davanagere

ದಾವಣಗೆರೆ: ಚಲಿಸುತ್ತಿದ್ದ ಕಾರಿನ ಟೈರ್ ಸ್ಫೋಟ- ಸ್ಥಳದಲ್ಲಿಯೇ ಇಬ್ಬರ ಸಾವು

ದಾವಣಗೆರೆ: ಚಲಿಸುತ್ತಿದ್ದ ಕಾರಿನ ಟೈರ್ ಸ್ಫೋಟಗೊಂಡ ಪರಿಣಾಮ ಸ್ಥಳದಲ್ಲಿಯೇ ಇಬ್ಬರ ಸಾವನ್ನಪ್ಪಿರುವ ಘಟನೆ ದಾವಣಗೆರೆ ತಾಲೂಕಿನ ಹುಣಸೇಕಟ್ಟೆ ಬಳಿ ಭಾನುವಾರ ರಾತ್ರಿ ನಡೆದಿದೆ.

ಲಸಿಕೆ ತಯಾರಿಕಾ ಸಂಸ್ಥೆಯಿಂದಲೂ ಬಿಜೆಪಿ ೫೨ ಕೋಟಿ ರೂಪಾಯಿ ದೇಣಿಗೆ ಪಡೆದಿದೆ: ಪ್ರಿಯಾಂಕಾ ಗಾಂಧಿ ಆರೋಪ

ದಾವಣಗೆರೆ: ಕೋವಿಡ್ -೧೯ ಲಸಿಕೆ ವಿಚಾರ ಸಂಬಂಧ ಮೋದಿ ರ್ಕಾ ರದ ವಿರುದ್ಧ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಶನಿವಾರ ವಾಗ್ದಾಳಿ ನಡೆಸಿದ್ದು, ಲಸಿಕೆ ತಯಾರಿಕಾ ಸಂಸ್ಥೆಯಿಂದಲೂ ಬಿಜೆಪಿ ರೂ.೫೨ ಕೋಟಿ ದೇಣಿಗೆ ಪಡೆದುಕೊಂಡಿದೆ ಎಂದು ಶನಿವಾರ ಆರೋಪಿಸಿದರು.

ಪ್ರಭಾ ಮಲ್ಲಿಕಾರ್ಜುನ್ ಗೆದ್ದರೆ ನಾನು ಗೆದ್ದಂಗೆ: ಕಾಂಗ್ರೆಸ್ ಹೆಚ್ಚು ಸ್ಥಾನ ಗೆದ್ದರೆ ಮುಖ್ಯಮಂತ್ರಿಯಾಗಿ ನನಗೆ ಹೆಚ್ಚು ಶಕ್ತಿ ಬರುತ್ತದೆ: ಸಿ.ಎಂ

ದಾವಣಗೆರೆ: ನನ್ನ ಮತ್ತು ಕನಕಪೀಠದ ನಿರಂಜನಾನಂದಪುರಿ ಶ್ರೀಗಳ ಮಾತನ್ನು ತಿರಸ್ಕರಿಸಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಫರ್ಧಿಸಿರುವ ವಿನಯ್ ಕುಮಾರ್ ನನ್ನು ನೀವೆಲ್ಲರೂ ತಿರಸ್ಕರಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

