ಕುಷ್ಟಗಿ:- ಪಟ್ಟಣದ ಆರಾಧ್ಯ ದೈವ ಎಂದು ಎನಿಸಿಕೊಂಡಿರುವ ನಾಯಕವಾಡಿ ಓಣಿಯ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಹಾಗೂ ಶ್ರೀ ಇಟಗಿ ಭೀಮಾಂಬಿಕಾ ದೇವಿ ದೇವಸ್ಥಾನದ ಮತ್ತು ಶ್ರೀ ರಾಮ ಲಿಂಗೇಶ್ವರ ದೇವಸ್ಥಾನದ ಕುಂಭ, ಕಳಸ, ಹಾಗೂ ಬಾವ ಚಿತ್ರ ಮೆರವಣಿಗೆ ಕಾರ್ಯಕ್ರಮ ಶಿವರಾತ್ರಿ ನಿಮಿತ್ಯ ನೆಡೆಯಿತು. ಪ್ರತಿವರ್ಷದಂತೆ ಈ ವರ್ಷವು ಕೂಡ ಡೊಳ್ಳು ಕುಣಿತ, ಬಾಜಾ ಭಜೇಂತ್ರಿ, ಕರಡಿ ಮಜಲು, ತಾಳಕ್ಕೆ ತಕ್ಕಂತೆ ಕುಣಿಯುವ ಕುದುರೆ ಸವಾರಿ ಸೇರಿದಂತೆ ಹಲವಾರು ವ್ಯಾಧ್ಯಗಳೊಂದಿಗೆ ವಿವಿಧ ವೃತ್ತಗಳಲ್ಲಿ ಹಾಗೂ ಸರ್ಕಲ್ ನಲ್ಲಿ ಸಂಚರಿಸಿ ದೇವಸ್ಥಾನದ ವರಗೆ ಮೆರವಣಿಗೆಯನ್ನು ಕರೆತರಲಾಯಿತು.

ಈ ಸಂದರ್ಭದಲ್ಲಿ ಅನ್ನಸಂತಪರ್ಣೆ ಕಾರ್ಯಕ್ರಮ ಮತ್ತು ಶ್ರೀ ಇಟಗಿ ಭೀಮಾಂಬಿಕ ದೇವಸ್ಥಾನದಲ್ಲಿ ಉಚಿತ ಸಾಮೂಹಿಕ ಕಾರ್ಯಕ್ರಮಗಳು ನೆಡೆದವು.
ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ, ಹಾಗೂ ಮಾಜಿ ಶಾಸಕ ಹಾಗೂ ಕೊಪ್ಪಳ ಜಿಲ್ಲಾ ಬಿಜೆಪಿ ಅಧ್ಯಕ್ಷ ದೊಡ್ಡನಗೌಡ ಪಾಟೀಲ, ಕೆ.ಶರಣಪ್ಪ ವಕೀಲರು ಬೇಟಿ ನೀಡಿ ವಧುವರರಿಗೆ ಶುಭ ಆರಿಸಿದರು.