲಿ ಒಪ್ಪಿಗೆ ನೀಡುವ ಭರವಸೆಯನ್ನ ಕೇಂದ್ರ ಸಚಿವರು ನೀಡಿದ್ದಾರೆ ಎಂದು ಮಾನ್ಯ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಶ್ರೀ ಎನ್.ಎಸ್ ಬೋಸರಾಜು ತಿಳಿಸಿದರು.

ಕರಾವಳಿ ಮತ್ತು ದಕ್ಷಿಣ ಹಾಗೂ ಉತ್ತರ ಒಳನಾಡಿನಲ್ಲಿ ಮುಂದಿನ 5 ದಿನ ವ್ಯಾಪಕ ಮಳೆ ಸಾಧ್ಯತೆ…!

ಬೆಂಗಳೂರು: ಕರಾವಳಿ, ದಕ್ಷಿಣ ಹಾಗೂ ಉತ್ತರ ಒಳನಾಡಿನ 15ಕ್ಕೂ ಅಧಿಕ ಜಿಲ್ಲೆಗಳಲ್ಲಿ ಮುಂದಿನ 5 ದಿನ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಬೆಳಗಾವಿ, ಬೀದರ್, ಕಲಬುರಗಿ, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ರಾಜ್ಯದ ಹಲವೆಡೆ ಮಳೆ ಅಬ್ಬರ : ಮುಂದಿನ ಐದು ದಿನ ಭಾರೀ ಮಳೆ‌ ಸಾಧ್ಯತೆ

ಬೆಂಗಳೂರು: ರಾಜ್ಯದ ಉತ್ತರ ಕರ್ನಾಟಕ ಮತ್ತು ಕರಾವಳಿ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದೆ. ಬೆಳಗಾವಿ, ಕಲಬುರಗಿ ಮತ್ತು ಬೀದರ ಜಿಲ್ಲೆ ಭಾರಿ ಮಳೆಯಾಗುತ್ತಿರುವುದರಿಂದ ಕೆಲ ಪ್ರದೇಶಗಳು ಜಲಾವೃತವಾಗಿವೆ. ರಾಜ್ಯದಲ್ಲಿ ಮುಂದಿನ ಐದು ದಿನಗಳ ಕಾಲ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅದರಂತೆ ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಕೆಲ ಪ್ರದೇಶಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ತಿಳಿಸಿದೆ.

ಮಸ್ಕಿಯಲ್ಲಿ ಸಚಿವರಿಗೆ ಘೇರಾವ್ ಹಾಕಿ ಕಪ್ಪುಪಟ್ಟಿ ಪ್ರದರ್ಶನ

ರಾಯಚೂರು : ಜಿಲ್ಲೆ ಮಸ್ಕಿ ಪಟ್ಟಣದಲ್ಲಿ ಪರಿಶಿಷ್ಟ ಪಂಗಡದ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದ ಉದ್ಘಾಟನೆ ಸಮಾರಂಭಕ್ಕೆ ಆಗಮಿಸುವ ಸಂದರ್ಭದಲ್ಲಿ ಕರ್ನಾಟಕ ರೈತ ಸಂಘದ ಮಸ್ಕಿ ತಾಲೂಕು ಅಧ್ಯಕ್ಷರಾದ ಸಂತೋಷ ಹಿರೇದಿನ್ನಿ ನೇತೃತ್ವದಲ್ಲಿ ಘೇರಾವ್ ಹಾಕಿ ಕಪ್ಪು ಪಟ್ಟಿ ಪ್ರದರ್ಶನ ಮಾಡಿದರು. ರೈತರನ್ನು ಕಡೆಗಣಿಸಿದ ಸರ್ಕಾರ ಉಳಿದ ಇತಿಹಾಸವಿಲ್ಲ ರೈತರು ಹೋರಾಟ ಹತ್ತಿಕ್ಕಲು ಹೊರಟಿರುವ ಕೇಂದ್ರದ ಮೋದಿ ಸರ್ಕಾರ ಬಹಳ ದಿನ ಉಳಿಯುವುದಿಲ್ಲ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು ಕೆಆರ್ ಎಸ್ …

ಮಸ್ಕಿಯಲ್ಲಿ ಸಚಿವರಿಗೆ ಘೇರಾವ್ ಹಾಕಿ ಕಪ್ಪುಪಟ್ಟಿ ಪ್ರದರ್ಶನ Read More »

