ಮಾನ್ವಿ,ಫೆ,27 : ತಾಲ್ಲೂಕಿನ ತಡಕಲ್ ಕಿರಿಯ ಆರೋಗ್ಯ ಕೇಂದ್ರದಲ್ಲಿ ಇಂದು ೦ ದಿಂದ ೫ ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪಲ್ಸ್ ಪೋಲಿಯೊ ಲಸಿಕೆ ಹಾಕಿಸಿಕೊಳ್ಲಿ ಎಂದು ಪೋತ್ನಾಳ್ ವಿಧ್ಯಾಭಾರತಿ ಮುಖ್ಯ ಗುರುಗಳಾದ ನಾಗರಾಜ್ ಚಾಮ್ ರಾಜ್ ನಗರ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಪೋತ್ನಾಳ್ ಪಟ್ಟಣದ ಸಮೀಪದಲ್ಲಿರುವ ತಡಕಲ್ ಆರೋಗ್ಯ ಕೇಂದ್ರದಲ್ಲಿ ನಡಯುತ್ತಿರುವ ಪಲ್ಸ್ ಪೋಲಿಯೊ ಕಾರ್ಯಕ್ರಮದಲ್ಲಿ ಎಲ್ಲಾ ಮಕ್ಕಳಿಗೆ ಪೋಲಿಯೊವನ್ನು ಹಾಕಿಸಿ, ಬೇರೆ ಬೇರೆ ರೋಗಗಳಿಗೆ ಮಕ್ಕಳು ತುತ್ತಾಗಬಾರದೆಂದು,ಹಾಗೂ ಬೇರೆ ನ್ಯೂನತೆಗಳು ಕಾಣುವ ಮುಂಚೆ ಪಲ್ಸ್ ಪೋಲಿಯೊ ಹಾಕಿಸಿ ಎಂದು ಸರಕಾರ ಹೇಳಿದೆ ಆದ್ದರಿಂದ ಮಕ್ಕಳಿಗೆ ಪೋಲಿಯೋ ಹಾಕಿಸೋದನ್ನು ಯಾರು ತಪ್ಪಿಸಬಾರದು ಎಂದು ಪೋತ್ನಾಳ್ ವಿಧ್ಯಾಭಾರತಿ ಶಿಕ್ಷಣ ಸಂಸ್ಥೆಯ ಮುಖ್ಯ ಗುರುಗಳಾದ ನಾಗರಾಜ್ ಚಾಮ್ ರಾಜ್ ನಗರ ರವರು ಹೇಳಿದರು.
ಸರಕಾರ ಯಾವುದೇ ಕಡು-ಬಡತನ ಎನ್ನುವುದನ್ನು ವಿಚಾರ ಮಾಡದೇ ಎಲ್ಲಾ ಮಕ್ಖಳಿಗೆ ಪೋಲಿಯೊ ಹಾಕಿಸಬೇಕು ಎಂದು ಸರಕಾರ ಹೇಳಿದೆ. ಆದ್ದರಿಂದ ಎಲ್ಲಾ ಮಕ್ಕಳು ಪೋಲಿಯೊ ಹಾಕಿಸಿ ಎಂದು ಜನರಿಗೆ ಕರೆಕೊಟ್ಟರು. ಈ ಸಂದರ್ಭದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಿಬ್ಬಂದಿಗಳು, ಆಸ್ಪತ್ರೆಯ ಸಿಬ್ಬಂದಿಗಳಾದ ನಿರ್ಮಲಾ ಸಿಸ್ಟರ್, ಹಾಗೂ ನಾಗರತ್ನ ಸಿಸ್ಟರ್, ಮತ್ತು ಅಂಗನವಾಡಿಯ ಸಿಬ್ಬಂದಿಯಾದ ಸಾವಿತ್ರಮ್ಮ ಹಾಗೂ ಆಶಾ ಕಾರ್ಯಕರ್ತರಾದ ಗಿರಿಜಮ್ಮ ಸೇರಿದಂತೆ ಅನೇಕರು ಇದ್ದರು.