ಕುಷ್ಟಗಿ ; ವಾಲ್ಮೀಕಿ ಗುರು ಪೀಠದ ಪ್ರಸಾದ ನಂದ ಸ್ವಾಮೀಜಿಗಳು ವಾಲ್ಮೀಕಿ ಮತ್ತು ಪರಿಶಿಷ್ಟ ಜಾತಿ ಜನಾಂಗಕ್ಕೆ ಮಿಸಲಾತಿ ನೀಡಬೇಕು ಎಂದು ಮತ್ತು ಹಿಂದುಳಿದ ವರ್ಗದವರಿಗೆ ಮಿಸಲಾತಿ ದೊರೆಯಬೇಕು ಎನ್ನುವ ದೃಷ್ಟಿಯಿಂದ ಬೆಂಗಳೂರುನ ವಿಧಾನ ಸೌಧ ಪ್ರೀ ಡಮ್ ಪಾರ್ಕಿನಲ್ಲಿ ಸುಮಾರು ೯೫ ದಿನಗಳಿಂದ ಮಳೆ ಬಿಸಿಲು ಎಂದು ಲೆಕ್ಕಿಸದೇ ನಿರಂತರವಾಗಿ ಹೋರಾಟವನ್ನು ಮಾಡುತ್ತಿದ್ದಾರೆ ಇವತ್ತು ಸ್ವಾಮೀಗಳ ಬೇಡಿಕೆಗಳನ್ನು ಹಿಡಿರಿಸಲು ಸರಕಾರ ಮುಂದಾಗದ ಕಾರಣ ಇದೇ ತಿಂಗಳ ಮೇ . ೨೦ ರಂದು ಕೊಪ್ಪಳ ಜಿಲ್ಲೆ ಅಲ್ಲದೇ ಕರ್ನಾಟಕ ರಾಜ್ಯಾದ್ಯಂತ ಸರಕಾರದ ವಿರುದ್ಧ ಸಂಪೂರ್ಣ ಬಂದ ಕರೆ ನೀಡಿ ಕುಷ್ಟಗಿಯಲ್ಲಿ ಬಹಳ ಶಾಂತಿಯುತವಾಗಿ ಪ್ರತಿಭಟನೆ ಮಾಡಲಾಗುವದು ಎಂದು ವಾಲ್ಮೀಕಿ ಸಮಾಜದ ಕೊಪ್ಪಳ ಜಿಲ್ಲಾಧ್ಯಕ್ಷ ಟಿ.ರತ್ನಾಕರ್ ಹೇಳಿದರು.
ಇಲ್ಲಿನ ಹಳೇ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು ಕೊಪ್ಪಳ ರಸ್ತೆಯಿಂದ ಪಟ್ಟಣದ ವಿವಿಧ ವೃತ್ತದಲ್ಲಿ ಸಂಚರಿಸಿ ರಾಷ್ಟ್ರೀಯ ಹೆದ್ದಾರಿಯ ಅಂಬೇಡ್ಕರ್ ಕರ್ಸಕಲ್ ನಲ್ಲಿ ಪ್ರತಿಭಟಿಸಿ ತಹಶೀಲ್ದಾರ ಮೂಲಕ ಮನವಿ ಸಲ್ಲಿಸಲಾಗುವದು. ನಮ್ಮ ವಾಲ್ಮೀಕಿ ಗುರು ಪೀಠದ ಸ್ವಾಮೀಜಿಯವರು ವಾಲ್ಮೀಕಿ ಸಮಾಜಕ್ಕೆ ಶೇ.೭.೨ ಪರಿಶಿಷ್ಟ ಜಾತಿ ಜನಾಂಗಕ್ಕೆ ಶೇ.೧೫ ರಿಂದ ೧೮% ರಷ್ಟು ಮಿಸಲಾತಿಯನ್ನು ಹೆಚ್ಚಿಸಬೇಕು ಎಂದು ಬೆಂಗಳೂರನ ಪ್ರೀಡಮ್ ಪಾರ್ಕನಲ್ಲಿ ನಿರಂತರವಾಗಿ ಸುಮಾರು ೯೫ ದಿನಗಳಿಂದ ಹೋರಾಟವನ್ನು ನೆಡೆಸುತ್ತಾ ಬಂದಿದ್ದಾರೆ ಆದರೆ ಸರಕಾರ ಮಾತ್ರ ಹೋರಾಟಕ್ಕೆ ಬೆಲೆ ನೀಡಿದೆ ಕಾಲ ಹರಣ ಮಾಡುತ್ತಿದೆ ಅದಕ್ಕಾಗಿ ಇವತ್ತು ಸ್ವಾಮೀಜಿಗಳಿಗೆ ಬೆಂಬಲಿಸಿ ಕೊಪ್ಪಳ ಮತ್ತು ಕುಷ್ಟಗಿ ತಾಲೂಕಿನ ಸರ್ವಜನರ ಬೆಂಬಲದೊಂದಿಗೆ ಇದೇ ತಿಂಗಳ ಮೇ.೨೦ ರಂದು ಕುಷ್ಟಗಿ ಬಂದಗೆ ಕರೆ ನೀಡಲಾಗಿದೆ. ಆದ್ದರಿಂದ ಹಿಂದುಳಿದ ವರ್ಗದ ಎಲ್ಲಾ ಸಮಾಜದವರು ಈ ಹೋರಾಟಕ್ಕೆ ಬೆಂಬಲಿಸಬೇಕು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಪರಿಶಿಷ್ಟ ಜಾತಿ ಜನಾಂಗದ ನಾಯಕ ಶುಕರಾಜ ತಾಳಕೇರಿ, ಮುಸ್ಲಿಂ ಸಮಾಜದ ಮುಖಂಡ ಹುಡೇದ್ ಈ ಹೋರಾಟಕ್ಕೆ ಬೆಂಬಲ ನೀಡುವದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ವಾಲ್ಮೀಕಿ ಸಮಾಜದ ಅಧ್ಯಕ್ಷ ಬಸವರಾಜ ನಾಯಕ, ಈರಪ್ಪ ನಾಯಕ, ಅಡಿಯಪ್ಪ ಕೊನಸಾಗರ, ಪ್ರಕಾಶ ಸೇರಿದಂತೆ ಹಲವಾರರು ಉಪಸ್ಥಿತರಿದ್ದರು.