ರುಪೇ ಪ್ರೈಮ್ ವಾಲಿಬಾಲ್ ಲೀಗ್ : ಮುಂಬೈ ಮೆಟೆಯೋರ್ಸ್ ವಿರುದ್ಧ ಪರಾಭವಗೊಂಡ ಬೆಂಗಳೂರು ಟ್ರಾಪಿಡೋಸ್

ಚೆನ್ನೈ : ಚೆನ್ನೈನ ಜವಾಹರ್ ಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ರುಪೇ ಪ್ರೈಮ್ ವಾಲಿಬಾಲ್ ಲೀಗ್ ನಲ್ಲಿಂದು ನಡೆದ ರೋಚಕ ಹಣಾಹಣಿಯಲ್ಲಿ ಮುಂಬೈ ಮೆಟೆಯೋರ್ಸ್ ವಿರುದ್ಧ ಬೆಂಗಳೂರು ಟ್ರಾಪಿಡೋಸ್ 3-5 ಸೆಟ್ ಗಳ ಅಂತರದಲ್ಲಿ ಪರಾಭವಗೊಂಡಿತು. 

 

ಕಿಕ್ಕಿರಿದು ತುಂಬಿದ್ದ ಕ್ರೀಡಾಂಗಣದಲ್ಲಿ ವಾಲಿಬಾಲ್ ಪ್ರೇಮಿಗಳ ಹರ್ಷೋದ್ಘಾರದ ನಡುವೆ ಪಂದ್ಯ ಭಾರೀ ಪೈಪೋಟಿಯಿಂದ ಕೂಡಿತ್ತು. ಉಸಿರು ಬಿಗಿ ಹಿಡಿದು ಯಾರಿಗೆ ವಿಜಯದ ಮಾಲೆ ಒಲಿಯಲಿದ್ದಾಳೆ ಎನ್ನುವ ಕುತೂಹಲ ಮನೆ ಮಾಡಿತ್ತು. 

ಅಂತಿಮವಾಗಿ 15-8, 12-15, 10-15, 15 – 11 ಹಾಗೂ 15-9 ರ  ಅಂತರದಲ್ಲಿ ಮುಂಬೈ ಮೆಟೆಯೋರ್ಸ್ ಗೆಲುವು ದಾಖಲಿಸಿತು.

 

ಮೊದಲ ಹಾಗೂ ನಾಲ್ಕನೇ ಸೆಟ್ ನಲ್ಲಿ ಗೆಲುವು ಸಾಧಿಸಿದ ಬೆಂಗಳೂರು ಟ್ರಾಪಿಡೋಸ್ ನಿರ್ಣಾಯಕ ಫೈನಲ್ ಸೆಟ್ ನಲ್ಲಿ ಬಾಂಬೆ ತಂಡದ ಆಕ್ರಮಣಕಾರಿ ಆಟ, ಆಕರ್ಷಕ ಸ್ಮಾಷ್ ಹಾಗೂ ವ್ಯವಸ್ಥಿತವಾಗಿ ಬ್ಲಾಕ್ ಮಾಡುವ ತಂತ್ರಗಳ ಮೂಲಕ ಮುಂಬೈ ಆಟಗಾರರು ಬೆಂಗಳೂರು ಟ್ರಾಪಿಡೋಸ್ ಆಟಗಾರರನ್ನು  ಕಟ್ಟಿಹಾಕಿದರು.

Facebook
Twitter
LinkedIn
WhatsApp
Email
Print
Telegram

Leave a Comment

Your email address will not be published. Required fields are marked *

Translate »
Scroll to Top