bagalakote

ಉಕ್ರೇನ್‍ನಲ್ಲಿ ಸಿಲುಕಿರುವ ಬೀಳಗಿ ವೈದ್ಯಕೀಯ ವಿದ್ಯಾರ್ಥಿನಿ ಸಹನ ಪಾಟೀಲ್

ಬೀಳಗಿ,ಮಾ.1- ಯುದ್ದ ಪೀಡಿತ ಯುಕ್ರೇನ್‍ನಲ್ಲಿ ಸಿಲುಕಿರುವ ಬಾಗಲಕೋಟೆ ಜಿಲ್ಲೆ ಬೀಳಗಿ ತಾಲ್ಲೂಕಿನ ವೈದ್ಯಕೀಯ ವಿದ್ಯಾರ್ಥಿನಿ ಸಹನ ಪಾಟೀಲ್‍ಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ದೂರವಾಣಿ ವಿಡಿಯೋ ಕರೆ ಮಾಡಿ ಧೈರ್ಯಗೆಡದಂತೆ ಆತ್ಮಸ್ಥೈರ್ಯ ತುಂಬಿದರು. ಇಂದು ಬೆಳಗ್ಗೆ ತಾಲ್ಲೂಕಿನ ಸುನಗ ಗ್ರಾಮದಲ್ಲಿರುವ ಸಹನಾ ತಂದೆ ಪಶು ಚಿಕಿತ್ಸಾಲಯದ ಸಹಾಯಕ ನಿರ್ದೇಶಕ ಮಲ್ಲನಗೌಡ ಪಾಟೀಲ್ ಅವರ ನಿವಾಸಕ್ಕೆ ಭೇಟಿ ನೀಡಿ, ಉಕ್ರೇನ್‍ನ ಕಾರ್ಕೀವ್ ಪಟ್ಟಣದ ವೈದ್ಯಕೀಯ ವಿದ್ಯಾರ್ಥಿನಿ ಸಹನ ಪಾಟೀಲ್ ಅವರ ಜೊತೆ ಕೆಲ …

ಉಕ್ರೇನ್‍ನಲ್ಲಿ ಸಿಲುಕಿರುವ ಬೀಳಗಿ ವೈದ್ಯಕೀಯ ವಿದ್ಯಾರ್ಥಿನಿ ಸಹನ ಪಾಟೀಲ್ Read More »

ಇಬ್ರಾಹಿಂ ಸುತಾರ ಅವರ ನಿಧನಕ್ಕೆ ನಳಿನ್‍ಕುಮಾರ್ ಕಟೀಲ್ ಸಂತಾಪ

ಬೆಂಗಳೂರು,5 : ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ವೈದಿಕ, ವಚನ ಹಾಗೂ ಸೂಫಿ ಪರಂಪರೆ ಆಶಯಗಳ ಹದ ಪಾಕವನ್ನು ಭಜನೆ, ಪ್ರವಚನ, ಸಂವಾದಗಳ ಮೂಲಕ ಉಣಬಡಿಸಿ ಹಿಂದೂ–ಮುಸ್ಲಿಮರ ನಡುವೆ ಭಾವೈಕ್ಯತೆಯ ಕಂಪು ಪಸರಿಸಿದ್ದ ನಾಡಿನ ಕಬೀರ, ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದ ಇಬ್ರಾಹಿಂ ಸುತಾರ ಅವರ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಸಂಸದರೂ ಆದ ನಳಿನ್‍ಕುಮಾರ್ ಕಟೀಲ್ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ. ಇಬ್ರಾಹಿಂ ಸುತಾರ ಅವರಿಗೆ ಮನೆಯಲ್ಲಿನ ಬಡತನದ ಪರಿಸ್ಥಿತಿ ಓದಲು ಉತ್ತೇಜಕವಾಗಿರಲಿಲ್ಲ. ಮೂರನೇ ತರಗತಿಗೆ ಶಿಕ್ಷಣ ಅಪೂರ್ಣಗೊಂಡಿತು. …

ಇಬ್ರಾಹಿಂ ಸುತಾರ ಅವರ ನಿಧನಕ್ಕೆ ನಳಿನ್‍ಕುಮಾರ್ ಕಟೀಲ್ ಸಂತಾಪ Read More »

