‘ರಣಹದ್ದು’ ಸ್ಯಾಂಡಲ್ ವುಡ್ ನಲ್ಲಿ ರಿಲೀಸ್ ಗೆ ಸಜ್ಜಾಗುತ್ತಿರುವ ಮತ್ತೊಂದು ಹೊಸಬರ ಸಿನಿಮಾ. ತಮಿಳು ನಿರ್ದೇಶಕ ಮಾಣಿಕ್ಯ ಜೈ ಸಾರಥ್ಯದಲ್ಲಿ ಮೂಡಿಬಂದಿರುವ ‘ರಣಹದ್ದು’ ಚಿತ್ರದ ಫಸ್ಟ್ ಲುಕ್ ನ ಸ್ಯಾಂಡಲ್ ವುಡ್ ನಟಿ ಜಂಬದ ಹುಡುಗಿ ಖ್ಯಾತಿಯ ಪ್ರಿಯ ಹಾಸನ್ ಹಾಗೂ ನಿರ್ಮಾಪಕ ಟೇಶಿವೆಂಕಟೇಶ್ ರಿಲೀಸ್ ಮಾಡಿ ಶುಭ ಹಾರೈಸಿದ್ದಾರೆ.
ಬಹುತೇಕ ಹೊಸಬರೇ ನಟಿಸಿರುವ ‘ರಣಹದ್ದು’ ಚಿತ್ರದ ಫಸ್ಟ್ ಲುಕ್ ನ ರಾಕಿಂಗ್ ಸ್ಟಾರ್ ಯಶ್ ಅವರ ಫಸ್ಟ್ ಹೀರೋಯಿನ್ ಪ್ರಿಯಾ ಹಾಸನ್ ಬಿಡುಗಡೆ ಮಾಡಿದ್ದು ವಿಶೇಷವಾಗಿತ್ತು.

ಮಾಣಿಕ್ಯ ಜೈ ನಿರ್ದೇಶನದ ಜೊತೆಗೆ ‘ರಣಹದ್ದು’ ಸಿನಿಮಾದಲ್ಲಿ ನಟಿಸಿದ್ದಾರೆ ಕೂಡ. ಅವರು ಈಗಾಗಲೇ ತಮಿಳಿನಲ್ಲಿ 2 ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ‘ರಣಹದ್ದು’ ಕನ್ನಡದ ಮೊದಲ ಸಿನಿಮಾವಾಗಿದೆ. ಇದೀಗ ರಣಹದ್ದು ಚಿತ್ರದ ಫಸ್ಟ್ ಲುಕ್ ಮೂಲಕ ಕನ್ನಡ ಅಭಿಮಾನಿಗಳ ಮುಂದೆ ಬಂದಿದ್ದಾರೆ.
ರಣಹದ್ದು ಮೊಬೈಲ್ ಫೋನ್ ನಿಂದ ಆಗುವ ಮೋಸ, ವಂಚನೆ ಬಗ್ಗೆ ಇರುವ ಸಿನಿಮಾವಾಗಿದೆ. ನೈಜ ಘಟನೆಗಳನ್ನು ಆಧರಿಸಿ ಈ ಸಿನಿಮಾ ಮಾಡಲಾಗಿದೆ. ಪಕ್ಕಾ ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು ಫಸ್ಟ್ ಲುಕ್ ಮೂಲಕ ಕುತೂಹಲ ಮೂಡಿಸಿ ಗಮನ ಸೆಳೆಯುತ್ತಿದೆ.

ಸಿನಿಮಾದ ಮುಖ್ಯ ಪಾತ್ರಗಳಲ್ಲಿ ಮಾಣಿಕ್ಯ ಜೈ ಜೊತೆಗೆ ರಂಜಿತ್, ಯತೀಶ್ ಮತ್ತು ನಾಯಕಿಯಾಗಿ ಸೌಮ್ಯ ನಟಿಸಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಕೊನೆಯ ಹಂತದಲ್ಲಿದೆ. ಸದ್ಯದಲ್ಲೆ ಚಿತ್ರೀಕರಣ ಪೂರ್ಣಗೊಳಿಸಿ ನವೆಂಬರ್ ತಿಂಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಸರಸ್ವತಿ ಹಾಗೂ ಜೈ ಜಂಟಿಯಾಗಿ ಸಿನಿಮಾ ನಿರ್ಮಾಣ ಮಾಡಿದ್ದು ತಾಜ್ ಸಿನಿಮಾಗೆ ಸಂಗೀತ ನೀಡಿದ್ದು ಜೀವನ್ ಕ್ಯಾಮೆರ ವರ್ಕ್ ಮಾಡಿದ್ದಾರೆ. .