ರಾಮೇಶ್ವರ  ಕೆಫೆ ಸ್ಪೋಟ ಪ್ರಕರಣ: ಎನ್ ಐಎ  ತನಿಖಾ ತಂಡ ಇಬ್ಬರನ್ನು  ಈ ಬಂಧನ – ಈ ಬಂಧನದಿಂದ ಜನರು ನೆಮ್ಮದಿಯಿಂದ ನಿಟ್ಟಿಸಿರು ಬಿಟ್ಟಿದ್ದಾರೆ ಎಂದು ಪ್ರತಿಪಕ್ಷದ ನಾಯಕ ಆರ್. ಅಶೋಕ್

ಬೆಂಗಳೂರು :   ರಾಮೇಶ್ವರ  ಕೆಫೆ ಸ್ಪೋಟ ಪ್ರಕರಣ ಬೆಂಗಳೂರೇ ತಲ್ಲಣ ಮೂಡಿಸುವ ಘಟನೆ. ಎನ್ ಐಎ  ತನಿಖಾ ತಂಡ ಇಬ್ಬರನ್ನು  ಬಂಧಿಸಿ, ಭಯೋತ್ಪಾದನೆ ಚಟುವಟಿಕೆ ತಡೆಯುವಲ್ಲಿ ಮಹತ್ವದ ಸಾಧನೆ ಮಾಡಿದೆ.  ಈ ಬಂಧನದಿಂದ ಜನರು ನೆಮ್ಮದಿಯಿಂದ ನಿಟ್ಟಿಸಿರು ಬಿಟ್ಟಿದ್ದಾರೆ ಎಂದು ಪ್ರತಿಪಕ್ಷದ ನಾಯಕ ಆರ್. ಅಶೋಕ್ ಹೇಳಿದ್ದಾರೆ.

 

ಮಲ್ಲೇಶ್ವರದ  ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅದಕ್ಕಾಗಿ ಎನ್ಐಎಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ರಾಮೇಶ್ವರ ಕೆಫೆ ಘಟನೆಯನ್ನು ತಿರುಚುವ ಕೆಲಸವನ್ನು ಡಿಸಿಎಂ ಡಿ.ಕೆ.ಶಿವಕುಮಾರ್  ಮಾಡಿದ್ರು. ಅಲ್ಪಸಂಖ್ಯಾತರಿಗೆ ನೋವು ಆಗಬಾರದು ಎಂಬ ಮನಸ್ಥಿತಿಯಲ್ಲಿ ಇರುವವರು ಕಾಂಗ್ರೆಸ್ ನವರು. ಸರ್ಕಾರದಲ್ಲಿರುವ ಮಂತ್ರಿಗಳು ತನಿಖೆ ದಾರಿ ತಪ್ಪಿಸುವ ರೀತಿ ಹೇಳಿಕೆಗಳನ್ನು ನೀಡಿದ್ದರು.

ಬೆಂಗಳೂರಿನ ಉಸ್ತುವಾರಿ ಸಚಿವರು ಡಿ.ಕೆ. ಶಿವಕುಮಾರ್ ಅವ್ರು, ಕುಕ್ಕರ್ ಬ್ಲಾಸ್ಟ್ ಆದಾಗ ಅಲ್ಲಿ ಭೇಟಿ ಕೊಟ್ಡು ನಮ್ಮ ಬ್ರದರ್ಸ್ ಅಂದ್ರು. ಹೀಗೆ ಯಾವಾಗಲೂ ಕಾಂಗ್ರೆಸ್ ತನಿಖೆ ಮುಚ್ಚಿ ಹಾಕುವ ಕೆಲಸವನ್ನೇ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ನ ಆತ್ಮೀಯ ಸಹೋದರಿ ಮಮತಾ ಬ್ಯಾನರ್ಜಿಯವರ ರಾಜ್ಯದಲ್ಲಿ ಆರೋಪಿಗಳ ಸಿಕ್ಕಿದ್ದಾರೆ. ಇಲ್ಲಿ ಬ್ರದರ್ಸ್ ಆಯ್ತ, ಅಲ್ಲಿ ಸಿಸ್ಟರ್ ಊರಲ್ಲಿ ಉಗ್ರರು ಸಿಕ್ಕಿದ್ದಾರೆ. ಅವರು ಬೇರೆ ಬೇರೆ ರಾಜ್ಯಗಳಿಗೆ ಹೋಗಬಹುದಿತ್ತು. ಆದರೆ ಅಲ್ಲಿ ತೊಂದರೆ ಆಗಲ್ಲ ಅಂತಾ ಅಲ್ಲಿ ಹೋಗಿ ನೆಲೆಸಿದ್ರು. ಎನ್ಐಎ ನವರು ಅಲ್ಲಿ ಹೋದ ಮೇಲೆ ಅಲ್ಲಿನ ಪೊಲೀಸರು ಜೊತೆಗೆ ಹೋಗಿದ್ದಾರೆ. ಕಾಮನ್‌ ಸೆನ್ಸ್ ಇಲ್ಲದೇ ಯಾವುದೇ ಮಂತ್ರಿ ಗಳು ಮಾತನಾಡಬಾರದು ಎಂದು ರಾಜ್ಯ ಕಾಂಗ್ರೆಸ್ ನಾಯಕರಿಗೆ ಟಂಗ್ ನೀಡಿದರು.

ವಿಧಾನಸೌಧಧಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದರು.

ಅವರನ್ನು ಬಂಧಿಸಲು ಒಂದು ವಾರ ತೆಗೆದುಕೊಂಡರು. ಕಾಂಗ್ರೆಸ್ ನಾಯಕರು  ವಿಧಾನಸೌಧಧಲ್ಲಿ ಕೂಗೇ ಇಲ್ಲ ಅಂದ್ರು. ಸಚಿವ ಪ್ರಿಯಾಂಕಾ ಖರ್ಗೆ ನಮ್ಮನ್ನೇ ಕಾಮಾಲೆ ಕಣ್ಷು ಅಂದ್ರು. ಬಿಜೆಪಿ ಯವರದ್ದೇ ಎಫ್ಎಸ್ ಎಲ್ ರಿಪೋರ್ಟ್ ಅಂದ್ರು. ಈಗ  ಪೊಲೀಸ್ ರಿಪೋರ್ಟ್ ನಲ್ಲಿ ನಿಜ‌ವೆಂದು ಗೊತ್ತಾಯಿತ್ತಲ್ಲ. ಈಗ  ಯಾರು ಕಾಮಾಲೆ ಕಣ್ಣಿನವರು? ಎಂದು ಪ್ರಿಯಾಂಕ್ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದರು.

ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಪ್ರಕರಣದಲ್ಲಿ ಸಂಪತ್ ರಾಜ್ ಜೈಲಿಗೆ ಹೋಗಿ ಬೇಲ್ ಮೇಲೆ ಇದ್ದಾರೆ. ದಲಿತ ಶಾಸಕನ ಮನೆಗೆ ಬೆಂಕಿ ಹಾಕಿದ್ದವನಿಗೆ ಬೋರ್ಡ್ ಚೇರ್ಮನ್ ಹುದ್ದೆ ನೀಡಲಾಗಿದೆ ಎಂದು ಕಿಡಿಕಾರಿದರು.

ವ್ಯೆಯಕ್ತಿಕ ನಿಂದನೆ ಅಪರಾಧ : ಕಾಂಗ್ರೆಸ್ ನಿಂದ ಪ್ರಧಾನಿ ನರೇಂದ್ರ ಮೋದಿಯವರನ್ನು ಹಿಟ್ಲರ್ ಎಂದು ಕರೆದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅಶೋಕ್, ಚುನಾವಣಾ ಸಂದರ್ಭದಲ್ಲಿ ವ್ಯೆಯಕ್ತಿಕ ನಿಂದನೆ ಅಪರಾಧ.  ಅದರಲ್ಲೂ ಹಿಟ್ಲರ್ ಹೆಸರೇಳಿ  ಬಿಂಬಿಸುವುದು ಅಪರಾಧ. ಮೋದಿ ಅವರನ್ನು ಹಿಟ್ಲರ್ ಅನ್ನುವುದಕ್ಕೆ  ಏನು ನೈತಿಕತೆ ಇದೆ. ಈ ದೇಶಕ್ಕೆ ರಿಯಲ್ ಹಿಟ್ಲರ್ ಅಂದರೆ ಅದು ಕಾಂಗ್ರೆಸ್.

ನಾವು ಇವರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಕೊಡುತ್ತೇವೆ ಎಂದು ಹೇಳಿದರು.