UPSC ಪರೀಕ್ಷೆ ಪಾಸ್ ಆಗಲು ಇಲ್ಲಿವೆ ನೋಡಿ ಟಿಪ್ಸ್​

ಯುಪಿಎಸ್‌ಸಿ ಪರೀಕ್ಷೆಗಳೆಂದರೆ ಸ್ಪರ್ಧಾರ್ಥಿಗಳಿಗೆ ದೂರದ ಬೆಟ್ಟವೇ ಸರಿ ಮನಸಲ್ಲಿ ಎಲ್ಲಿಲ್ಲದ ಭಯ ತಲೆಯಲ್ಲಿ ಕಾಡುವ ನೂರಾರು ಆಲೋಚನೆಗಳು ನಾವು ಪಾಸ್ ಆಗ್ತೀವ ಅನ್ನು ನಂಬಿಕೆನೇ ಇಲ್ಲದೆ ಬೇರೆಯವರ ಒತ್ತಾಯಕ್ಕೆ ಅರ್ಜಿ ಸಲ್ಲಿಸಿ ನಾನು ಪರೀಕ್ಷೆ ಬರೆಯುತ್ತೇನೆ ಎಂಬ ಕಾರಣಕ್ಕೆ ಪರೀಕ್ಷೆಯನ್ನು ಬರೆದು ಅನುತ್ತೀರ್ಣರಾಗಿ ನಂತರ ಇದು ನಮಗಲ್ಲ ಅಂತ ಯುಪಿಎಸ್ಸಿ ಯನ್ನು ಬಹುದೂರ ದುಡುವವರೇ ಹೆಚ್ಚು.

ಶ್ಯಾಮ್ ರಾಜಕೀಯ ಉತ್ಸಾಹಕ್ಕೆ ವಿಜಯೇಂದ್ರ ಮೆಚ್ಚುಗೆ

ಹರಿಹರ ; ಹರಿಹರದಲ್ಲಿ ಕಾರ್ಯಕ್ರಮಕ್ಕೆ ಭೇಟಿ ನೀಡಿದ್ದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯದರ್ಶಿ ಹಾಗೂ ಪ್ರಬಲ ಆಕಾಂಕ್ಷಿ ಜಿ.ಎಸ್. ಶ್ಯಾಮ್ ಮತ್ತು ಅವರ ಸ್ನೇಹ ಬಳಗವು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿತು. ಈ ಸಂದರ್ಭದಲ್ಲಿ ಶ್ಯಾಮ್ ಅವರು ವಿಜಯೇಂದ್ರ ಬಳಿ ಮಾಯಕೊಂಡ ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಬಲವರ್ಧನೆ ಹಾಗೂ ತಮ್ಮ ಗೆಲುವಿಗೆ ಜನಬಲಕ್ಕೆ ಬೇಕಾದ ಸಲಹೆ, ಸೂಕ್ತ ಮಾರ್ಗದರ್ಶನ ಪಡೆದರು.ಅಲ್ಲದೆ ಶ್ಯಾಮ್ ಅವರ ರಾಜಕೀಯ ಉತ್ಸಾಹ, ಪಕ್ಷ ಸಂಘಟನೆಯ …

ಶ್ಯಾಮ್ ರಾಜಕೀಯ ಉತ್ಸಾಹಕ್ಕೆ ವಿಜಯೇಂದ್ರ ಮೆಚ್ಚುಗೆ Read More »

ಕೇಂದ್ರದ ಅನುಮತಿ ಪಡೆದು ಹೆಚ್ಚುವರಿ 2 ಲಕ್ಷ ಟನ್ ರಾಗಿ ಖರೀದಿ

ದಾವಣಗೆರೆ: ಕನಿಷ್ಟ ಬೆಂಬಲ ಯೋಜನೆಯಡಿ ಹೆಚ್ಚುವರಿ 2 ಲಕ್ಷ ಮೆಟ್ರಿಕ್ ಟನ್ ರಾಗಿಯನ್ನು ಕೇಂದ್ರದ ಅನುಮತಿ ಪಡೆದು ಖರೀದಿಸಲಾಗುವುದು. ಇದರಿಂದ ರೈತರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.ಅವರು ಇಂದು ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದರು. 2 ಲಕ್ಷ ಟನ್ ಹಾಗೂ 1 ,14,000 ಟನ್ ರಾಗಿ ಖರೀದಿ ಮಾಡಲು ತೀರ್ಮಾನಿಸಲಾಗಿದೆ. ಕೆಲವು ಜಿಲ್ಲೆಗಳಲ್ಲಿ ರಾಗಿ ಖರೀದಿ ಮಾಡಬೇಕೆಂಬ ಬೇಡಿಕೆ ಇದ್ದು, ಈ ಬಗ್ಗೆ ಕೇಂದ್ರ ಆಹಾರ ಸಚಿವರೊಂದಿಗೆ ಚರ್ಚಿಸಿ ಅನುಮತಿ ಪಡೆಯಲಾಗುವುದು ಎಂದರು. ಕನ್ನಡವೇ ಸಾರ್ವಭೌಮ …