ಸಂಡೇ ಫಾರ್ ಸೋಷಿಯಲ್ ವರ್ಕ್

ಮಸ್ಕಿ : ಪಟ್ಟಣದಲ್ಲಿ ಈ ವಾರದ ಸಂಡೇ ಫಾರ್ ಸೋಷಿಯಲ್ ವರ್ಕ್ ಅಭಿಯಾನಕ್ಕೆ ಮಸ್ಕಿಯ ಸೇವಾ ಸಂಸ್ಥೆಗಳಾದ ಲಯನ್ಸ್ ಕ್ಲಬ್ ಆಫ್ ಮಸ್ಕಿ,ಸ್ವಾಮಿ ವಿವೇಕಾನಂದ ಹಾಗೂ ರಾಮಕೃಷ್ಣ ಆಶ್ರಮ ಮಸ್ಕಿ,ಶಿವರಾಜ್ ತಾಂಡೂರು ಹಾಗೂ ಸಂಗಡಿಗರು ಹಾಗೂ ಮಸ್ಕಿ ದೇವಾಂಗ ಸಮಾಜ, ಬಣಜಿಗ ಸಮಾಜ,ರಜಪೂತ ಸಮಾಜ,ಡಾ ಶಿವಶರಣಪ್ಪ ಇತ್ಲಿ ಫೌಂಡೇಶನ್,ಅಭಿನಂದನ್ ಶಿಕ್ಷಣ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಮಸ್ಕಿ ಇವರ ಜಂಟಿ ಸಹಯೋಗದಲ್ಲಿ ಮಸ್ಕಿಯ ರುದ್ರಭೂಮಿಗಳ ಸ್ವಚ್ಛತೆ ಮತ್ತು ಸಸಿ ನೆಡುವ ಕಾರ್ಯಕ್ರಮ ಮಾಡಲಾಯಿತು. ಶಿವರಾಜ್ ತಾಂಡೂರು ಅವರು …

ಸಂಡೇ ಫಾರ್ ಸೋಷಿಯಲ್ ವರ್ಕ್ Read More »

ಪ್ರಚಾರಕ್ಕೆ ಮಾತ್ರ ಸೀಮಿತವಾದ ಸ್ವಚ್ಛಭಾರತ್

ಮಸ್ಕಿ :ಮಸ್ಕಿಪಟ್ಟಣದಲ್ಲಿ ಸ್ವಚ್ಛತೆ ಎನ್ನುವುದು ಮರೀಚಿಕೆಯಾಗಿದೆ. ಪ್ರತಿಯೊಂದು ಕಾಲನಿಗಳು, ಬಡಾವಣೆಗಳೂ ಸ್ವಚ್ಛತೆ ಇಲ್ಲದೇ ರೋಗ ಉತ್ಪತ್ತಿ ಮಾಡುವ ಕೇಂದ್ರಗಳಾಗಿ ಮಾರ್ಪಟ್ಟಿವೆ. ಇದಕ್ಕೆಲ್ಲ ಕೊನೆಯೇ ಇಲ್ಲವೇ ? ಅಧಿಕಾರಿಗಳು ಏನು ಮಾಡುತ್ತಿದ್ದಾರೆ ? ನಮ್ಮ ಸಮಸ್ಯೆಗೆ ನಿಜವಾಗಿಯೂ ಸ್ಪಂದಿಸುವವರ್ಯಾರು ಎನ್ನುವ ಪ್ರಶ್ನೆ ಪಟ್ಟಣದ ಜನತೆಯನ್ನು ಕಾಡುತ್ತಿದೆ. ಪಟ್ಟಣಕೆ ಡೆಂಘೀ ಜ್ವರ ಬರಬಹುದೆಂದು ಸಾರ್ವಜನಿಕರು ಭಯಭೀತರಾಗಿದ್ದಾರೆ. ಅಶೋಕ್ ವೃತ್ತ ಪಕ್ಕದಲ್ಲಿರುವ 7ನೇ ವಾರ್ಡ್ ಹಾಗೂ ತಾಲೂಕಿನ ಹಲವು ವಾರ್ಡ್ ಗಳು , ಹೀಗೆ ಬಹುತೇಕ ಭಾಗಗಳಲ್ಲಿನ ಗಟಾರ್‌ಗಳು ತುಂಬಿ ಗಬ್ಬು …

ಪ್ರಚಾರಕ್ಕೆ ಮಾತ್ರ ಸೀಮಿತವಾದ ಸ್ವಚ್ಛಭಾರತ್ Read More »

ಭಗತ್ ಸಿಂಗರ ಆಶಯಗಳನ್ನು ಈಡೇರಿಸೋಣ – ಶಿವಕುಮಾರ ಮ್ಯಾಗಳಮನಿ

ಕವಿತಾಳ : ಪಟ್ಟಣದ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಭಾರತ ವಿದ್ಯಾರ್ಥಿ ಫೆಡರೇಷನ್ ( ಎಸ್ಎಫ್ಐ ) ರಾಯಚೂರು ಜಿಲ್ಲಾ ಸಮಿತಿ ಹಾಗೂ ಕವಿತಾಳ ನಗರ ಘಟಕದ ವತಿಯಿಂದ ಭಗತ್ ಸಿಂಗ್ 114 ನೆಯ ಜನ್ಮ ದಿನಾಚರಣೆ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಣೆ ಕಾರ್ಯಕ್ರಮ ನಡೆಯಿತು‌. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಎಸ್ಎಫ್ಐ ರಾಜ್ಯ ಉಪಾಧ್ಯಕ್ಷರಾದ ಶಿವಕುಮಾರ ಮ್ಯಾಗಳಮನಿ ಮಾತನಾಡಿದ ಭಗತ್ ಸಿಂಗ್ ಒಬ್ಬ ವ್ಯಕ್ತಿಯಾಗಿರದೆ ಒಂದು ಶಕ್ತಿಯಾಗಿದ್ದರು ಅವರು ಈ ದೇಶ ಕಂಡ …

ಭಗತ್ ಸಿಂಗರ ಆಶಯಗಳನ್ನು ಈಡೇರಿಸೋಣ – ಶಿವಕುಮಾರ ಮ್ಯಾಗಳಮನಿ Read More »

Translate »
Scroll to Top