ವಿಕೆಂಡ್ ಕರ್ಫ್ಯೂ- ವ್ಯಾಪಾರಸ್ಥರ ಮೇಲೆ ಎಫೆಕ್ಟ್

ರಾಯಚೂರು, ,ಜ,9 : ಮೋದಲೇ ವ್ಯಾಪಾರವಿಲ್ಲದೇ ನಷ್ಟ ಅನುಭವಿಸುತ್ತಿರುವ ತರಕಾರಿ ವ್ಯಾಪಾರಿಗಳು ರಾಜ್ಯ ಸರಕಾರ ವಿಕೆಂಡ್ ಕರ್ಫ್ಯೂ ಹೆರಿರುವುದರಿಂದ ತರಕಾರಿ ವ್ಯಾಪಾರಸ್ಥರ ಮೇಲೆ ಎಫೆಕ್ಟ್ ನಿಂದಾಗಿ ವ್ಯಾಪಾರವಿಲ್ಲದೆ ವ್ಯಾಪಾರಿಗಳು ನಷ್ಟ ಅನುಭವಿಸುತ್ತಿದ್ದಾರೆ. ಹೌದು ಕಳೆದ ವರ್ಷ ಕರೋನ ಎಫೆಕ್ಟ್ ನಿಂದಾಗಿ ಇನ್ನು ವ್ಯಾಪಾರ ಚೇತರಿಸಿಕೊಳ್ಳುವಷ್ಟರಲ್ಲಿ ತಳಿ ಬದಲಿಸಿ ಮತ್ತೆ ರಾಜ್ಯಕ್ಕೆ ವಕ್ಕರಿಸಿರುವ ಓಮಿಕ್ರಾನ್ ಎಂಬ ವೈರಸ್ ನಿಂದಾಗಿ ರಾಜ್ಯ ಸರಕಾರ ಮತ್ತೆ ವಿಕೆಂಡ್ ಕರ್ಫ್ಯೂ ಜಾರಿ ಮಾಡಿದ್ದು, ವ್ಯಾಪಾರಿಗಳಿಗೆ ಮತ್ತು ರೈತರಿಗೆ ನಷ್ಟವಾಗಿದೆ. ಶನಿವಾರ ಮತ್ತು ಭಾನುವಾರ ವಿಕೆಂಡ್ ಕರ್ಫ್ಯೂ ಜಾರಿಮಾಡಿರುವುದರಿಂದ ಎಲ್ಲಾ ವ್ಯಾಪಾರಗಳನ್ನು ಬಂದ್ ಮಾಡಿ ತರಕಾರಿ ವ್ಯಾಪಾರ ಮತ್ತು ಹಣ್ಣಿನ ವ್ಯಾಪಾರ, ಹೂವಿನ ವ್ಯಾಪಾರ ಮತ್ತು ದಿನಸಿ ಅಂಗಡಿಗಳಿಗೆ ವ್ಯಾಪಾರ ಮಾಡಲು ಅವಕಾಶ ಕೊಟ್ಟು, ಜನರು ಹೊರ ಬಾರದಂತೆ ಸರಕಾರ ಕಟ್ಟು ನಿಟ್ಟಿನ ಆದೇಶ ಹೊರಡಿಸಿರುವುದರಿಂದ ಸಾರ್ವಜನಿಕ ರು ರಸ್ತೆಗೆ ಮತ್ತು ತರಕಾರಿ ಖರೀದಿ ಮಾಡಲು ಸಹ ಮಾರುಕಟ್ಟೆಗೆ ಬಾರದಿರುವುದರಿಂದ ವ್ಯಾಪಾರವಿಲ್ಲದೆ ನಷ್ಡ ಅನುಭವಿಸುತ್ತಿದ್ದೆವೆ ಎಂದು ವ್ಯಾಪಾರಸ್ಥರು ತಮ್ಮ ಅಳಲನ್ನು ತೋಡಿಕೊಂಡರು.


ದಿನನಿತ್ಯ ಜನಜಂಗುಳಿಯಿಂದ ತುಂಬಿ ತುಳುಕುತ್ತಿದ್ದ ಮಾರುಕಟ್ಟೆ ಇಂದು ಜನರಿಲ್ಲದೆ ಮಾರುಕಟ್ಟೆ ಬಿಕೋ ಎನ್ನುತ್ತಿತ್ತು. ವ್ಯಾಪಾರಿಗಳು ನಾಲ್ಕು ಗಂಟೆಗೆ ಎಂದು ಎಪಿಎಂಸಿಗೆ ತೆರಳಿ ತರಕಾರಿಯನ್ನು ಆಟೋದಲ್ಲಿ ತರಬೇಕಾದರೆ ಪೋಲಿಸರು ನಮಗು ಕೂಡ ಫೈನ್ ಹಾಕುತ್ತಿದ್ದಾರೆ. ಈಗಾಗಿ ಜನಸಾಮಾನ್ಯರು ಪೋಲಿಸರಿಗರ ಹೆದರಿ ಜನರುಮನೆಯಿಂದಾಚೆ ಹೊರ ಬರಲು ಎದರುತ್ತಿದ್ದಾರೆ. ಹೀಗಾಗಿ ತರಕಾರಿ, ಕಾಯಿಪಲ್ಯ ಮಾರಾಟವಾಗದೆ ಹಾಗೆ ಉಳಿದಿದೆ. ಇನ್ನು ವ್ಯಾಪಾರಿಗಳು ಖರೀದಿ ಮಾಡದೇ ಇರುವುದರಿಂದ ರೈತರ ಬಳಿ ಹಾಗೆ ಉಳಿದಿದ್ದು ನಷ್ಟ ಅನುಭವಿಸುತ್ತಿದ್ದೆವೆ. ಇಷ್ಟೆಲ್ಲ ನಷ್ಟವಾದರು ಕೂಡ ಸರಕಾರ ನಮಗೆ ನಯಾಫೈಸೆ ಕೂಡ ಪರಿಹಾರ ನೀಡಿಲ್ಲ. ಸರಕಾರದ ನಿಯಮದ ಪ್ರಕಾರ ನಾವು ವ್ಯಾಪಾರ ಮಾಡುತ್ತೆವೆ ಎಂದು ವ್ಯಾಪಾರಿಗಳು ತಮ್ಮ ಅಳಲು ವಿಜಯ ಕರ್ನಾಟಕ ದೊಂದೆಗೆ ತೊಡಿಕೊಂಡರು. ವಿಕೆಂಡ್ ಕರ್ಫ್ಯೂ ನಿಂದ ತರಕಾರಿ ವ್ಯಾಪಾರ ನಷ್ಟ.

Leave a Comment

Your email address will not be published. Required fields are marked *

Translate »
Scroll to Top