ಪ್ತಧಾನಿ ನರೇಂದ್ರ ಮೋದಿ ಅವರು ಬಂದ ಮೇಲೆ ದೇಶದಲ್ಲಿ ಭಯೋತ್ಪಾದನೆ ಕಡಿಮೆ ಆಗಿದೆ. ಕಾಂಗ್ರೆಸ್ ಇದ್ದಾಗ ನಿತ್ಯ ಬಾಂಬ್ ಬ್ಲಾಸ್ಟ್ ಆಗುತಿತ್ತು. ರಿಯಲ್ ಹೀರೋ ನರೇಂದ್ರ ಮೋದಿಯವರು. ಅವರನ್ನು ಹಿಟ್ಲರ್ ಅಂದಿದ್ದನ್ನು ನಾನು ಖಂಡಿಸುತ್ತೇನೆ ಎಂದರು.

ಬಿಜೆಪಿಯವರು ಮಾನಗೆಟ್ಟವರು ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ತಿರುಗೇಟು ನೀಡಿದ ಅಶೋಕ್, ಸಿಎಂ

ಸಿದ್ದರಾಮಯ್ಯನವರಿಗೆ ಮಾನ ಮರ್ಯಾದೆ ಇದ್ದಿದ್ದರೆ ಯಾಕೆ ಜೆಡಿಎಸ್ ನವರ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ರು?.

ದೇವೇಗೌಡರ ಮನೆ ಮುಂದೆ ಭಿಕ್ಷುಕರಾಗಿ ಹೋಗಿ ನಿಂತಿದ್ದವರು ಯಾರು?. ನೀವು, ವಾಚ್ ಮನ್  ರೀತಿಯಲ್ಲಿ ಗೇಟ್ ನಲ್ಲಿದ್ದವರು. ಜೆಡಿಎಸ್ ನವರು ಪರಮಾತ್ಮರಾಗಿ ಇದ್ದಂತವರು. ಅವರ ಬಳಿ ಭಿಕ್ಷುಕರಾಗಿ ಹೋಗಿದ್ದವರು ನಿಮಗೆ ಮಾನ ಮರ್ಯಾದೆ ಇದೆಯಾ? ಎಂದು ಪ್ರಶ್ನಿಸಿದರು.

ಡಿ.ಕೆ ಸುರೇಶ್ ಕಟುಕ :  ಹೃದಯವಂತ ಬಂದಾಗ ಹೃದಯ ಇಲ್ಲದವರು ಕಾಣಿ ಯಾಗ್ತಾರೆ. ಈ ಚುನಾವಣೆಯಲ್ಲಿ ಕಟುಕರು ಕಾಣಿಯಾಗುತ್ತಾರೆ ಎಂದು ಡಿ.ಕೆ.ಸುರೇಶ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು. 

ರಾಜ್ಯಪಾಲರಿಂದ ಲಾಭದಾಯಕ ಹುದ್ದೆ ವಿಧೇಯಕ ವಾಪಸ್ಸು ವಿಚಾರಕ್ಕೆ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅಶೋಕ್, ಸರ್ಕಾರ ಹಾಗೂ ರಾಜ್ಯಪಾಲರ  ನಡುವೆ ಶೀತಲ ಸಮರ ಅಲ್ಲ. ಇದೊಂದು ಕಾನೂನು ಸಮರ.  ಮಜಾ ಮಾಡುವುಕ್ಕೆ, ಬಿರಿಯಾನಿ ತಿನ್ನಲು, ಲೂಟಿ ಹೊಡೆಯಲೆಂದು  ಈ ರೀತಿ ಹುದ್ದೆಗಳನ್ನು ಸೃಷ್ಟಿಸಲಾಗುತ್ತಿದೆ. ಸರ್ಕಾರದ ಹಣದ ಪೋಲು ಮಾಡ್ತಿದ್ದಾರೆ. ಕೇವಲ ಲೋಕಸಭಾ ಚುನಾವಣೆಗಾಗಿ ಈ ರೀತಿ ಕಾನೂನು ವಿರೋಧಿ ನಿರ್ಣಯ ಮಾಡಿದ್ದಾರೆ. ಅದಕ್ಕಾಗಿ ರಾಜ್ಯಪಾಲರು  ಆ ವಿಧೇಯಕ ವಾಪಸ್ಸು ಕಳುಹಿಸಿದ್ದಾರೆ ಎಂದು ರಾಜ್ಯಪಾಲರ  ನಿರ್ಧಾರವನ್ನು ಸಮರ್ಥನೆ ಮಾಡಿಕೊಂಡರು.

 

ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ವಕ್ತಾರೆ ಮಾಳವಿಕಾ ಅವಿನಾಶ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top