ಫುಡ್ ಪಾರ್ಕ್ ಯಶಸ್ವಿಗೊಳಿಸಲು ಪರಿಣಾಮ ಮೌಲ್ಯಮಾಪನ

ಬೆಂಗಳೂರು, ಜನವರಿ 29 : ರಾಜ್ಯ ಸರ್ಕಾರ ಪ್ರಾಯೋಜಿತ ನಾಲ್ಕು ಆಹಾರ ಪಾರ್ಕ್ ಗಳನ್ನು ಯಶಸ್ವಿಗೊಳಿಸಲು ‘ಪರಿಣಾಮ ಮೌಲ್ಯಮಾಪನ’ ( impact assessment) ಮಾಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದರು. ಆಹಾರ ಕರ್ನಾಟಕ ನಿಯಮಿತದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಇಂದು ಮಾತನಾಡುತ್ತಿದ್ದರು. ಬಾಗಲಕೋಟೆ, ಹಿರಿಯೂರು, ಮಾಲೂರು ಮತ್ತು ಜೇವರ್ಗಿಯಲ್ಲಿರುವ ಫುಡ್ ಪಾರ್ಕ್ ಗಳಿಗೆ ಸಂಬಂಧಿಸಿದಂತೆ ಭೂಮಿ, ಈಕ್ವಿಟಿ, ಮೂಲಭೂತ ಸೌಕರ್ಯಗಳನ್ನು ಪರಿಶೀಲಿಸಬೇಕು. ಆಹಾರ ಕರ್ನಾಟಕ ನಿಯಮಿತ ಫುಡ್ ಪಾರ್ಕ್ ಗಳನ್ನು ಆರಂಭಿಸಲು ಕೋರಿರುವ 26 …

ಫುಡ್ ಪಾರ್ಕ್ ಯಶಸ್ವಿಗೊಳಿಸಲು ಪರಿಣಾಮ ಮೌಲ್ಯಮಾಪನ Read More »

ಪ್ರತಿಮೆಗಳ ಕೆತ್ತನೆ ಕೆಲಸ

ಬಾದಾಮಿ,ಜನವರಿ, 25 : ಬಾದಾಮಿಯ ಚಾಲುಕ್ಯರ ಸಾಮ್ರಾಜ್ಯದ ಪ್ರಸಿದ್ಧ ದೊರೆ ಇಮ್ಮಡಿ ಪುಲಿಕೇಶಿ ಮತ್ತು ಬಸವೇಶ್ವರರ ಪ್ರತಿಮೆ ಬಾದಾಮಿ ಪಟ್ಟಣದಲ್ಲಿ ಶೀಘ್ರವೇ ಸ್ಥಾಪನೆಯಾಗಲಿದೆ. ಕ್ಷೇತ್ರದ ಶಾಸಕರೂ ಆಗಿರುವ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಇಂದು ಎರಡೂ ಪ್ರತಿಮೆಗಳ ಕೆತ್ತನೆ ಕೆಲಸ ವೀಕ್ಷಿಸಿದರು.

ನೂತನ ಜಿಲ್ಲಾ ಉಸ್ತುವಾರಿ ಸಚಿವರುಗಳ ಪಟ್ಟಿ

ಬೆಂಗಳೂರು ನಗರ – ಬೊಮ್ಮಾಯಿ ಬೆಳಗಾವಿ – ಗೋವಿಂದ ಕಾರಜೋಳ ಚಿಕ್ಕಮಗಳೂರು – ಕೆ.ಎಸ್.ಈಶ್ವರಪ್ಪ ಬಳ್ಳಾರಿ – ಶ್ರೀರಾಮುಲು ಚಾಮರಾಜನಗರ – ವಿ. ಸೋಮಣ್ಣ ವಿಜಯಪುರ -ಉಮೇಶ್ ಕತ್ತಿ ಉಡುಪಿ – ಎಸ್.ಅಂಗಾರ ತುಮಕೂರು – ಆರಗ ಜ್ಞನೇಂದ್ರ ರಾಮನಗರ – ಅಶ್ವತ್ಥ ನಾರಾಯಣ ಬಾಗಲಕೋಟೆ – ಸಿಸಿ ಪಾಟೀಲ್ ಕೊಪ್ಪಳ – ಆನಂದ ಸಿಂಗ್ ಉತ್ತರ ಕನ್ನಡ – ಕೋಟಾ ಯಾದಗಿರಿ – ಪ್ರಭು ಚವ್ಹಾಣ್ ಕಲಬುರಗಿ – ಮುರುಗೇಶ್ ನಿರಾಣಿ ಹಾವೇರಿ – ಶಿವರಾಮ್ …

ನೂತನ ಜಿಲ್ಲಾ ಉಸ್ತುವಾರಿ ಸಚಿವರುಗಳ ಪಟ್ಟಿ Read More »

