ಜನಿಕರಿಗೆ ಜಾಗೃತಿ ಮೂಡಿಸಲು ಒಂದು ದಿನ ಇಡೀ ಪೊಲೀಸರ ಕೆಲಸ- ಡಿವೈಎಸ್ಪಿ ನಾಯಕ್

ಸಿಂಧನೂರು, ಸಣ್ಣ ಪುಟ್ಟ ಕಳ್ಳತನ ಇತ್ತೀಚೆಗೆ ಆಗುತ್ತಿದ್ದಾವೆ ಇದರ ಬಗ್ಗೆ ಈಗಾಗಲೇ ಜಾಗೃತಿ ಮೂಡಿಸುವ ಕೆಲಸ ಇಲಾಖೆಯಿಂದ ಆಗಿದೆ, ಸೋಮವಾರ ಇಡೀ ತಂಡವೇ ಜಾಗೃತಿ ಮೂಡಿಸುವ ಕೆಲಸ ಮಾಡಲಾಗಿದೆ ಎಂದು ಡಿವೈಎಸ್ಪಿ ವೆಂಕಟಪ್ಪ ನಾಯಕ್ ಹೇಳಿದರು
ಈ ಕುರಿತು ಅವರು ಪತ್ರಿಕೆಯೊಂದಿಗೆ ಮಾತನಾಡಿ ತಿಂಗಳಿಗೆ ಒಂದು ಬಾರಿ ಪ್ರತಿ ತಿಂಗಳು ನಮ್ಮ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಒಟ್ಟಿಗೆ ಸೇರಿ ವಿವಿಧ ವಾರ್ಡಗಳು, ಮುಖ್ಯರಸ್ತೆಗಳಲ್ಲಿ ಜಾಗೃತಿಯ ಬಗ್ಗೆ ಹಾಗೂ ಕಾನೂನು ನೇಮಗಳ ಪಾಲಿಸುವುದರ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಿದ್ದೇವೆ ಎಂದರ
ರಾತ್ರಿ ತಿರುಗಾಡುವ ಎಲ್ಲ ವಾಹನಗಳಿಗೆ ಚೆಕ್- ರಾತ್ರಿ ಸಮಯದಲ್ಲಿ ತಿರುಗಾಡುವ ಎಲ್ಲ ವಾಹನಗಳಿಗೆ ಮಾತ್ಮಗಾಂದಿ ವೃತ್ತದ ಬಳಿ ಚಕ್ ಮಾಡಿ ಕಳಿಸಲಾಗುತ್ತದೆ, ಅನುಮಾನ ಬಂದಂತಹ ಗಾಡಿಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುವ ಕೆಲಸ ಇಲಾಖೆಯಿಂದ ಮಾಡುತ್ತಿದ್ದೇವೆ ಎಂದರು
ಸಿಸಿ ಕ್ಯಾಮೆರಾ ಹಾಕಿಕೊಳ್ಳಲು ಸಾರ್ವಜನಿಕರಲ್ಲಿ ಮನವಿ- ಜನ ದಂಡನೆ ಸ್ಥಳಗಳಲ್ಲಿ ಇರುವ ದೊಡ್ಡ ಅಂಗಡಿಯ ಮಾಲೀಕರು ಹಾಗೂ ಶಾಲಾ ಕಾಲೇಜು ಆಡಳಿತ ಮಂಡಳಿಯವರು ತಮ್ಮ ಕಾಲೇಜುಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿಕೊಳ್ಳಬೇಕು ಇದರಿಂದ ಕಳ್ಳತನ ಪ್ರಕರಣಗಳು ತಡೆಗಟ್ಟಲು ಸಾಧ್ಯವಾಗುತ್ತದೆ ಹಾಗಾಗಿ ಪ್ರತಿಯೊಬ್ಬರೂ ಪೊಲೀಸ್ ಇಲಾಖೆಗೆ ಸಹಕರಿಸಬೇಕು ಎಂದು ಮನವಿ ಮಾಡಿಕೊಂಡರು
ಸಿಂಧನೂರಿನಲ್ಲಿ ಅತಿ ಹೆಚ್ಚು ಜಾಗೃತಿ ಮೂಡಿಸಿದ್ದೇವೆ- ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳಬೇಕು ಹಾಗೂ ರಸ್ತೆ ಸಂಚರಿಸುವಾಗ ಹಾಗೂ ಅಂತ ಅಪಘಾತಗಳ ಬಗ್ಗೆ ಮಾಹಿತಿ ನೀಡಿದ್ದೇವೆ ಸೇರಿದಂತೆ ಇನ್ನಿತರ ಕಾನೂನು ನಿಯಮಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಅತಿ ಹೆಚ್ಚು ಸಿಂಧನೂರಿನಲ್ಲಿ ಮಾಡಲಾಗಿದೆ ಎಂದರು

Leave a Comment

Your email address will not be published. Required fields are marked *

Translate »
Scroll to Top