ರಾಜ್ಯದ ಬರ ಪರಿಸ್ಥಿತಿ ಬಗ್ಗೆ ಸಭೆ ನಡೆಸಲು ನೀತಿ ಸಂಹಿತೆ ಸಡಿಲಗೊಳಿಸಿ: EC ಗೆ ಸಚಿವ ಪ್ರಿಯಾಂಕ್ ಖರ್ಗೆ ಒತ್ತಾಯ

ಬೆಂಗಳೂರು: ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಯ ಮತದಾನ ಪ್ರಕ್ರಿಯೆ ಮುಗಿದಿದ್ದರೂ ಜೂನ್ ೪ರವರೆಗೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಇದರಿಂದ ರ‍್ಕಾರದ ಆಡಳಿತ ಕರ‍್ಯಗಳಿಗೆ ತೊಡಕಾಗುತ್ತಿದೆ. ರಾಜ್ಯದ ಬರ ಪರಿಸ್ಥಿತಿ ಕುರಿತು ಸಭೆಗಳನ್ನು ನಡೆಸಲು ಚುನಾವಣಾ ನೀತಿ ಸಂಹಿತೆಯನ್ನು ಸಡಿಲಗೊಳಿಸಬೇಕೆಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ರ‍್ಗೆ ಒತ್ತಾಯಿಸಿದ್ದಾರೆ.

ಈ ಕುರಿತು ಕರ್ನಾಟಕ ಮುಖ್ಯ ಚುನಾವಣಾ ಆಯುಕ್ತ ಮನೋಜ್ ಕುಮಾರ್ ಮೀನಾ ಅವರಿಗೆ ಪತ್ರ ಬರೆದಿದ್ದು, ರ‍್ನಾಟಕದ 236 ತಾಲ್ಲೂಕುಗಳಲ್ಲಿ 233 ತಾಲ್ಲೂಕುಗಳನ್ನು ಬರಗಾಲ ಪೀಡಿತ ಎಂದು ಘೋಷಿಸಲಾಗಿದೆ. ಹವಾಮಾನ ಇಲಾಖೆ ವರದಿ ಪ್ರಕಾರ ಈ ಬಾರಿ ಮುಂಗಾರು ಮಳೆ ವಿಳಂಬವಾಗುವ ಸಾಧ್ಯತೆಯಿದೆ. ಹಲವು ತಾಲ್ಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯುಂಟಾಗುತ್ತಿದೆ. ಮುಂದಿನ ಎರಡು ತಿಂಗಳು ಶುದ್ಧ ಕುಡಿಯುವ ನೀರನ್ನು ನಾಗರಿಕರಿಗೆ ಮತ್ತು ಜಾನುವಾರುಗಳಿಗೆ ನೀರು ಮತ್ತು ಮೇವು ಒದಗಿಸುವ ಅನಿವರ‍್ಯತೆಯಿದೆ. ಈ ಬಗ್ಗೆ ರ‍್ಕಾರ ಕರ‍್ಯಪ್ರವೃತ್ತವಾಗಲು ಚುನಾವಣಾ ನೀತಿ ಸಂಹಿತೆಯನ್ನು ರಾಜ್ಯದಲ್ಲಿ ಸಡಿಲಗೊಳಿಸಿ ಎಂದು ಕೇಳಿಕೊಂಡಿದ್ದಾರೆ.

ರಾಜ್ಯದ ಬರಗಾಲ ಮತ್ತು ಕುಡಿಯುವ ನೀರು ಪೂರೈಕೆಗೆ ಸಂಬಂಧಪಟ್ಟಂತೆ ಸಚಿವರುಗಳು ಸಭೆ ನಡೆಸಲು ಚುನಾವಣಾ ಆಯೋಗ ಅನುಮತಿ ನೀಡಬೇಕು. ಕೇವಲ ಸಭೆ ನಡೆಸಲು ಮಾತ್ರವಲ್ಲದೆ ಈ ಬಗ್ಗೆ ರ‍್ಕಾರ ನರ‍್ಧಾರ ಕೈಗೊಳ್ಳಲು ಸಹ ಮಾದರಿ ನೀತಿ ಸಂಹಿತೆಯನ್ನು ಸಡಿಲಗೊಳಿಸಬೇಕೆಂದು ಪತ್ರದಲ್ಲಿ ಸಚಿವ ಪ್ರಿಯಾಂಕ್ ರ‍್ಗೆ ಕೇಳಿಕೊಂಡಿದ್ದಾರೆ.

 

 270 ಗ್ರಾಮಗಳಲ್ಲಿ ನೀರನ್ನು ಟ್ಯಾಂಕರ್ ಮೂಲಕ ಪೂರೈಸಲಾಗುತ್ತದೆ. ಖಾಸಗಿ ಬೋರ್ ವೆಲ್ ಗಳನ್ನು 594 ಗ್ರಾಮಗಳಲ್ಲಿ ಬಳಸಲಾಗುತ್ತದೆ. ಕಳೆದ  ಮಾರ್ಚ್ ತಿಂಗಳ ಪರಿಸ್ಥಿತಿಯೇ ಈಗಲೂ ರಾಜ್ಯದಲ್ಲಿದೆ ಎಂದರು.

 

ನಗರ ಪ್ರದೇಶಗಳಲ್ಲಿ 150 ವಾರ್ಡ್ಗಳು ಟ್ಯಾಂಕರ್ ಗಳ ಮೂಲಕ ಮತ್ತು 29 ವಾರ್ಡ್ಗಳು ಖಾಸಗಿ ಬೋರ್ ವೆಲ್ ಗಳ ಮೂಲಕ ನೀರು ಪಡೆಯುತ್ತಿವೆ. ಸಮಸ್ಯೆ ಕಡಿಮೆಯಾಗದಿದ್ದರೂ ಕೂಡ ನಿಯಂತ್ರಣದಲ್ಲಿದೆ ಎಂದು ಕಳೆದ ಗುರುವಾರ ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದ್ದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top