ಬಳ್ಳಾರಿ: ವೇದಮೂರ್ತಿ ಶ್ರೀ ಸೋಮಯ್ಯ ಸ್ವಾಮಿ ಪಟ್ಟಿಕಂತಿ ಹಿರೇಮಠ (85) ಅವರು ವಯೋ ಸಹಜ ಅನಾರೋಗ್ಯದ ಕಾರಣ ಶುಕ್ರವಾರ ಬೆಳಿಗ್ಗೆ 11.30 ರ ಸುಮಾರಿಗೆ ಮನೆಯಲ್ಲಿ ನಿಧನರಾಗಿದ್ದಾರೆ.

ಮೃತರು ಪುತ್ರ ಬಿಐಟಿಎಂ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಅಮರೇಶಯ್ಯ ಹಿರೇಮಠ ಸೇರಿ ನಾಲ್ವರು ಪುತ್ರರು, ಸೊಸೆಯಂದಿರರು, ಓರ್ವ ಪುತ್ರಿ, ಅಳಿಯ ಹಾಗೂ ಮೊಮ್ಮಕ್ಕಳನ್ನು – ಅಪಾರ ಸಂಖ್ಯೆಯ ಶಿಷ್ಯ ವರ್ಗ, ಭಕ್ತರು , ಬಂದು ವರ್ಗ ವನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆಯು ಅವರ ಸ್ವಗ್ರಾಮ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಗೆಜ್ಜಲಗಟ್ಟ ಗ್ರಾಮದ ಹೊಲದಲ್ಲಿ ವೀರಶೈವ ವಿಧಿ ಸಂಪ್ರದಾಯಗಳ ಪ್ರಕಾರ ನಾಳೆ ಶನಿವಾರ ಬೆಳಿಗ್ಗೆ 12.00 ಗಂಟೆಗೆ ನೆರವೇರಲಿದೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ಸಂತಾಪ
ಮೃತರ ಆತ್ಮಕ್ಕೆ ಶಾಂತಿಕೋರಿ ಬಿಐಟಿಎಂ ಸಂಸ್ಥೆಯ ಆಡಳಿತ ಮಂಡಳಿಯ ಮುಖ್ಯಸ್ಥ ಡಾ. ಯಶವಂತ ಭೂಪಾಲ್, ಡಾ. ವೆಂಕಟ್ ಮಹಿಪಾಲ್,ಅಶೋಕ್ ಭೂಪಾಲ್, ಲಿಂಗರಾಜ ಭೂಪಾಲ್ ಹಾಗೂ ಸಿಬ್ಬಂದಿಯು ಸಂತಾಪ ವ್ಯಕ್ತಪಡಿಸಿದ್ದಾರೆ.
Facebook
Twitter
LinkedIn
Telegram
WhatsApp
Email
Print