ಗಣರಾಜ್ಯೋತ್ಸವ ಸ್ತಬ್ಧಚಿತ್ರಕ್ಕೆಇಳಕಲ್ ಸೀರೆ ಮತ್ತು ಗುಳೇದಗುಡ್ಡದ ಖಣ ಆಯ್ಕೆ

ಬಾಗಲಕೋಟೆ,ಜನವರಿ,೨೦ : ಈ ಬಾರಿಯ ಗಣರಾಜ್ಯೋತ್ಸವ ಸ್ತಬ್ಧಚಿತ್ರಗಳ ಪರೇಡ್‌ಗೆ ಕರ್ನಾಟಕದಿಂದ ೧೬ ಕರಕುಶಲ ವಸ್ತುಗಳು ಆಯ್ಕೆಯಾಗಿವೆ.ಈ ಬಾರಿಯ ಪೆರೇಡ್‌ಗೆ ಕರ್ನಾಟಕದಿಂದ ಆಯ್ಕೆಯಾಗಿರುವ ಕರಕುಶಲ ವಸ್ತುಗಳ ಪೈಕಿ ಇಳಕಲ್ ಸೀರೆ ಮತ್ತು ಇದಕ್ಕೆ ಹತ್ತಿರದ ಗುಳೇದಗುಡ್ಡದ ಖಣ (ರವಿಕೆ) ಆಯ್ಕೆಯಾಗಿದೆ. ಇದು ಬಾಗಲಕೋಟೆ ಜಿಲ್ಲೆಯ ನೇಕಾರರ ಸಂತಸಕ್ಕೆ ಕಾರಣವಾಗಿದ್ದು , ಇಳಕಲ್ ಸೀರೆ ಮತ್ತು ಗುಳೇದಗುಡ್ಡದ ಬ್ಲೌಸ್ ಪೀಸ್ ಇವತ್ತಿಗೂ ಬೇಡಿಕೆ ಉಳಿಸಿಕೊಂಡಿವೆ. ಸರ್ಕಾರಕ್ಕೆ ನೇಕಾರರು ಧನ್ಯವಾದ ಸಲ್ಲಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸುನಿಲ್ ಗೌಡ ಪಾಟೀಲ್ ಅವರ ಪರ ಮತ

ಬಾದಾಮಿ : ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಬಾದಾಮಿಯಲ್ಲಿ ಇಂದು ಆಯೋಜಿಸಿದ್ದ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳ ಸಮಾವೇಶದಲ್ಲಿ ಸಿದ್ದರಾಮಯ್ಯ ಅವರು ಭಾಗವಹಿಸಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸುನಿಲ್ ಗೌಡ ಪಾಟೀಲ್ ಅವರ ಪರ ಮತ ಯಾಚಿಸಿದರು. ಮಾಜಿ ಸಚಿವರಾದ ಎಂ.ಬಿ. ಪಾಟೀಲ್, ಉಮಾಶ್ರೀ, ಎಚ್.ವೈ. ಮೇಟಿ, ಬಿ.ಬಿ. ಚಿಮ್ಮನಕಟ್ಟಿ, ಬಾಗಲಕೋಟ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನಂಜಯ್ಯನ ಮಠ, ವಿಜಯಪುರ ಜಿಲ್ಲಾಧ್ಯಕ್ಷ ರಾಜು ಅಲಗೂರ ಹಾಜರಿದ್ದರು. .

ಮೋದಿಜಿಯವರ ಹುಟ್ಟುಹಬ್ಬದ ಪ್ರಯುಕ್ತ ಬೃಹತ್ ರಕ್ತದಾನ ಶಿಬಿರ

ಹುನಗುಂದ -ಇಲಕಲ್ಲ ಅವಳಿ ತಾಲೂಕುಗಳ ಸಹಯೋಗದಲ್ಲಿ ತಾಲೂಕಿನ ಹಲವಾರು ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಸೇವೆ ಮತ್ತು ಸಮರ್ಪಣಾ ಅಭಿಯಾನದ ಅಂಗವಾಗಿ ಸನ್ಮಾನ್ಯ ಶ್ರೀ ನರೇಂದ್ರ ಮೋದಿಜಿ ಅವರ ಹುಟ್ಟುಹಬ್ಬದ ಪ್ರಯುಕ್ತ, ಶ್ರೀ ಗುರುಮಹಾಂತ ಸ್ವಾಮಿಜಿ ಹಾಗು ಶಾಸಕರಾದ ದೊಡ್ಡನಗೌಡ ಜಿ ಪಾಟೀಲ ಹಾಗು ಡಾ|| ಮಹಾಂತೇಶ ಕಡಪಟ್ಟಿ. ಅರವಿಂದ ಮಂಗಳೂರ . ಮಹಾಂತಗೌಡ ಪಾಟೀಲ ಹಲವಾರು ಪ್ರಮುಖರ ಹಾಗು ವೈಧ್ಯರ ಬಳಗದ ನೇತೃತ್ವದಲ್ಲಿ ರಕ್ತಗುಂಪು ತಪಾಸಣೆ ಹಾಗು ಬೃಹತ್ ರಕ್ತದಾನ ಶಿಬಿರ*ಕಾರ್ಯಕ್ರಮ ನಡೆಯಿತು. ಹುನಗುಂದ ನಗರದಲ್ಲಿ ಆಯೋಜನೆ …

