ಸುರಕ್ಷಾ ಕಿಟ್ ವಿತರಣೆ ಕಾರ್ಯಕ್ರಮ

ಕೊಪ್ಪಳ : ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಇತರೆ ಕಾರ್ಮಿಕ ಒಕ್ಕೂಟ (ರಿ)ಕೊಪ್ಪಳ ಜಿಲ್ಲಾ ಕೊಪ್ಪಳ ಜಿಲ್ಲಾ ಅಧ್ಯಕ್ಷರಾದ ವಿರುಪಾಕ್ಷಪ್ಪ ಎಮ್ ಕಮ್ಮಾರ ಇವರ ಮಾರ್ಗದರ್ಶನದಲ್ಲಿ ಹಮ್ಮಿಕೊಳ್ಳಲಾದ ಸುರಕ್ಷಾ ಕಿಟ್ ವಿತರಣೆ ಕಾರ್ಯಕ್ರಮವನ್ನು ಯಲಬುರ್ಗಾ ತಾಲ್ಲೂಕಿನ ಮಾಟರಂಗಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಯಿತು .

ಈ ಕಾರ್ಯಕ್ರಮದಲ್ಲಿ ಗ್ರಾಮದ ಸಮಸ್ತ ಗ್ರಾಮಸ್ಥರು ಸಮ್ಮುಖದಲ್ಲಿ ಅರ್ಹ ಫಲಾನುಭವಿಗಳಿಗೆ ಸುರಕ್ಷ ಕಿಟ್ ವಿತರಿಸಲಾಯಿತು . ಯಲಬುರ್ಗಾ ತಾಲ್ಲೂಕು ಹೊಬಳಿ ಅಧ್ಯಕ್ಷರಾದ ಸಂತೋಷ ಆದಯ್ಯ ತೋಟದ ಗ್ರಾಮ್ ಪಂಚಾಯತ್ ಸದಸ್ಯರಾದ ಬಾಲಪ್ಪ ಹರಿಜನ ಊರಿನ ಗ್ರಾಮಸ್ಥರಾದ ರಾಮನಗೌಡ ಭಾವಿಕಟ್ಟಿ ಶರಣಯ್ಯ ತೋಟದ ಲಕ್ಷ್ಮಮಪ್ಪ ಯಾಪಲದಿನ್ನಿ ಬಸವರಾಜ ಪೂಜಾರ ಮಂಜುನಾಥ ಮ್ಯಾಗೇರಿ ಉಪಸ್ಥಿತರಿದ್ದರು. ಇದೆ ಸಂದರ್ಭದಲ್ಲಿ ನೂತನ ಯಲಬುರ್ಗಾ ತಾಲ್ಲೂಕ ಹೊಬಳಿ ಅಧ್ಯಕ್ಷರಾದ ಸಂತೋಷ ತೋಟದ ಇವರಿಗೆ ಗ್ರಾಮದ ಹಿರಿಯರಾದ ವೀರಯ್ಯ ಪೋಲಿಸ್ ಪಾಟಿಲ್ ಇವರಿಂದ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಗ್ರಾಮದ ಗುರು ಹಿರಿಯರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

Translate »
Scroll to Top