ಕೇಂದ್ರದ ಅನುಮತಿ ಪಡೆದು ಹೆಚ್ಚುವರಿ 2 ಲಕ್ಷ ಟನ್ ರಾಗಿ ಖರೀದಿ Read More »

ಹರಿಹರದಲ್ಲಿ ಬೃಹತ್ ಉದ್ಯೋಗ ಮೇಳ

ದಾವಣಗೆರೆ : ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ದಾವಣಗೆರೆ ಜಿಲ್ಲೆಯ ಹರಿಹರದ ವೀರಶೈವ ಲಿಂಗಾಯತ ಮಚಮಸಾಲಿ ಜಗದ್ಗುರು ಪೀಠದಲ್ಲಿ ಆಯೋಜಿಸಿದ್ದ ಬೃಹತ್ ಉದ್ಯೋಗ ಮೇಳದಲ್ಲಿ ಸಿದ್ದರಾಮಯ್ಯ ಅವರು ಭಾಗವಹಿಸಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಂಚಮಸಾಲಿ ನಾಯಕರ ಕೊಡುಗೆ ಕುರಿತು ಸ್ಮರಿಸಿದರು. ಇದೇ ವೇಳೆ ಅವರು ಕಿತ್ತೂರಿನ ವೀರ ರಾಣಿ ಚೆನ್ನಮ್ಮ ಅವರ ಕಲಾಕೃತಿ ಅನಾವರಣಗೊಳಿಸಿದರು. ಪೀಠಾಧೀಶರಾದ ಶ್ರೀ ವಚನಾನಂದ ಸ್ವಾಮಿ, ಮಾಜಿ ಸಚಿವರಾದ ಶಾಮನೂರು ಶಿವಶಂಕರಪ್ಪ, ವಿನಯ ಕುಲಕರ್ಣಿ, ಪರಮೇಶ್ವರ ನಾಯಕ್, ಶಾಸಕ ರಾಮಪ್ಪ, ಮಾಜಿ ಶಾಸಕ ಅಶೋಕ್ …

ಹರಿಹರದಲ್ಲಿ ಬೃಹತ್ ಉದ್ಯೋಗ ಮೇಳ Read More »

ಅವಧಿಗೂ ಮುನ್ನ ಚುನಾವಣೆಯನ್ನು ಬಿಜೆಪಿ ಬಯಸಿಲ್ಲ; ಬಿ.ಎಸ್.ಯಡಿಯೂರಪ್ಪ

ದಾವಣಗೆರೆ : ರಾಜ್ಯ ವಿಧಾನಸಭೆಗೆ ಅವಧಿಗೂ ಮುನ್ನವೇ ಚುನಾವಣೆ ನಡೆಸುವ ಉದ್ದೇಶ ಬಿಜೆಪಿಗೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ,ಬಿಜೆಪಿ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.ದಾವಣಗೆರೆಯಲ್ಲಿಂದು ಹಮ್ಮಿಕೊಂಡಿದ್ದ ಪಕ್ಷದ ಕಾರ್ಯಕರ್ತರ ಸಮಾವೇಶಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ‌ ಅವರು,‌2023 ರ ವಿಧಾನಸಭಾ ಚುನಾವಣೆಗೆ ಬೇಕಾದ ಎಲ್ಲ ಸಿದ್ಧತೆಗಳನ್ನು ಪಕ್ಷ ಮಾಡಿಕೊಳ್ಳಲಾಗುತ್ತಿದೆ ಎಂದರು. ಚುನಾವಣೆ ಬಗ್ಗೆ ಕೇಂದ್ರ‌ನಾಯಕರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ರಾಷ್ಟ್ರೀಯ ನಾಯಕರು‌ ಕೊಟ್ಟಿರುವ 150 ಸ್ಥಾನಗಳನ್ನ ಬರುವ ಚುನಾವಣೆಯಲ್ಲಿ ಗೆಲ್ಲಲು‌ಬೇಕಾದ ಕಾರ್ಯತಂತ್ರಗಳನ್ನ ರೂಪಿಸಲಾಗುತ್ತಿದೆ ಎಂದರು. …