ಮೋದಿಜಿಯವರ ಹುಟ್ಟುಹಬ್ಬದ ಪ್ರಯುಕ್ತ ಬೃಹತ್ ರಕ್ತದಾನ ಶಿಬಿರ Read More »

ಶಿಕ್ಷಣ ನೀಡಿದ ಶ್ರೀ ವಿಜಯ ಮಹಾಂತೇಶ ಮಹಾವಿದ್ಯಾಲಯಕ್ಕೆ ನಾನು ಚಿರರುಣಿ: DYSP ಹನಮಂತ ಭಜಂತ್ರಿ

ಇಲಕಲ: ಶಿಕ್ಷಣ ನೀಡಿದ ಶ್ರೀ ವಿಜಯ ಮಹಾಂತೇಶ ಮಹಾವಿದ್ಯಾಲಯಕ್ಕೆ ನಾನು ಚಿರರುಣಿ: DYSP ಹನುಮಂತ ಭಜಂತ್ರಿ. ಇಲಕಲ್ಲ ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಶ್ರೀ ವಿಜಯ ಮಹಾಂತೇಶ ಮಹಾವಿದ್ಯಾಲಯಲ್ಲಿ ಉನ್ನತ ಶಿಕ್ಷಣ ಪಡೆದು ಇಂದು ಹೊಸಪೇಟೆ ಜಿಲ್ಲಾ ಅಬಕಾರಿ ಇಲಾಖೆಯ DYSP ಯಾಗಿ ಕಾರ್ಯ ನಿರ್ವಹಿಸುತ್ತಿರುವ ಹನುಮಂತ ಭಜಂತ್ರಿ ಅವರು ಸರಳ ಸತ್ಕಾರ ಸಮಾರಂಭದಲ್ಲಿ ಹೇಳಿದರು. ಕಡುಬಡತನದ ಕುಟುಂಬದಿಂದ ಬಂದ ಕೊರಮ ಸಮಾಜದ ಹನುಮಂತ ಭಜಂತ್ರಿ ದೋಟಿಹಾಳ ಇವರು ಇಲಕಲ್ಲ ನಗರಕ್ಕೆ ಭೇಟಿ ನೀಡಿದಾಗ ಸಮಾಜದ ಅಧ್ಯಕ್ಷ …

ಶಿಕ್ಷಣ ನೀಡಿದ ಶ್ರೀ ವಿಜಯ ಮಹಾಂತೇಶ ಮಹಾವಿದ್ಯಾಲಯಕ್ಕೆ ನಾನು ಚಿರರುಣಿ: DYSP ಹನಮಂತ ಭಜಂತ್ರಿ Read More »

ಯೋಗಾ ಕುಟುಂಬದ ವತಿಯಿಂದ ಜನ್ಮ ದಿನಾಚರಣೆ ಆಚರಣೆ

ಇಳಕಲ್ : ಯೋಗಾ ಕುಟುಂಬದ ವತಿಯಿಂದ ಮಹಾತ್ಮ ಗಾಂಧಿಜಿ ಹಾಗು ಲಾಲ ಬಹದ್ದೂರ್ ಶಾಸ್ತ್ರಿಜಿ ಅವರ ಜನ್ಮ ದಿನಾಚರಣೆ ಆಚರಣೆ. ನಗರದ ಹುಲಗೇರಿ ರಸ್ತೆಯಲ್ಲಿ , ಯೋಗಾ ಕುಟುಂಬದ ಹೊಸ ಜಾಗ ಉದ್ಘಾಟನೆ ಹಾಗು ಮಹಾತ್ಮ ಗಾಂಧಿಜಿ ಹಾಗು ಲಾಲ ಬಹದ್ದೂರ್ ಶಾಸ್ತ್ರಿಜಿ ಅವರ ಜನ್ಮ ದಿನಾಚರಣೆ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಯೋಗಾ ಕುಟುಬದ ಆಡಳಿತ ಮಂಡಳಿ ಹಾಗು ಸದಸ್ಯರುಗಳು ಪಾಲ್ಗೋಂಡು ಸಸಿ ನೇಡುವದರ ಮೂಲಕ ಆಚರಿಸಲಾಯಿತು.

Translate »
Scroll to Top