ಯುಕ್ರೇನ್ ನಿಂದ ದಾವಣಗೆರೆಯ 3 ವಿದ್ಯಾರ್ಥಿಗಳು ಸುರಕ್ಷಿತ ವಾಪಾಸು

ದಾವಣಗೆರೆ.ಫೆ.27; ಯುದ್ಧ ಪೀಡಿತ ಯುಕ್ರೇನ್ ದೇಶದಿಂದ ದಾವಣಗೆರೆ ಜಿಲ್ಲೆಯ ಮೂವರು ವಿದ್ಯಾರ್ಥಿಗಳು ಸುರಕ್ಷಿತವಾಗಿ ಜಿಲ್ಲೆಗೆ ವಾಪಾಸಾಗಿದ್ದಾರೆ. ಕೇಂದ್ರ ಸರ್ಕಾರ ವ್ಯವಸ್ಥೆ ಮಾಡಿದ್ದ ಮೊದಲ ವಿಮಾನದಲ್ಲಿ ದಾವಣಗೆರೆ ಭಗತ್ ಸಿಂಗ್ ನಗರದ ಮೊಹಮದ್ ಅಬಿದ್ ಅಲಿ , ವಿದ್ಯಾನಗರದ ಸೈಯಿದ್ ಹಬೀಬ ಮತ್ತು ಎರಡನೇ ವಿಮಾನದಲ್ಲಿ ಹೊನ್ನಾಳಿ ತಾಲೂಕಿನ ಕುಂದೂರು ಗ್ರಾಮದ ಪ್ರಿಯಾ ಅವರುಗಳು ಸುರಕ್ಷಿತವಾಗಿ ತಮ್ಮ ಊರುಗಳಿಗೆ ಮರಳಿದ್ದಾರೆ. ತಮ್ಮ ಮಕ್ಕಳನ್ನು ಸುರಕ್ಷಿತವಾಗಿ ದೇಶಕ್ಕೆ ವಾಪಾಸು ಕರೆತಂದ ಕೇಂದ್ರ ಸರ್ಕಾರದ ಕಾರ್ಯಕ್ಕೆ ವಿದ್ಯಾರ್ಥಿಗಳ ಪೋಷಕರು ಕೃತಜ್ಞತೆ ಸಲ್ಲಿಸಿದ್ದಾರೆ.

ಪೊಲಿಯೋ ಆಂದೋಲನಕ್ಕೆ ಚಾಲನೆ : ದಾವಣಗೆರೆ ಜಿಲ್ಲೆಯಲ್ಲಿಂದು ಪಲ್ಸ್ ಪೋಲಿಯೊ ಆಂದೋಲನಕ್ಕೆ ಚಾಲನೆ ದೊರೆಯಿತು. ಸಂಸದ ಜಿ.ಎಂ.ಸಿದ್ದೇಶ್ವರ್, ದಾವಣಗೆರೆ ಉತ್ತರ ಕ್ಚೇತ್ರದ ಶಾಸಕ ಎಸ್.ಎ.ರವೀಂದ್ರನಾಥ್,‌ದಕ್ಷಿಣ ಕ್ಷೇತ್ರದ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ನಗರದ ವಿವಿಧ ಕಡೆಗಳಲ್ಲಿ ಮಕ್ಕಳಿಗೆ‌ ಹನಿ ಹಾಕುವ ಮೂಲಕ ಆಂದೋಲನಕ್ಕೆ ಚಾಲನೆ ನೀಡಿದರು.

Leave a Comment

Your email address will not be published. Required fields are marked *

Translate »
Scroll to Top