ರಾಜಗೊಂಡರ ಕಲ್ಯಾಣಕ್ಕೆ  ಮುನ್ನುಡಿ ಬರೆದಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಸಚಿವ ಬಿ.ನಾಗೇಂದ್ರ

ಬೀದರ್ : ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ಬುಡಕಟ್ಟು ಜನರು ವಾಸವಿರುವ ಬೀದರ್ ನ ರಾಜಗೊಂಡ ಕಾಲೋನಿಗೆ ಯುವ ಸಬಲೀಕರಣ ಮತ್ತು ಕ್ರೀಡೆ  ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಸಚಿವ ಬಿ.ನಾಗೇಂದ್ರ ಬೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.

 

ಸುಮಾರು ೧೫೦೦ಜನಸಖ್ಯೆ ಹೊಂದಿರುವ ರಾಜಗೊಂಡ ಕಾಲೋನಿಗೆ ಬೇಟಿ ನೀಡಿದ ಸಚಿವರು ರಾಜಗೊಂಡ ಸಮುದಾಯದ ಮುಖಂಡರ ಜೊತೆ ಕಾಲೋನಿಯನ್ನೆಲ್ಲ ಸುತ್ತಾಡಿ ಬಹುತೇಕ ಮನೆಗಳಿಗೆ ಬೇಟಿ ನೀಡಿ ಕುಟುಂಸ್ಥರ ಜೊತೆ ಮಾತನಾಡುವ ಮೂಲಕ ಸಮಸ್ಯೆಗಳನ್ನ ಅರಿತರು.

ಈ ಸಂದರ್ಭದಲ್ಲಿ ಬಹುತೇಕರು ಎರೆಡು ಮೂರು ದಶಕಗಳ ಹಿಂದೆ ಸರ್ಕಾರದ ವತಿಯಿಂದ ನಿರ್ಮಾಣ ಮಾಡಿಕೊಟ್ಟ ಮನೆಗಳು ಶಿಥಿಲಾವಸ್ಥೆ ತಲುಪಿದ್ದು ಭಯದಲ್ಲಿ ಬದುಕುತ್ತಿರುವುದಾಗಿ     ಸಚಿವರ ಗಮನಕ್ಕೆ ತಂದರಲ್ಲದೆ ಸಮಾಜದ ಬಹುತೇಕ ಮಹಿಳೆಯರು ಗಿಡಮೂಲಿಕೆ ಹಾಗೂ ಮಸಾಲೆ ಪದಾರ್ಥಗಳನ್ನ ಮಾರಾಟ ಮಾಡುವ ವ್ಯಾಪಾರ ಮಾಡುತ್ತಿದ್ದು  ವ್ಯೆವಹಾರಕ್ಕೆ ಹಣ ಹೊಂದಿಸಲಾಗದೆ ಬಡ್ಡಿಗೆ ಹಣ ತಂದು ವ್ಯಾಪಾರ ಮಾಡಿ ಸಂಕಷ್ಟಕೊಳಗಾಗಿದ್ದಾರೆ. ಹಾಗಾಗಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ವತಿಯಿಂದ ಸಹಾಯಧನ ನೀಡುವಂತೆ ಮನವಿ ಮಾಡಿದರಲ್ಲದೆ.ಸಮುದಾಯದ ಜನರ ಕಲ್ಯಾಣ ಕಾರ್ಯಕ್ರಮಗಳು ನಡೆಯುವ  ಸಮುದಾಯ ಭವನ ಮಳೆಯಿಂದ ಸೋರುತ್ತದ್ದು ದುರಸ್ತಿ ಮಾಡಿಕೊಡುವಂತೆ ಮನವಿ ಸಲ್ಲಿಸಿದರು.

ತಕ್ಷಣವೇ ಸಮಸ್ಯೆಗೆ ಸ್ಪಂದಿಸಿದ ಸಚಿವರು ಸಮುದಾಯದ ನೂರಾರು ಮಹಿಳೆಯರು, ಸಮುದಾಯದ ಮುಖಂಡರ ಸಮ್ಮುಖದಲ್ಲೆ ವಸತಿ ಸಚಿವ ಜಮೀರ್ ಅಹಮ್ಮದ್ ಖಾನ್ ಅವರಿಗೆ ವಿಡಿಯೋ ಕರೆ ಮಾಡಿ ಸಮಸ್ಯೆಯನ್ನ ಮನವರಿಕೆ ಮಾಡಿದರಲ್ಲದೆ ೬೦೦೦ ಮನೆಗಳನ್ನ ವಸತಿ ಯೋಜನೆ ಅಡಿ ನೀಡುವಂತೆ ಮಾಡಿದ ಮನವಿಗೆ ಸಚಿವರು ಒಪ್ಪಿಗೆ ನೀಡಿದರು.ನಂತರ ಮಾತನಾಡಿದ ಸಚಿವರು ನೀವು ಮನವಿ ಮಾಡಿದಂತೆ ಹೊಸ ಮನೆಗಳ ನಿರ್ಮಾಣ ಕಾರ್ಯ ಶೀಘ್ರ ಕೈಗೆತ್ತಿಕೊಳ್ಳಲಾಗುದು.  ಮಹಿಳೆಯರು ನಡೆಸುವ ವ್ಯಾಪಾರಕ್ಕಾಗಿ ಇಲಾಖೆಯ ಯೋಜನೆಯಡಿ ನೆರವು ಒದಗಿಸಲಾಗುದು ಹಾಗೆ ಸಮುದಾಯ ಭವನದ ರಿಪೇರಿ ಮಾಡಿಕೊಡುವ ಭರವಸೆ ನೀಡಿದರು.

ನೀವೇಶನಗಳಿಗೆ ಸಂಬಂಧಪಟ್ಟ ದಾಖನೆಗಳನ್ನ ಸಿದ್ದ ಮಾಡಿಟ್ಟುಕೊಳ್ಳಿ ಬೀದರ್ ನ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ.ಶಾಸಕ ರಹೀಂ ಖಾನ್ ಅವರ ಜೊತೆ ಮಾತನಾಡಿ ದಿನಾಂಕ ನಿಗಧಿ ಮಾಡಿ ಕಾರ್ಯಾರಂಭ ಮಾಡುವುದಾಗಿ ತಿಳಿಸಿದರು.

 

ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯರಾದ ಅರವಿಂದ ಕುಮಾರ್ ಅರಳಿ.ಚಂದ್ರಶೇಖರ್ ಪಾಟೀಲ್ .ರಾಜ್ಯ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಯ ನಿರ್ದೇಶಕರಾದ ಬಿ.ಕಲ್ಲೇಶ್.ವಾಲ್ಮೀಕಿ ಮಹರ್ಷಿ ಅಭಿವೃದ್ಧಿ ನಿಗಮದ ನಿರ್ದೆಶಕ ಪದ್ಮನಾಭ.ರಾಜಗೊಂಡ ಸಮುದಾಯದ ಮುಖಂಡ ಶ್ಯಾಮ್ ಹಾಜರಿದ್ದರು.

Facebook
Twitter
LinkedIn
WhatsApp
Telegram
Email

Leave a Comment

Your email address will not be published. Required fields are marked *

Translate »
Scroll to Top