144ಸೆಕ್ಷನ್ ಜಾರಿಯಾಗಿರುವ ಕಾರಣದಿಂದ ಮೌನ ಪ್ರತಿಭಟನೆ

ಬೆಂಗಳೂರು,ಮಾ,15 : ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಹಲವಾರು ಕಾಮಗಾರಿಗಳಿಗೆ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿಯ ಜಯನಗರ ಕ್ಷೇತ್ರದ ಅನುದಾನವನ್ನು ಕಡಿತ ಮಾಡಿರುವುದನ್ನ ಖಂಡಿಸಿ ಜಯನಗರ ಕಾಂಪ್ಲೆಕ್ಸ್ ಮುಂಭಾಗದಲ್ಲಿ ಮೌನ ಪ್ರತಿಭಟನೆ ಕಾರ್ಯಕ್ರಮ. ಶಾಸಕರಾದ ಶ್ರೀಮತಿ ಸೌಮ್ಯರೆಡ್ಡಿ ರವರ ನೇತೃತ್ವದಲ್ಲಿ ಮಾಜಿ ಮಹಾಪೌರರಾದ ಶ್ರೀಮತಿ ಗಂಗಾಭಿಕೆ ಮಲ್ಲಿಕಾರ್ಜುನ್, ಮಾಜಿ.ಬಿ.ಬಿ. ಎಂ ಪಿ ಸದಸ್ಯರಾದ ಎನ್. ನಾಗರಾಜು ಹಾಗೂ ಜಯನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು ಮೌನ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಶಾಸಕರಾದ ಸೌಮ್ಯ ರೆಡ್ಡಿರವರು ಮಾತನಾಡಿ ಜಯನಗರ ವಿಧಾನ ಸಭಾ ಕ್ಷೇತ್ರದ ಅನುದಾನ ಕಡಿತ ಮಾಡಿರುವ ಬಗ್ಗೆ ಹಾಗೂ 2019-20ನೇ ಸಾಲಿನ ಆಯವ್ಯಯದಲ್ಲಿ ಕಾಂಗ್ರೆಸ್ ಸರ್ಕಾರದ ಅಂದಿನ ಮುಖ್ಯಮಂತ್ರಿಗಳಾಗಿದ್ದ ಮಾನ್ಯ ಶ್ರೀ ಸಿದ್ಧರಾಮಯ್ಯನವರು ಜಯನಗರ ಕ್ಷೇತ್ರಕ್ಕೆ ರೂ.150.00 ಕೋಟಿ ಅನುದಾನ ಮೀಸಲಿಟ್ಟಿದ್ದರು. ಜಯನಗರ ವಾಣಿಜ್ಯ ಸಂಕೀರ್ಣದ ಕಾಮಗಾರಿಗೆ ರೂ.60.00 ಕೋಟಿ ಹಾಗೂ ವಿವಿಧ ಕಾಮಗಾರಿಗಳಿಗೆ ರೂ.90.00 ಕೋಟಿ ಅನುದಾನ ಮೀಸಲಿಡಲಾಗಿತ್ತು. ಈಗ ರಾಜ್ಯ ಬಿ.ಜೆ.ಪಿ. ಸರ್ಕಾರ ಹಾಗೂ ಬಿ.ಬಿ.ಎಂ.ಪಿ.ಯು ಈ ಅನುದಾನವನ್ನು ಬಿ.ಜೆ.ಪಿ. ಶಾಸಕರಿರುವ ಕ್ಷೇತ್ರಕ್ಕೆ ನೀಡಿದ್ದಾರೆ. ಆದರೆ ಜಯನಗರ ವಿಧಾನಸಭಾ ಕ್ಷೇತ್ರಕ್ಕೆ ಅನ್ಯಾಯವಾಗಿರುತ್ತದೆ.

ಈ ಅನುದಾನದ ಅಡಿಯಲ್ಲಿ ಬರುವ ಸಂಕೀರ್ಣದಲ್ಲಿ ಸುಮಾರು 750 ಕಾರುಗಳ ನಿಲ್ದಾಣ ಪಾರ್ಕಿಂಗ್) ಹಾಗೂ 1500 ದ್ವಿಚಕ್ರ ವಾಹನಗಳ ನಿಲ್ದಾಣ, ಖ್ಯಾತ ಚಲನಚಿತ್ರ ನಿರ್ದೇಶಕರಾದ ದಿವಂಗತ ಶ್ರೀ ಪುಟ್ಟಣ್ಣ ಕಣಗಾಲ್‌ರವರ ಹೆಸರಿನಲ್ಲಿ ಎರಡು (2) ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳು, ಎರಡು (2) ರಂಗಮಂದಿರಗಳು ಮತ್ತು ಸುಸಜ್ಜಿತವಾದ ಮಳಿಗೆಗಳು. ಇದರಿಂದಾಗಿ ಸುಮಾರು 50 ವರ್ಷಗಳಿಂದ ಈ ಸಂಕೀರ್ಣದಲ್ಲಿದ್ದ ಮಳಿಗೆಗಳ ಮಾಲೀಕರು ಹೊಸದಾಗಿ ನಿರ್ಮಿಸುವ ವಾಣಿಜ್ಯ ಸಂಕೀರ್ಣಕ್ಕೆ ಬದಲಾಯಿಸಿಕೊಳ್ಳಲು ಬಿ.ಬಿ.ಎಂ.ಪಿ. ವತಿಯಿಂದ ಷರತ್ತು ಬದ್ಧ ಬರವಣಿಗೆಯಲ್ಲಿ ಮೂರು ವರ್ಷಗಳ ಅವಧಿಯೊಳಗೆ ಬದಲಾಯಿಸಿಕೊಡುವ ಷರತ್ತಿನೊಂದಿಗೆ ಮಳಿಗೆಗಳ ಮಾಲೀಕರುಗಳನ್ನು ಮಾಡಿಸಲಾಗಿರುತ್ತದೆ. ಭರವಸೆಯೊಂದಿಗೆ ಈ ಹಿಂದೆ ಬಿ.ಜೆ.ಪಿ. ಸರ್ಕಾರ ಇರುವಾಗಲೇ ಭೂಮಿಪೂಜೆ (ಗುದ್ದಲಿ ಪೂಜೆ) ಸಹ ಮಾಡಿರುತ್ತಾರೆ. ಈಗ ಈ ಮೂರು ವರ್ಷಗಳ ಅವಧಿ ಮುಗಿಯುವ ಸಮಯ ಬಂದಿದ್ದು, ಇನ್ನೂ ಹೊಸದಾಗಿ ಸಂಕಿರ್ಣ ನಿರ್ಮಾಣ ಈಗಾಗಲೇ ವಾಣಿಜ್ಯ ಮಳಿಗೆಗಳನ್ನು ಕಾಮಗಾರಿಯನ್ನು ಪ್ರಾರಂಭಿಸಿರುವುದಿಲ್ಲ. ಮಾಡಿರುವ ಮಳಿಗೆ ಇದರಿ೦ದ,ಮಾಲೀಕರುಗಳು ವ್ಯಾಪಾರವಿಲ್ಲದೇ ಅವರ ಸಂಸಾರವನ್ನು ನಡೆಸಲು ತುಂಬಾ ತೊಂದರೆಯಾಗುತ್ತಿದ್ದು, ಅವರುಗಳು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿಯಲ್ಲಿದ್ದಾರೆ.

