ಕೆಂಪು ರಕ್ತ ನಾಟಕದ ಕಾರ್ಯಕ್ರಮ

ಮರಿಯಮ್ಮನಹಳ್ಳಿ : ನಾಟಕ ಎಂದರೆ ಬರಿ ಕಲೆಯಲ್ಲ. ಅದು ಜೀವನದ ಪಾಠ ಹೇಳುತ್ತದೆ  ಎಂದು ಪಟ್ಟಣ ಪಂಚಾಯತಿ ಸದಸ್ಯೆ ಶಂಕ್ರಮ್ಮ ಆನಂದಪ್ಪ ಹೇಳಿದರು. ಅವರು ಪಟ್ಟಣದ ಮಧುಗಮ್ಮ ದೇವಸ್ಥಾನದ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಳ್ಳಾರಿ ಇವರ ಸಂಯುಕ್ತಾಶ್ರಯದಲ್ಲಿ ಪರಿಶಿಷ್ಟ ಜಾತಿ  ಕಾರ್ಯಕ್ರಮದ ಅಡಿಯಲ್ಲಿ, ಕೆಂಪು ರಕ್ತ ನಾಟಕದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ರಂಗಭೂಮಿಯು ನಿಜವಾದ ಕಲಾವಿದರನ್ನು ತಯಾರಿಸುತ್ತದೆ.

ರಂಗಭೂಮಿಯಿಂದ ತಯಾರಾಗಿ ಕಿರುತೆರೆ ಸಿನಿಮಾಗಳಲ್ಲಿ ನಟಿಸುತ್ತಿರುವ ಕಲಾವಿದರ ಕಲೆಗೆ ಹೆಚ್ಚಿನ ಮನ್ನಣೆ ದೊರೆತಿದೆ. ಅದೇ ಕಿರುತೆರೆ, ಸಿನಿಮಾಗಳಲ್ಲಿ ನಟಿಸುವ ಕಲಾವಿದರು ಕಲೆ ಕರಗತ ಮಾಡಿಕೊಳ್ಳಲು ರಂಗಭೂಮಿಗೆ ಹೆಜ್ಜೆ,ಇಡುತ್ತಿದ್ದಾರೆಂದರು. ಈ ಸಂಧರ್ಭದಲ್ಲಿ ಜಾನಪದ ರಂಗ ವೈಭವದ ಎಲ್ ಗಂಗಾಧರ್ ತಂಡದವರಿಂದ ಕೆಂಪುರಕ್ತ ನಾಟಕ  ಪ್ರದರ್ಶನಗೊಂಡಿತು. ರಂಗಕರ್ಮಿ ಬಿ.ಎಂ.ಎಸ್ ಪ್ರಭು, ಮಂಜು, ಉದಯಕುಮಾರ್, ರಂಗದಮೇಲೆ ಎಂ ಬಿಎಂ ಯೋಗೇಶ್ ಮಜಾ ಭಾರತ ಮೆಂಟರ್ ಎಂ ಮಾಂತೇಶ್, ಹೇಮಂತ್ .ಡಿ,ಎಲ್ ,ಯೋಗಾನಂದ, ಎಲ್.ಶಾರದಾ ,ಎಲ್ ಬಸವರಾಜ್ ಎಲ್.ರೂಪ, ಎಲ್. ಗಂಗಾಧರ್, ಹನುಮಯ್ಯ ವೆಂಕಟಾಪುರ, ಎಲ್.ಪ್ರಶಾಂತ್ ಕುಮಾರ್, ರಂಗಸಂಸ್ಕೃತಿ ಕಾರ್ಯದರ್ಶಿ ಕಾಳಿ ಮಂಜುನಾಥ ಇತರರಿದ್ದರು.

Leave a Comment

Your email address will not be published. Required fields are marked *

Translate »
Scroll to Top