ದಲಿತ ಸಮುದಾಯಕ್ಕೆ ಅವಮಾನ ಮಾಡಿದ ಸಿದ್ದರಾಮಯ್ಯ

ಬೆಂಗಳೂರು,ಜ,4 : ಬಿಜೆಪಿಯು ದಲಿತ ನಾಯಕರನ್ನು ಛೂ ಬಿಡುತ್ತಿದೆ, ಶೂದ್ರರನ್ನು ಎತ್ತಿಕಟ್ಟುತ್ತಾರೆ ಎಂದು ಹೇಳಿಕೆ ನೀಡಿರುವ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಯಾರು? ಈ ಸಿದ್ದರಾಮಯ್ಯ ಕ್ರಿಶ್ಚಿಯನ್ ಸಮುದಾಯದವರೇ, ಮುಸ್ಲಿಂ ಅಥವಾ ಶೂದ್ರ ಸಮುದಾಯಕ್ಕೆ ಸೇರಿದವರೇ ಎಂದು ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಅಧ್ಯಕ್ಷರು ಮತ್ತು ರಾಜ್ಯ ವಕ್ತಾರರು ಆದ ಛಲವಾದಿ ನಾರಾಯಣಸ್ವಾಮಿ ಅವರು ಪ್ರಶ್ನಿಸಿದ್ದಾರೆ. ನೀವೂ ಒಬ್ಬ ಶೂದ್ರರೇ ಆಗಿದ್ದೀರಿ. ಆದರೆ ಶೂದ್ರರಲ್ಲಿ ಅತಿ ಶೂದ್ರರನ್ನು ಹುಡುಕುವ ಪ್ರಯತ್ನ ಮಾಡುತ್ತಿದ್ದೀರಿ. ನಿಮ್ಮ ಪರಿಸ್ಥಿತಿಯೇ ಎಲ್ಲ ಶೂದ್ರರದೂ ಆಗಿದೆ ಎಂಬ ಅರಿವು ನಿಮಗಿಲ್ಲದಿರುವುದು ವಿಪರ್ಯಾಸ. ಬಿಜೆಪಿ ದಲಿತರನ್ನು ಛೂ ಬಿಡುತ್ತಾರೆ ಎನ್ನಲು ನಿಮಗೆ ನಾಚಿಕೆ ಆಗುತ್ತಿಲ್ಲವೆ? ನೀವು ದಲಿತರನ್ನು ಛೂ ಬಿಡುವ ನಾಯಿಗಳು ಎಂದುಕೊಂಡಿದ್ದೀರಾ? ನೀವು ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಮತ್ತು ದಲಿತರನ್ನು ಈ ರೀತಿ ಹೀಯಾಳಿಸಿ ಮಾತನಾಡುವುದನ್ನು ಮೊದಲು ತಿದ್ದಿಕೊಳ್ಳಿ ಎಂದು ಛಲವಾದಿ ನಾರಾಯಣಸ್ವಾಮಿ ಅವರು ಆಗ್ರಹಿಸಿದ್ದಾರೆ.


ಸಿದ್ದರಾಮಯ್ಯರ ಬಗ್ಗೆ ಜನರಿಗೆ ಇರುವ ಗೌರವ ಈಗ ರಾಜ್ಯಕ್ಕೇ ಗೊತ್ತಿದೆ. ನೀವೂಬ್ಬ ದಲಿತ ವಿರೋಧಿ, ನಿಮ್ಮ ಪಕ್ಷದ ದಲಿತ ನಾಯಕರನ್ನು ನೀವು ಯಾವ ರೀತಿ ಮುಗಿಸಿದ್ದೀರೆಂದು ರಾಜ್ಯದ ದಲಿತ ಸಮುದಾಯಗಳಿಗೆ ಗೊತ್ತಿದೆ. ದೇಗುಲಗಳ ಈ ದುಸ್ಥಿತಿಗೆ 60ಕ್ಕೂ ಹೆಚ್ಚು ವರ್ಷ ದೇಶವನ್ನಾಳಿದ ಕಾಂಗ್ರೆಸ್ಸಿಗರೇ ಕಾರಣ. ದಲಿತರನ್ನು ದೇಗುಲಗಳಿಗೆ ಬಿಡುತ್ತಿಲ್ಲ ಎನ್ನುವ ಕಾಂಗ್ರೆಸ್ ಮುಖಂಡರು ಮತ್ತು ನೀವು ನಿಮ್ಮ ಸುದೀರ್ಘ ಆಳ್ವಿಕೆಯಲ್ಲಿ ಮಾಡಿದ್ದಾದರೂ ಏನು? ನಿಮ್ಮ ಆಳ್ವಿಕೆಯಲ್ಲಿ ಇಂಥ ಬದಲಾವಣೆಯನ್ನು ಯಾಕೆ ತಂದಿಲ್ಲ ಎಂದು ಅವರು ಆಕ್ಷೇಪಿಸಿದ್ದಾರೆ. ಬಿಜೆಪಿ ಈಗ ಅಧಿಕಾರಕ್ಕೆ ಬಂದಿದೆ. ನಮ್ಮ ಪಕ್ಷದಲ್ಲಿ ದಲಿತ, ಬಲಿತ, ಹಿಂದೂ, ಮುಸ್ಲಿಂ, ಕ್ರೈಸ್ತ ಎಂಬ ಭೇದಭಾವ ಇಲ್ಲದೆ ನಾವು ಎಲ್ಲರನ್ನೂ ಗೌರವಿಸುತ್ತೇವೆ. ಆದರೆ, ಯಾರನ್ನೂ ಓಲೈಸುವುದಿಲ್ಲ. ಓಲೈಕೆ ಗುಣವಿರುವುದು ಕಾಂಗ್ರೆಸ್ ಪಕ್ಷಕ್ಕೆ. ಮತ ಬ್ಯಾಂಕ್ ಗಾಗಿ ನೀವು ಏನು ಬೇಕಾದರೂ ಮಾಡಲು ಹೇಸುವುದಿಲ್ಲ, ಸಂದರ್ಭ ಬಂದಾಗ ದಲಿತರನ್ನು ಓಲೈಸುತ್ತೀರಿ. ಅಧಿಕಾರಕ್ಕೆ ಬಂದ ಮೇಲೆ ತುಳಿದು ದೂರವಿಡುವ ಚಾಳಿ ನಿಮ್ಮದು ಎಂದು ಅವರು ಆಕ್ಷೇಪಿಸಿದ್ದಾರೆ.

Leave a Comment

Your email address will not be published. Required fields are marked *

Translate »
Scroll to Top