ಮಾನ ಮರ್ಯಾದೆ ಬಿಟ್ಟು ಸಿಎಂ ಸಿದ್ದರಾಮಯ್ಯ ಅವರು ಶ್ರೀನಿವಾಸ ಪ್ರಸಾದ್ ಅವರ ಮನೆಗೆ ಹೋಗಿದ್ದಾರೆ ಎಂದು ಪ್ರತಿಪಕ್ಷದ ನಾಯಕ ಆರ್.‌ಅಶೋಕ್

ಬೆಂಗಳೂರು : ಮಾನ ಮರ್ಯಾದೆ ಬಿಟ್ಟು ಸಿಎಂ ಸಿದ್ದರಾಮಯ್ಯ ಅವರು ಶ್ರೀನಿವಾಸ ಪ್ರಸಾದ್ ಅವರ ಮನೆಗೆ ಹೋಗಿದ್ದಾರೆ ಎಂದು ಪ್ರತಿಪಕ್ಷದ ನಾಯಕ ಆರ್.‌ಅಶೋಕ್ ಟೀಕಿಸಿದ್ದಾರೆ.

ಮಲ್ಲೇಶ್ವರ ಮಾಧ್ಯಮ ಕೇಂದ್ರದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮಾನ ಮರ್ಯಾದೆ, ಗೌರವ ಇದ್ದಿದ್ದರೆ ಒಬ್ಬ ಸಿಎಂ ಆಗಿ ಹೋಗಬಾರದಾಗಿತ್ತು ಎಂದರು.

 

ಶ್ರೀನಿವಾಸ ಪ್ರಸಾದ್ ಅವರು  ಇವತ್ತಿಗೂ ಬಿಜೆಪಿ ಸಂಸದರು. 

ಸಿದ್ದರಾಮಯ್ಯ ಮತ್ತು ಶ್ರೀನಿವಾಸ ಪ್ರಸಾದ್ ಪರಸ್ಪರ ಕೆಟ್ಟದಾಗಿ ಬೈದಾಡಿಕೊಂಡಿದ್ದವರು. ಸಿದ್ದರಾಮಯ್ಯ ವಂಚಕ, ದ್ರೋಹಿ ಅಂತ ಕೆಟ್ಟದಾಗಿಯೇ‌ ಶ್ರೀನಿವಾಸ ಪ್ರಸಾದ್ ಮಾತಾಡಿದ್ರು. ಸಿದ್ದರಾಮಯ್ಯ ಅವರು ಶ್ರೀನಿವಾಸ್ ಪ್ರಸಾದ್ ಅವರ  ಮನೆಗೆ ಹೋಗಿದ್ದಾರೆಯೇ ಹೊರತು  ಶ್ರೀನಿವಾಸ್ ಪ್ರಸಾದ್  ಅವರು ಸಿದ್ದರಾಮಯ್ಯ ಮನೆಗೆ ಹೋಗಿಲ್ಲ ಎಂದು ಹೇಳಿದರು.

ಮರ್ಯಾದೆ ಬಿಟ್ಟು ಸಿದ್ದರಾಮಯ್ಯ ಹೋಗಿದ್ದಾರೆ. ಇಷ್ಟೆಲ್ಲ ಬೈಸಿಕೊಂಡು ಶ್ರೀನಿವಾಸ ಪ್ರಸಾದ್ ಮನೆಗೆ ಹೋಗಿದ್ದಾರೆ

ಓಟಿಗೋಸ್ಕರ‌ ಮರ್ಯಾದೆ ಕಳೆದುಕೊಂಡು ಇರುತ್ತೇನೆಂದರೆ ಅದು  ಸಿದ್ದರಾಮಯ್ಯ ಅವರು ಮಾತ್ರ. ಸಿದ್ದರಾಮಯ್ಯ ಪಕ್ಷದಿಂದ ಪಕ್ಷಕ್ಕೆ ಜಂಪ್‌ ಮಾಡುವವರು.  ಶ್ರೀನಿವಾಸ್ ಪ್ರಸಾದ್ ಅವರ ಅಳಿಯ ಹರ್ಷವರ್ಧನ್ ನಮ್ಮ ಪಕ್ಷದಲ್ಲಿ ಇದ್ದಾರೆ. ಸಿಎಂ ಸಿದ್ದರಾಮಯ್ಯ ಅವರಿಗೆ ಮೈಸೂರು, ಚಾಮರಾಜನಗರದಲ್ಲಿ ಗೆಲ್ಲುವ ವಿಶ್ವಾಸ ಇಲ್ಲ. ಸೋಲಿನ ಭಯದಿಂದಲೇ ಶ್ರೀನಿವಾಸ ಪ್ರಸಾದ್ ಮನೆಗೆ ಹೋಗಿದ್ದಾರೆ ಎಂದು ಟೀಕಿಸಿದರು.

 

ಶ್ರೀನಿವಾಸ್ ಪ್ರಸಾದ್ ಅವರಿಗೆ ನಮ್ಮ ಮೈಸೂರು ಜಿಲ್ಲಾ ಘಟಕ ನಾಳೆ ಸಮಾವೇಶ ಕ್ಕೆ ಆಹ್ವಾನಿಸಿರಬಹುದು. ಅದರ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top