ಬೆಂಗಳೂರು : ವಿಶ್ವ ಅಂಗಾಂಗದಾನ ದಿನದ ಅಂಗವಾಗಿ ರಾಜಾಜಿನಗರದ ಇಎಸ್ಐಸಿ ಆಸ್ಪತ್ರೆಯಲ್ಲಿ ಅಂಗಾಂಗ ದಾನದ ಮಹತ್ವ ಮತ್ತು ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸಲು ಕಾರ್ಯಕ್ರಮ ಆಯೋಜಿಸಲಾಗಿತ್ತು.
ಇಎಸ್ಐಸಿ ಡೀನ್ ಡಾ. ಸಂಧ್ಯಾ ಆರ್, ವೈದ್ಯಕೀಯ ಅಧೀಕ್ಷಕರು ಡಾ.ಅಶೋಕ್ ಕುಮಾರ್ ಸಮಂತಾ, ಚರ್ಮರೋಗ ವಿಭಾಗದ ಮುಖ್ಯಸ್ಥರು ಡಾ.ಗಿರೀಶ್ ಎಂ.ಎಸ್, ಅಂಗರಚನಾಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಸೀಮಾ, ಪ್ರೊಫೆಸರ್ ಡಾ.ಮಲ್ಲಿಕಾರ್ಜುನ್ ಮತ್ತಿತರರು ಉಪಸ್ಥಿತರಿದ್ದರು.
ಇಎಸ್ಐಸಿ ವಿದ್ಯಾರ್ಥಿಗಳು, ರೋಗಿಗಳಿಗೆ ಮತ್ತು ಸಾರ್ವಜನಿಕರಿಗೆ ಅಂಗಾಂಗ ದಾನದ ಮಹತ್ವದ ಕುರಿತು ಅರಿವು ಮೂಡಿಸುವ ಕುರಿತಂತೆ ಕಿರು ನಾಟಕವನ್ನು ಪ್ರದರ್ಶಿಸಿದರು. ಒಬ್ಬ ವ್ಯಕ್ತಿ ನಿಧನದ ನಂತರ ಮೆದುಳು, ಹೃದಯ, ಮೂತ್ರಪಿಂಡ, ಯಕೃತ್ ಮತ್ತು ಹಲವಾರು ಅಂಗಾಂಗ ದಾನ ಮಾಡಿದರೆ ಮತ್ತೊಬ್ಬ ರೋಗಿಯ ಜೀವನದಲ್ಲಿ ಹೇಗೆ ಆಶಾಕಿರಣವಾಗುತ್ತಾರೆ ಎಂಬುದನ್ನು ಕಿರು ನಾಟಕದ ಮೂಲಕ ಜನರನ್ನು ತಲುಪಿದರು.
Facebook
Twitter
LinkedIn
WhatsApp
Email
Print
Telegram