ಸಂವಿಧಾನ ಬದ್ಧ ಮೀಸಲಾತಿಗಾಗಿ ಹೋರಾಟ : ಹತ್ತಿಕೋಟೆ ವೀರೇಂದ್ರಸಿಂಹ

ಕುಷ್ಟಗಿ: ಉದ್ಯೋಗ ಮತ್ತು ಮೀಸಲಾತಿಯಲ್ಲಿ ‌ಪರಿಶಿಷ್ಟರಿಗೆ ಪ್ರತೀ ವರ್ಷ ಸುಮಾರು ೪೦ ಸಾವಿರ ಆಕಾಂಕ್ಷಿಗಳಿಗೆ ಅನ್ಯಾಯವಾಗುತ್ತಿದ್ದು ನಮ್ಮ ಸಂವಿಧಾನಬದ್ಧ ಹಕ್ಕನ್ನು ಪಡೆಯಲು ನಾವು ಹೋರಾಟಕ್ಕೆ ಸಿದ್ಧ ಎಂದು ಬೆಳಗಾವಿ ವಿಭಾಗದ ಮೀಸಲಾತಿ ಹೋರಾಟ ಸಂಚಾಲಕ ಹತ್ತಿಕೋಟೆ ವೀರೇಂದ್ರಸಿಂಹ ಹೇಳಿದರು. ಪಟ್ಟಣದ ಹಳೇ ಪ್ರವಾಸಿ ಮಂದಿರದಲ್ಲಿ ಸುದ್ದೀಗೋಷ್ಠಿಯಲ್ಲಿ ಮಾತನಾಡುತ್ತಾ ನಮ್ಮ ಸಮುದಾಯದ ಪ್ರಸನ್ನಾನಂದ ಮಹಾಸ್ವಾಮಿಗಳು ಹಾಗೂ ಜಸ್ಟಿಸ್ ನಾಗಮೋಹನದಾಸ ವರದಿ ಜಾರಿಗಾಗಿ ಈಗಾಗಲೆ ಅಹೋರಾತ್ರಿ ಧರಣಿ ನಡೆದಿದೆ. ಸರಕಾರಕ್ಕೆ ವರದಿ ಸಲ್ಲಿಸಿ ಎರಡು ವರ್ಷಗಳ ಆಗುತ್ತ ಬಂದರೂ ಮೀಸಲಾತಿ ಪ್ರಯೋಜನ ಆಗಿಲ್ಲ. ಪರಿಶಿಷ್ಟ ಪಂಗಡಕ್ಕೆ ೭% ಒಳಮೀಸಲಾತಿ ನಮ್ಮ ಸಂವಿಧಾನ ಬದ್ಧ ಹಕ್ಕು, ಶಿಕ್ಷಣ ಮತ್ತು ಉದ್ಯೋಗ ಮೀಸಲಾತಿ ಬೇಕು.

ಸರಕಾರ ಇದುವರೆಗೂ ಯಾವ ತೀರ್ಮಾನವನ್ನು ಕೈಗೊಂಡಿಲ್ಲ. ಧರಣಿ ಆರಂಭದಲ್ಲಿ ೧೫ ದಿನಗಳಲ್ಲಿ ಈಡೇರಿಸುವ ಭರವಸೆ ನೀಡಿದ್ದರೂ ಯಾವವುದೇ ಪ್ರಯೋಜನವಾಗಲಿಲ್ಲ. ಆದರೆ ಇನ್ನೂ ಯಾವದೇ ಪ್ರತಿಕ್ರಿಯೆ ಬಂದಿಲ್ಲ. ಆದ್ದರಿಂದ ಮುಂದಿನ ದಿನಮಾನದಲ್ಲಿ ಹಳ್ಳಿ ಹಳ್ಳಿಗಳಲ್ಲಿ ಹೊರಾಟಕ್ಕೆ‌ ಕರೆ ನೀಡಲಾಗುತ್ತದೆ. ನಾಲ್ಕನೆಯ ಅತಿ ದೊಡ್ಡ ಸಮಾಜ ವಾಲ್ಮೀಕಿ ಸಮಾಜ. ಸುಮಾರು ಪರಿಶಿಷ್ಟರ ೫೦ಕ್ಕೂ ಹೆಚ್ಚು ಜಾತಿಗಳು ಮೀಸಲಾತಿಯ ಅನುಕೂಲ ಪಡೆಯಲಿದ್ದಾರೆ. ಹೀಗಾಗಿ ಸಂವಿಧಾನ ಬದ್ಧ ಮೀಸಲಾತಿಗೆ ಕರ್ನಾಟಕ ದಾದ್ಯಂತ ಹೋರಾಟಕ್ಕೆ ಮುನ್ನುಡಿ ಬರೆಯಲಾಗುತ್ತದೆ ಎಂದರು. ಟಿ. ರತ್ನಾಕರ, ಬಸವರಾಜ ನಾಯಕ, ಹತ್ತಿಕೋಟೆ ವೀರೇಂದ್ರಸಿಂಹ ಬೆಳಗಾವಿ ವಿಭಾಗದ ಸಂಚಾಲಕ, ಈರಪ್ಪ ನಾಯಕ, ಕಳಕಪ್ಪ, ರಾಮನಗೌಡ, ಜಗ್ಗನಗೌಡ, ಮುದಿಯಪ್ಪ, ಪುಂಡನಗೌಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

Translate »
Scroll to Top