ಸುವರ್ಣ ಮಹೋತ್ಸವದ ಹೊಸ್ತಿಲಲ್ಲಿ ಶ್ರೀ ಸುಬ್ರಮಣ್ಯೇಶ್ವರ ಕೋ ಅಪರೇಟಿವ್‌ ಬ್ಯಾಂಕ್‌

2023 – 24 ನೇ ಸಾಲಿನಲ್ಲಿ 11.92 ಕೋಟಿ ವ್ಯವಹಾರಿಕ ಲಾಭ, 8.92 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಕ

ಬೆಂಗಳೂರು : ಸುವರ್ಣ ಮಹೋತ್ಸವದ ಹೊಸ್ತಿಲಲ್ಲಿರುವ ಶ್ರೀ ಸುಬ್ರಮಣ್ಯೇಶ್ವರ ಕೋ ಅಪರೇಟಿವ್‌ ಬ್ಯಾಂಕ್‌ ಲಿಮಿಟೆಡ್‌ 2023 – 24 ನೇ ಸಾಲಿನಲ್ಲಿ 11.92 ಕೋಟಿ ವ್ಯವಹಾರಿಕ ಲಾಭ ಮತ್ತು 8.92 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿದೆ.

 

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಶ್ರೀ ಸುಬ್ರಮಣ್ಯೇಶ್ವರ ಕೋ ಅಪರೇಟಿವ್‌ ಬ್ಯಾಂಕ್‌ ಅಧ್ಯಕ್ಷ ಡಾ. ಕೆ.ಎಂ. ರಂಗಧಾಮ ಶೆಟ್ಟಿ, ಸಹಕಾರಿ ವ್ಯವಸ್ಥೆಯ ಬ್ಯಾಂಕ್‌ ನಲ್ಲಿ ಸದಸ್ಯರ ಹಿತ ರಕ್ಷಣೆಗೆ ಒತ್ತು ನೀಡಲಾಗಿದೆ. ಇದು ಬ್ಯಾಂಕ್‌ ನ ಚರಿತ್ರೆಯಲ್ಲಿ ಅತ್ಯಂತ ಹೆಚ್ಚಿನ ಲಾಭ ಗಳಿಕೆಯಾಗಿದೆ ಎಂದು ಹೇಳಿದರು. 

ಬ್ಯಾಂಕ್‌ ಪ್ರಸ್ತುತ ಶೇ 3ರಷ್ಟು ನಿವ್ವಳ ಅನುತ್ಪಾದಕ ಆಸ್ತಿ ಹೊಂದಿದ್ದು, ಸುವರ್ಣ ಮಹೊತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ಸಹಕಾರಿ ತತ್ವಗಳಿಗೆ ಅನುಗುಣವಾಗಿ ಬ್ಯಾಂಕ್‌ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.

 

ಸುದ್ದಿಗೋಷ್ಠಿಯಲ್ಲಿ  ಬ್ಯಾಂಕ್‌ ಉಪಾಧ್ಯಕ್ಷರಾದ ಡಿ.ಅರ್‌. ವಿಜಯ ಸಾರಥಿ ರವರು ಉಪಸ್ಥಿತರಿದ್ದರು.

Facebook
Twitter
LinkedIn
WhatsApp
Email
Print
Telegram

Leave a Comment

Your email address will not be published. Required fields are marked *

Translate »
Scroll to Top