ಅವಧಿಗೂ ಮುನ್ನ ಚುನಾವಣೆಯನ್ನು ಬಿಜೆಪಿ ಬಯಸಿಲ್ಲ; ಬಿ.ಎಸ್.ಯಡಿಯೂರಪ್ಪ Read More »

ಶಾಖಾ ಮಠದ 6ನೇ ವಾರ್ಷಿಕೋತ್ಸವ

ಹರಿಹರ,ಮಾ,27 : ನಗರಾಭಿವೃದ್ಧಿ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಬಿ.ಎ.ಬಸವರಾಜ(ಬೈರತಿ) ಅವರು ತುಳಸಿ ಕಟ್ಟೆಗೆ ನೀರು ಹಾಯಿಸಿ, ಕನಕದಾಸರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಧರ್ಮ ಸಭೆಗೆ ಚಾಲನೆ ನೀಡಿದರು. ಧರ್ಮ ಸಭೆಯ ದಿವ್ಯ ಸಾನಿಧ್ಯವನ್ನು ಶ್ರೀ ಕಾಗಿನೆಲೆ ಕನಕ ಗುರುಪೀಠದ ಜಗದ್ಗುರು ಶ್ರೀ ನಿರಂಜನಾನಂದ ಪುರಿ ಮಹಾಸ್ವಾಮಿಗಳು ವಹಿಸಿದ್ದರು. ದಾವಣಗೆರೆ ಸಂಸದರಾದ ಶ್ರೀ ‌ಜಿ.ಎಂ.ಸಿದ್ದೇಶ್ವರ, ಹರಿಹರ ಶಾಸಕರಾದ ಶ್ರೀ ಎಸ.ರಾಮಪ್ಪ, ‌ಹರಿಹರ ತಾಲ್ಲೂಕಿನ ತಹಶಿಲ್ದಾರ ರಾಮಚಂದ್ರಪ್ಪ, ಬೆಳ್ಳೂಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ …

ಶಾಖಾ ಮಠದ 6ನೇ ವಾರ್ಷಿಕೋತ್ಸವ Read More »

ಉಕ್ರೇನ್​​​ ನಲ್ಲಿ ಮೃತಪಟ್ಟ ನವೀನ್​​​ ನಿವಾಸಕ್ಕೆ ರಾಜ್ಯಪಾಲರ ಭೇಟಿ

ಹಾವೇರಿ ಮಾರ್ಚ್ 24, 2022: ಉಕ್ರೇನ್​​​ ಮಿಸೈಲ್​​ ದಾಳಿ ವೇಳೆ ಮೃತಪಟ್ಟ ಕರ್ನಾಟಕದ ಹಾವೇರಿ ಜಿಲ್ಲೆಯ ಚಳಗೇರಿಯಲ್ಲಿರುವ ನವೀನ್​​​ ನಿವಾಸಕ್ಕೆ ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಗುರುವಾರ ಭೇಟಿ ನೀಡಿದರು. ನವೀನ್ ಭಾವಚಿತ್ರಕ್ಕೆ ಶ್ರದ್ಧಾಂಜಲಿ ಸಲ್ಲಿಸಿ, ಕುಟುಂಬಸ್ಥರೊಂದಿಗೆ ಕೆಲವು ನಿಮಿಷಗಳ ಕಾಲ ಸಾಂತ್ವಾನ ಹೇಳಿದರು. ಈ ಸಂದರ್ಭದಲ್ಲಿ ದಾವಣಗೆರೆ ಜಿಲ್ಲಾಧಿಕಾರಿ, ಹಾವೇರಿ ಜಿಲ್ಲಾಧಿಕಾರಿ ಮುಂತಾದ ಅಧಿಕಾರಿಗಳು ಉಪಸ್ಥಿತರಿದ್ದರು.

Translate »
Scroll to Top