ಹಳೆಯ ಸಂಕೀರ್ಣಕ್ಕೆ ಇರುವಂತಹ ಜಾಗಕ್ಕೆ ಸುತ್ತಲೂ ತಾತ್ಕಾಲಿಕ ಜಿಂಕ್‌ಶೀಟ್ ಅಳವಡಿಸಿ ಮುಚ್ಚಿರುತ್ತಾರೆ. ಈ ಮುಚ್ಚಿರುವ ಜಾಗದಲ್ಲಿ ಶೌಚಾಲಯ ಕುಡುಕರ ಹಾಗೂ ಪುಂಡುಪೋಕರಿಗಳ ಅನೈತಿಕ ಚಟುವಟಿಕೆಗಳು, ಹಾವಳಿ ಹೆಚ್ಚಾಗಿದ್ದು, ಪಕ್ಕದಲ್ಲೇ ಇರುವಂತಹ ಬಿ.ಬಿ.ಎಂ.ಪಿ. ಕಛೇರಿ, ನಾಡಕಛೇರಿ, ರೈಲ್ವೆ ಟಿಕೆಟ್ ಬುಕ್ಕಿಂಗ್ ಇನ್ನೂ ಅನೇಕ ಸರ್ಕಾರಿ ಕಛೇರಿಗಳಿದ್ದು, ಕಛೇರಿಗೆ ಬರುವಂತಹ ಸಾರ್ವಜನಿಕರಿಗೆ ತು೦ಬಾ ಅನಾನುಕೂಲ ಆಗುತ್ತಿರುತ್ತದೆ. ಅಲ್ಲದೇ, ಈ ಹಿಂದೆ ಇದೇ ಜಾಗದ ಫುಟ್‌ಪಾತ್ ಮೇಲೆ ಹಿರಿಯ ನಾಗರೀಕರಿಗೆ ಕುಳಿತುಕೊಳ್ಳಲು ಸಿಮೆಂಟ್ ಬೆಂಚ್‌ಗಳನ್ನು ವ್ಯವಸ್ಥೆ ಮಾಡಲಾಗಿತ್ತು, ಈ ವ್ಯವಸ್ಥೆ ಇಲ್ಲದೇ ಹಿರಿಯ ನಾಗರೀಕರು ತಮ್ಮ ಜೀವನದ ಮುಸ್ಸಂಜೆಯಲ್ಲಿ ತೊಂದರೆಗೊಳಗಾಗುತ್ತಿದ್ದಾರೆ. ಆದುದರಿ೦ದ, ಈಗಲಾದರೂ ಮೇಲ್ಕಂಡ ವಾಣಿಜ್ಯ ಸಂಕೀರ್ಣ ಹಾಗೂ ವಿವಿಧ ಕಾಮಗಾರಿಗಳಿಗೆ ಈ ಹಿಂದೆ ಮೀಸಲಿಟ್ಟಿದ್ದ ಅನುದಾನವನ್ನು ಬಿಡುಗಡೆ ಮಾಡಿ, ಕಾಮಗಾರಿಗಳಿಗೆ ಆದಷ್ಟು ಶೀಘ್ರವಾಗಿ ಚಾಲನೆ ನೀಡಿ, ಈಗ ಆಗುತ್ತಿರುವಂತಹ ಅನಾನುಕೂಲಗಳು ಮತ್ತು ಸಾರ್ವಜನಿಕರಿಗೆ ಆಗುತ್ತಿರುವ ತೊ೦ದರೆಗಳಿಗೆ ಮುಕ್ತಿ ನೀಡಬೇಕೆಂದು ಸರ್ಕಾರಕ್ಕೆ ವಿನಂತಿ ಎಂದು ಹೇಳಿದರು.

Leave a Comment

Your email address will not be published. Required fields are marked *

Translate »
Scroll to Top