ರಾಮೋಜಿ ಫಿಲ್ಮ್​ ಸಿಟಿ ಸ್ಥಾಪಕ ರಾಮೋಜಿ ರಾವ್ ನಿಧನ; ಸಂತಾಪ ಕೋರಿದ ಚಿತ್ರರಂಗ

ರಾಮೋಜಿ ಫಿಲ್ಮ್ ಸಿಟಿ ‍ಸಿದ್ದ ರಾಮೋಜಿ ರಾವ್ ಅವರು ಇಂದು (ಜೂನ್ ೮) ನಿಧನ ಹೊಂದಿದ್ದಾರೆ. ಅವರಿಗೆ ೮೭ ರ‍್ಷ ವಯಸ್ಸಾಗಿತ್ತು. ಹಲವು ರ‍್ಷಗಳಿಂದ ಅವರು ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಇದಕ್ಕಾಗಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೂಡ ಪಡೆಯುತ್ತಿದ್ದರು. ಅವರ ನಿಧನ ವರ‍್ತೆ ಅನೇಕರಿಗೆ ದುಃಖ ತಂದಿದೆ. ಟಾಲಿವುಡ್ನ ಅನೇಕ ಸೆಲೆಬ್ರಿಟಿಗಳು ಇವರ ಸಾವಿಗೆ ಸಂತಾಪ ಸೂಚಿಸಿದ್ದಾರೆ.

ರಾಮೋಜಿ ಫಿಲ್ಮ್ ಸಿಟಿಯಲ್ಲಿ ‘ಬಾಹುಬಲಿ’ ಸೇರಿ ಅನೇಕ ಸೂಪರ್ ಹಿಟ್ ಚಿತ್ರಗಳ ಶೂಟಿಂಗ್ ಆಗಿದೆ. ೧೯೯೬ರಲ್ಲಿ ಇದನ್ನು ರಾಮೋಜಿ ರಾವ್ ಸ್ಥಾಪಿಸಿದರು. ಹೈದರಾಬಾದ್ನಲ್ಲಿರುವ ಈ ಪ್ರದೇಶ ೧,೬೬೬ ಎಕರೆ ಪ್ರದೇಶದಲ್ಲಿ ಇದೆ. ವಿಶ್ವದಲ್ಲೇ ಇದು ಅತಿ ದೊಡ್ಡ ಸ್ಟುಡಿಯೋ ಎನ್ನುವ ಖ್ಯಾತಿ ಇದೆ. ಇದು ವಿಶ್ವ ದಾಖಲೆ ಪಟ್ಟಿಯಲ್ಲೂ ಇದೆ. ರಾಮೋಜಿ ರಾವ್ ಅವರು ಚಿತ್ರರಂಗಕ್ಕೆ ನೀಡಿದ ಕೊಡುಗೆ ಆಧರಿಸಿ ಅವರಿಗೆ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ರಾಮೋಜಿ ರಾವ್ ಅವರು ಜನಿಸಿದ್ದು ೧೯೩೬ರಲ್ಲಿ. ೧೯೮೪ರಲ್ಲಿ ಅವರು ಸಿನಿಮಾ ನರ‍್ಮಾಣಕ್ಕೆ ಇಳಿದರು. ೨೦೧೫ರವರೆಗೂ ಅವರು ಸಿನಿಮಾಗಳನ್ನು ನರ‍್ಮಿಸುತ್ತಿದ್ದರು. ಆ ಬಳಿಕ ಅವರು ನರ‍್ಮಾಣದಿಂದ ದೂರವೇ ಇದ್ದರು. ರಾಮೋಜಿ ಫಿಲ್ಮ್ ಸಿಟಿಯಲ್ಲಿ ಕನ್ನಡದ ಹಲವು ಸಿನಿಮಾಗೆ ಸೆಟ್ ಹಾಕಲಾಗಿತ್ತು.

ತೆಲುಗಿನ ‘ಬಾಹುಬಲಿ’, ಬೆಂಗಾಲ್ ಟೈಗರ್, ಗಬ್ಬರ್ ಸಿಂಗ್, ಹನುಮಾನ್, ಕಲ್ಕಿ ೨೮೯೮ ಎಡಿ, ಪುಷ್ಪ, ಆರ್ಆರ್ಆರ್, ಹಿಂದಿಯ ಚೆನ್ನೈ ಎಕ್ಸ್ಪ್ರೆಸ್, ಕನ್ನಡದ ಜಾಗ್ವಾರ್, ಕೆಜಿಎಫ್ ೨, ರಾಜಕುಮಾರ, ತಮಿಳಿನ ಲಿಯೋ ಸೇರಿ ಅನೇಕ ಸಿನಿಮಾಗಳು ಇಲ್ಲಿ ಶೂಟ್ ಆಗಿವೆ.

 

ರಾಮೋಜಿ ರಾವ್ ನಿಧನಕ್ಕೆ ಅನೇಕರು ಸಂತಾಪ ಸೂಚಿಸಿದ್ದಾರೆ. ತೆಲಂಗಾಣ ಬಿಜಿಪಿ ಮುಖ್ಯಸ್ಥ ಹಾಗೂ ಪರ‍್ಟಿ ಸಂಸದ ಜಿ ಕೃಷ್ಣನ್ ರೆಡ್ಡಿ ಅವರು ಸಂತಾಪ ಸೂಚಿಸಿದ್ದಾರೆ. ಇದರ ಜೊತೆಗೆ ಅನೇಕ ಸೆಲೆಬ್ರಿಟಿಗಳು ಈ ಬಗ್ಗೆ ಸಂತಾಪ ಕೋರಿದ್ದಾರೆ.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top