ಸಕಲ ವೃತ್ತಿ ಕಲಾರಂಗ -ಆಲ್ ಇಂಡಿಯಾ ಕಲಾರಂಗ (ರಿ.) ಕಲಾವಿದರ ಸಭೆ

ಶಿಡ್ಲಘಟ್ಟ:ಕಲಾವಿದರ ಸಂಕಷ್ಟಕ್ಕೆ ರಾಜ್ಯ ಸರ್ಕಾರ ಮಿಡಿಯದೆ ಇರುವುದು ದುರಂತವಾಗಿದೆ.ಮುಂದೆ ಕಲಾವಿದರ ಅಭಿವೃದ್ಧಿಗೆ ಸಹಕರಿಸದೆ ಇದ್ದಲ್ಲಿ ನಾಡಿನ ಕಲೆ, ಸಂಸ್ಕೃತಿ ಮರೆಯಾಗಲಿದೆ‘ ಎಂದು ಸಕಲ ವೃತ್ತಿ ಕಲಾರಂಗ -ಆಲ್ ಇಂಡಿಯಾ ಕಲಾರಂಗ (ರಿ.) ಕನಾಟಕ ರಾಜ್ಯ ನಿರವಾಹಕ ಎಚ್ಎನ್ ಶ್ರೀನಾಥ್ ಹೇಳಿದರು. ನಗರದ ಮುನೇಶ್ವರ ದೇವಾಲಯದಲ್ಲಿ ಏರ್ಪಡಿಸಿದ್ದ ಸಕಲ ವೃತ್ತಿ ಕಲಾರಂಗ -ಆಲ್ ಇಂಡಿಯಾ ಕಲಾರಂಗ (ರಿ.) ಕಲಾವಿದರ ಸಭೆಯಲ್ಲಿ ಅವರು ಮಾತನಾಡಿದರು ಕಲಾವಿದರ ಸಮಸ್ಯೆಗಳನ್ನು ಚರ್ಚಿಸಲು ಈ ಸಂಘಟನೆ ಸ್ಥಾಪಿಸಲಾಗಿದೆ ವಿವಿಧ ಸಮುದಾಯಗಳ ಕಲಾವಿದರನ್ನು ಒಳಗೊಂಡಿದೆ. ತಾಲ್ಲೂಕಿನ ಕಲಾವಿದರು ಎಲ್ಲರೂ ಒಂದೇ.ಯಾರಾದರೂ ಇಲ್ಲಿ ಕಲಾವಿದರ ಸಮಸ್ಯೆಗಳನ್ನು ಚರ್ಚಿಸಬಹುದು ಎಂದರು.

ಇಂದಿನ ಸಾಂಸ್ಕೃತಿ ಜಗತ್ತಿನಲ್ಲಿ ಹಲವಾರು ಏಳು ಬೀಳುಗಳನ್ನು ಅನುಭವಿಸಿ ಅವಮಾನ ಅಪಮಾನ ಹಾಗೂ ಸನ್ಮಾನ ಈ ಎಲ್ಲಾ ನೋವುಗಳನ್ನು ಉಂಡು ಮತ್ತೆ ಸಾಂಸ್ಕೃತಿಕ ಪರಂಪರೆಯ ಹಗಲಿರುಳು ಶ್ರಮಿಸುತ್ತಿರುವ ಮೂಲ ಸಾಂಸ್ಕೃತಿಕ ಕಲಾವಿದರ ಬದುಕು ಇಂದು ಡೋಲಾಯಮಾನ ಸ್ಥಿತಿಯಲ್ಲಿದೆ. ಸರ್ಕಾರ ಮತ್ತು ರಾಜಕೀಯ ವ್ಯಕ್ತಿಗಳು ತಮ್ಮ ತಮ್ಮ ಕಾರ್ಯಕ್ರಮಗಳು ಮತ್ತು ಯೋಜನೆಗಳು ಯಶಸ್ವಿಯಾಗಲು ಮಾತ್ರ ಕಲಾವಿದರು ಬೇಕು ಅವರಿಗೆ ಸಾಮಾಜಿಕ ಭದ್ರತೆ ನೀಡುವಲ್ಲಿ ನಮ್ಮ ಜನಪ್ರತಿನಿಧಿಗಳು ಮತ್ತೆ ಸರ್ಕಾರ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ ಎಲ್ಲಾ ಕಲಾವಿದರು ಒಗ್ಗೂಡಿ ನಮ್ಮ ಅಲ್ ಇಂಡಿಯಾ ಕಲಾರಂಗ ಎಲ್ಲಾ ಕಲಾ ರೂಪಗಳನ್ನು ಗುರುತಿಸಿ ಕಲಾವಿದರಿಗೆ ಸರ್ಕಾರದಿಂದ ಗುರುತಿನ ಚೀಟಿ ಕೊಡಿಸಲು ಪ್ರಯತ್ನಿಸುತ್ತಿದೆ. ಅದೇ ರೀತಿಯಾಗಿ ಸರ್ಕಾರದಿಂದ ಬರುವ ಕಲಾವಿದರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಲು ಆಲ್ ಇಂಡಿಯಾ ಕಲಾರಂಗ ಪ್ರಯತ್ನಿಸುತ್ತಿದೆ ಎಂದು ಹೇಳಿದರು.

Leave a Comment

Your email address will not be published. Required fields are marked *

Translate »
Scroll to Top